ಎಂಜಿನಿಯರಿಂಗ್ ಶಿಕ್ಷಣದಲ್ಲಿ ವೇದ, ತರ್ಕ, ಉಪನಿಷತ್ತು

By Suvarna Web DeskFirst Published Jan 26, 2018, 9:30 AM IST
Highlights

ಎಂಜಿನಿಯರಿಂಗ್ ಶಿಕ್ಷಣಕ್ಕೆ ಪಠ್ಯ ಸಿದ್ಧಪಡಿಸುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ಸಾಲಿಗೆ ಪಠ್ಯ ಪರಿಷ್ಕರಿಸಿದೆ.

ನವದೆಹಲಿ: ಎಂಜಿನಿಯರಿಂಗ್ ಶಿಕ್ಷಣಕ್ಕೆ ಪಠ್ಯ ಸಿದ್ಧಪಡಿಸುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ಸಾಲಿಗೆ ಪಠ್ಯ ಪರಿಷ್ಕರಿಸಿದೆ. ಈ ಪ್ರಕಾರ, ಮುಂದಿನ ವರ್ಷದಿಂದ ಎಂಜಿನಿಯರಿಂಗ್ ಪದವಿಯಲ್ಲಿ ಓದುತ್ತಿರುವವರು ವೇದ, ಪುರಾಣ ಹಾಗೂ ತರ್ಕಶಾಸ್ತ್ರವನ್ನೂ ಕಲಿಯಬೇಕಾಗುತ್ತದೆ. ಇದರ ಜತೆಗೆ ಸಂವಿಧಾನ ಹಾಗೂ ಪರಿಸರ ಶಿಕ್ಷಣ ಕೋರ್ಸುಗಳನ್ನೂ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ.

‘ಮುಂಬರುವ ಶಿಕ್ಷಣ ವರ್ಷದಿಂದಲೇ ಹೊಸ ಪಠ್ಯ ಜಾರಿಗೊಳಿಸಲಾಗುತ್ತದೆ’ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಎಂಜಿನಿಯರಿಂಗ್ ಸೇರಿಕೊಂಡ ಕೂಡಲೇ ವಿದ್ಯಾರ್ಥಿಗೆ ವೇದ, ಉಪನಿಷತ್ತಿನಂಥ ಮೂಲ ಚಿಂತನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಅಗತ್ಯ ಇರುವ ಭಾಷಾ ಕೌಶಲ್ಯವನ್ನೂ ಕಲಿಸಲಾಗುತ್ತದೆ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಹೇಳಿದ್ದಾರೆ.

click me!