
ಹೈದರಾಬಾದ್ (ನ.23): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ನ.28 ರಿಂದ 30 ವರೆಗೆ 3 ದಿವಸ ಭೇಟಿ ನೀಡುತ್ತಿದ್ದಾರೆ. ಆದರೆ ಇದರಿಂದ ಭಿಕ್ಷುಕರಿಗೆ ತಲೆನೋವಾಗಿ ಪರಿಣಿಮಿಸಿದೆ ಅಂತಾನೇ ಹೇಳಬಹುದು. ಯಾಕಂದ್ರೆ ಟ್ರಂಪ್ ಪುತ್ರಿ ಬರುವ ವೇಳೆ ಯಾವ ಭಿಕ್ಷುಕರು ಕಾಣಿಸಬಾರದು ಎಂದು 1000ಕ್ಕೂ ಹೆಚ್ಚು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.
ಆದರೆ ಇನ್ನೂ ಭಿಕ್ಷೆ ಬೇಡುವುದು ನಿಷೇಧ, ಈ ಹಿನ್ನೆಲೆ ನಗರದ ಕೆಲವು ದರ್ಗಾ, ಮಸೀದಿ, ದೇವಾಲಯ ಸುತ್ತ ಇರುವ ಭಿಕ್ಷುಕರನ್ನು ಮರುವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ನೆಪ ಹೇಳಿದ್ದಾರೆ. ಇನ್ನೂ ಇಂತಹ ಸಂದಂರ್ಭದಲ್ಲಿ ಇಬ್ಬರು ‘ಶ್ರೀಮಂತ ಭಿಕ್ಷುಕಿ’ಯರ ಕೂತುಹಲಕಾರಿ ಕತೆಗಳು ಬೆಳಕಿಗೆ ಬಂದಿವೆ.ಇನ್ನೂ ಇದೇ ವೇಳೆ ಭಿಕ್ಷುಕರನ್ನು ಅಧಿಕಾರಿಗಳು ವಿಚಾರಿಸಿಕೊಂಡು ಬಂದಾಗ ಇಬ್ಬರು ಇಂಗ್ಲೀಷ್ ಮತಾನಾಡುವ ಭಿಕ್ಷುಕಿಯರು ಪತ್ತೆಯಾಗಿದ್ದಾರೆ. ಫರ್ಜೋನಾಳ ಮತ್ತು ರಬೀಯಾ ಬಶೀರಾ ಭಿಕ್ಷುಕಿಯರು. ಫರ್ಜೋನಾಳ ಈಕೆ 50 ವರ್ಷದ ಫರ್ಜೋನಾ ಎಂಬಿಎ ಪಧವೀದರರು. ಲಂಡನ್ನಲ್ಲಿ ಅಕೌಂಟರ್ ಆಗಿದ್ದರು. ಮಗ ಅಮೇರಿಕಾದಲ್ಲಿದ್ದಾನೆ. ಅಮರ್ ಪೇಟ್ದಲ್ಲಿ ಐಷರಾಮಿ ಅಪಾಟ್ರ್ಮೆಂಟ್ ಇದೆ. ಗಂಡ ತೀರಿ ಹೋದ ಬಳಿಕ ಕುಗ್ಗಿಹೋದ ಫರ್ಜೋನಾಳಿಗೆ ದೇವಮಾನವನ ಸಲಹೇಯಂತೆ ಬಿಕ್ಷಾಟನೆ ಆರಂಭಿಸಿದಳು. 44 ವರ್ಷದ ರಬಿಯಾ ಬಶೀರಾಳ ಬವಣೆ ಏನು ಕಡಿಮೆ ಇಲ್ಲ. ಇಕೆ ಹೈದರಾಬಾದ್ನ ನಿವಾಸಿಯಾದ ಈಕೆ ಇಲ್ಲಿ ಬಾರೀ ಆಸ್ತಿ ಹೊಂದಿದ್ದಾಳೆ. ಅಮೇರಿಕಾದ ಗ್ರೀನ್ಕಾಡ್ರ್ ಹೊಂದಿದ್ದಾಳೆ. ಸೋದರರು ಆಸ್ತಿ ವಿಚಾರದಲ್ಲಿ ಮೋಸ ಮಾಡಿದ ಹಿನ್ನೆಲೆ ಮನನೊಂದ ರಬಿಯಾ, ಬಂಧುಗಳ ಸಲಹೆ ಮೇರೆಗೆ ಮಾನಸಿಕ ನೆಮ್ಮದಿಗಾಗಿ ದರ್ಗಾದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಆದರೆ ಈಗ ಬಂಧುಗಳ ವಶಕ್ಕೆ ವಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.