ಮೃತ್ಯುಂಜಯ ಸ್ವಾಮಿಜಿ ನಮ್ಮ ಹೋರಾಟವನ್ನು ಹೊಳೆಯಲ್ಲಿ ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು:ಎಂ ಬಿ ಪಾಟೀಲ್

Published : Nov 23, 2017, 08:34 AM ISTUpdated : Apr 11, 2018, 01:08 PM IST
ಮೃತ್ಯುಂಜಯ ಸ್ವಾಮಿಜಿ ನಮ್ಮ ಹೋರಾಟವನ್ನು ಹೊಳೆಯಲ್ಲಿ  ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು:ಎಂ ಬಿ ಪಾಟೀಲ್

ಸಾರಾಂಶ

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ತುಂಬಾ ಚೆನ್ನಾಗಿಯೇ ಹೊರಟಿತ್ತು. ಫಸ್ಟ್ ಕ್ಲಾಸ್ ಆಗಿನೇ ನಡೆದಿತ್ತು.  ಆದರೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮಿಜಿ ಬಾಯಿಗೆ ಬಂದಂಗೆ ಮಾತನಾಡಿ ನಮ್ಮ ಹೋರಾಟವನ್ನು ಹೊಳೆಯಲ್ಲಿ  ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು ಎಂದು ನೀರಾವರಿ ಸಚಿವ ಎಂ ಬಿ ಪಾಟೀಲ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿ (ನ.23): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ತುಂಬಾ ಚೆನ್ನಾಗಿಯೇ ಹೊರಟಿತ್ತು. ಫಸ್ಟ್ ಕ್ಲಾಸ್ ಆಗಿನೇ ನಡೆದಿತ್ತು.  ಆದರೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮಿಜಿ ಬಾಯಿಗೆ ಬಂದಂಗೆ ಮಾತನಾಡಿ ನಮ್ಮ ಹೋರಾಟವನ್ನು ಹೊಳೆಯಲ್ಲಿ  ಹುಣಸಿ ಹಣ್ಣು ತೊಳದಂಗ ಮಾಡಿಬಿಟ್ಟರು ಎಂದು ನೀರಾವರಿ ಸಚಿವ ಎಂ ಬಿ ಪಾಟೀಲ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಇದೇ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮಿಜಿ ಒಂದು ತಲೆಗೆ ಹುಟ್ಟಿದವರು ಲಿಂಗಾಯತರು 5 ತಲೆಗೆ ಹುಟ್ಟಿದವರು ಜಂಗಮರು ಎಂದು ಹೇಳುವ ಮೂಲಕ ಭಾರಿ ವಿವಾ ದ ಸೃಷ್ಟಿಸಿದ್ದರು. ಆದರೆ ಆಗ ಅದೇ ಸ್ವಾಮೀಜಿ ಹೇಳಿಕೆ ಬಗ್ಗೆ ಇದೇ ನೀರಾವರಿ ಸಚಿವ ಎಂ ಬಿ ಪಾ ಟೀಲ್ ಸಮರ್ಥಿಸಿಕೊಂಡಿದ್ದರು. ಆದರೆ ನಿನ್ನೆಯಷ್ಟೇ ವಿಜಯಪುರದ ಫ ಗು ಹಳಕಟ್ಟಿ ಭವನದಲ್ಲಿ ನಡೆದ ಲಿಂಗಾಯತ್ ಸಭೆಯಲ್ಲಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಸ್ವಾಮೀಜಿ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಸಚಿವ ಎಂ ಬಿ ಪಾಟೀಲ್ ಮಾತನಾಡಿರುವ ಆಡಿಯೋ ಭಾರಿ ವೈರಲ್ ಆಗಿದ್ದು ಸಚಿವರು ತಮ್ಮ ಸ್ವಾರ್ಥಕ್ಕೆ ಏನೂ ಬೇಕಾದರೂ ಮಾಡುತ್ತಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆಯೋಧ್ಯೆ ತಲುಪಿದ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಶ್ರೀರಾಮ ಕಲಾಚಿತ್ರ
ರಿಷಬ್ ಶೆಟ್ಟಿಯನ್ನೂ ಸೋಲಿಸಿದ ರಣವೀರ್ ಸಿಂಗ್.. 'ಕಾಂತಾರ-1' ಗಳಿಕೆ ಮೀರಿ ಮುಂದಕ್ಕೆ ಹೋದ ಧುರಂಧರ್!