‘ರೇವಣ್ಣ, ಪುಟ್ಟರಾಜು, ಜಮೀರ್ ರಾಜೀನಾಮೆಗೆ ಆಗ್ರಹ’

By Web DeskFirst Published May 25, 2019, 1:54 PM IST
Highlights

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಇದೇ ವೇಳೆ ಚುನಾವಣೆಗೆ ಮೊದಲು ಕೆಲವು ನಾಯಕರು ಆಡಿದ ಮಾತಿನಂತೆ ನಡೆದುಕೊಳ್ಳಿ ಎಂದು ಆಗ್ರಹಿಸಲಾಗಿದೆ.

ಬೆಂಗಳೂರು : ಲೋಕಸಭಾ ಚುನಾವಣೆ ಮುಗಿದಿದೆ. ಬಿಜೆಪಿ ನಾಯಕರು ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ವೇಳೆ ಬಿಜೆಪಿ ಮುಖಂಡರು ಜೆಡಿಎಸ್-ಕಾಂಗ್ರೆಸ್  ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನಿಂಬೆಹಣ್ಣು ರೇವಣ್ಣ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇನ್ನು ಸಚಿವ ಪುಟ್ಟರಾಜು ಹಾಗೂ ಶಾಸಕ ವಾಸು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅವರೆಲ್ಲರೂ ಕೂಡ ನುಡಿದಂತೆ ನಡೆದುಕೊಳ್ಳಲಿ ಎಂದರು. 

ಇನ್ನು ಜಮೀರ್ ಅಹಮದ್ ಕೂಡ ವಾಚ್ ಮನ್ ಆಗುವುದಾಗಿ ಹೇಳಿದ್ದು, ಕೊಟ್ಟ ಮಾತು ತಪ್ಪದಿರಲಿ ಎಂದು ಆರ್. ಅಶೋಕ ವ್ಯಂಗ್ಯವಾಡಿದರು. 

ಇನ್ನು ಕೈ ನಾಯಕ ಸಿದ್ದರಾಮಯ್ಯ ನಿತ್ಯವೂ ಕೂಡ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಏನು ಹೇಳುತ್ತಾರೋ ಅದರ ವಿರುದ್ಧ ಫಲಿತಾಂಶವೇ ಬರುತ್ತದೆ. ಆದ್ದರಿಂದ ಅವರು ಹಾಗೆ ಹೇಳುತ್ತಲೇ ಇರಲಿ ಎಂದರು. 

click me!