ಸುವರ್ಣನ್ಯೂಸ್'ನೊಂದಿಗೆ ಮಾತನಾಡಿದ ರಿಯೋ ಪದಕ ವಿಜೇತರು, ಇಲ್ಲಿದೆ ಎಕ್ಸ್'ಕ್ಲೂಸಿವ್ ವಿಡಿಯೋ...!

Published : Sep 10, 2016, 09:55 AM ISTUpdated : Apr 11, 2018, 12:35 PM IST
ಸುವರ್ಣನ್ಯೂಸ್'ನೊಂದಿಗೆ ಮಾತನಾಡಿದ ರಿಯೋ ಪದಕ ವಿಜೇತರು, ಇಲ್ಲಿದೆ ಎಕ್ಸ್'ಕ್ಲೂಸಿವ್ ವಿಡಿಯೋ...!

ಸಾರಾಂಶ

ರಿಯೋ ಡಿ ಜನೈರೋ(ಸೆ.10): ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಶನಿವಾರ ಐತಿಹಾಸಿಕ ದಿನ. ಒಂದೇ ದಿನ ತಲಾ ೧ ಚಿನ್ನ ಹಾಗೂ ಕಂಚಿನ ಪದಕದ ಸಾಧನೆ ಮಾಡಿದ ಭಾರತೀಯ ಅಥ್ಲೀಟ್ ಗಳು ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ.

ಪ್ಯಾರಾಲಿಂಪಿಕ್ಸ್​ನಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ ಸುವರ್ಣ ನ್ಯೂಸ್​ ಜೊತೆ ಮಾತನಾಡಿದ್ದಾರೆ. 

ಮರಿಯಪ್ಪನ್ ತಂಗವೇಲು ಪುರುಷರ ಟಿ-೪೨ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು.

ತಂಗವೇಲು ಸೇಲಂನಿಂದ ೫೦ ಕಿ.ಮೀ. ದೂರದ ಕುಗ್ರಾಮದಿಂದ ಈ ಎತ್ತರ ತಲುಪಿದ್ದಾರೆ. ೫ ವರ್ಷದ ಬಾಲಕನಾಗಿದ್ದ ತಂಗವೇಲು ಶಾಲೆಗೆ ಹೋಗುತ್ತಿದ್ದಾಗ ಬಸ್ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ಗುರಿಯಾಗಿದ್ದರು.

ಇದೇ ವಿಭಾಗದಲ್ಲಿ ವರುಣ್ ಸಿಂಗ್ ಭಾಟಿ ಕಂಚಿನ ಪದಕದ ಸಾಧನೆ ಮಾಡಿದರು. ಇದರೊಂದಿಗೆ ಒಂದೇ ವಿಭಾಗ ದಲ್ಲಿ ಇಬ್ಬರು ಭಾರತೀಯರು ಪದಕ ಸಾಧನೆ ಮಾಡಿದ ಮತ್ತೊಂದು ಐತಿಹಾಸಿಕ ಸಾಧನೆಗೆ ರಿಯೊ ಸಾಕ್ಷಿಯಾಯಿತು.

ಪ್ಯಾರಾಲಿಂಪಿಕ್ಸ್​ನಲ್ಲಿ ಹೈಜಂಪ್ ವಿಭಾಗದಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ವರುಣ್ ಸಿಂಗ್ ಭಾಟಿ ಸುವರ್ಣ ನ್ಯೂಸ್​ ಜೊತೆ ಮಾತನಾಡಿದ್ದಾರೆ. 

ಕನ್ನಡಿಗ ಕೋಚ್ ಸತ್ಯನಾರಾಯಣ್​ ಗರಡಿಯಲ್ಲಿ ಇವರಿಬ್ಬರು ಅಭ್ಯಾಸ ನಡೆಸಿದ್ದರು. ರಿಯೋದಿಂದ ಸುವರ್ಣ ನ್ಯೂಸ್​ಗೆ ಸತ್ಯನಾರಾಯಣ್ ಧನ್ಯವಾದ ಸಲ್ಲಿಸಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!