ತಾಜ್'ಮಹಲ್ ಕನಸು ಕೈಬಿಟ್ಟು ಹೆಣ್ಣುಮಕ್ಕಳ ಶಾಲೆಗೆ ಅಮರಪ್ರೇಮಿ ನೆರವು

Published : Jun 25, 2017, 01:44 PM ISTUpdated : Apr 11, 2018, 12:38 PM IST
ತಾಜ್'ಮಹಲ್ ಕನಸು ಕೈಬಿಟ್ಟು ಹೆಣ್ಣುಮಕ್ಕಳ ಶಾಲೆಗೆ ಅಮರಪ್ರೇಮಿ ನೆರವು

ಸಾರಾಂಶ

ಇವರ ಹೆಸರು ಫೈಜುಲ್‌ ಖಾದ್ರಿ. ಅವರದ್ದು ಸುಖಮಯ ಜೀವನ. ಆದರೆ 2011ರಲ್ಲಿ ಪತ್ನಿ ತಾಜಾ​ಮುಲಿ ಬೇಗಂ ನಿಧನರಾದಾಗ, ಫೈಜುಲ್‌ ನೊಂದಿ​ದ್ದರು. ಹೀಗಾಗಿಯೇ ಪತ್ನಿಯ ಸನಿನೆನಪಿಗಾಗಿ ಆಗ್ರಾದಲ್ಲಿ ಶಹಜಹಾನ್‌ ತಾಜ್‌ಮಹಲ್‌ ಕಟ್ಟಿದಂತೆ ತಾವೂ, ಪತ್ನಿಯ ಹೆಸರಲ್ಲಿ ತಾಜ್‌ಮಹಲ್‌ ಕಟ್ಟಲು ನಿರ್ಧರಿಸಿದರು. 

ಲಖನೌ(ಜೂ.25): ಇವರ ಹೆಸರು ಫೈಜುಲ್‌ ಖಾದ್ರಿ. ಅವರದ್ದು ಸುಖಮಯ ಜೀವನ. ಆದರೆ 2011ರಲ್ಲಿ ಪತ್ನಿ ತಾಜಾ​ಮುಲಿ ಬೇಗಂ ನಿಧನರಾದಾಗ, ಫೈಜುಲ್‌ ನೊಂದಿ​ದ್ದರು. ಹೀಗಾಗಿಯೇ ಪತ್ನಿಯ ಸನಿನೆನಪಿಗಾಗಿ ಆಗ್ರಾದಲ್ಲಿ ಶಹಜಹಾನ್‌ ತಾಜ್‌ಮಹಲ್‌ ಕಟ್ಟಿದಂತೆ ತಾವೂ, ಪತ್ನಿಯ ಹೆಸರಲ್ಲಿ ತಾಜ್‌ಮಹಲ್‌ ಕಟ್ಟಲು ನಿರ್ಧರಿಸಿದರು. 

ಅದರಂತೆ ತಾಜಮಹಲ್‌ ನಿರ್ಮಾಣ ಕಾರ್ಯವೂ ಆರಂಭವಾಯಿತು. ಆದರೆ ಪೋಸ್ಟ್‌ಮಾಸ್ಟರ್‌ ಹುದ್ದೆ​ಯಿಂದ ನಿವೃತ್ತಿಯಾಗಿದ್ದ ವೇಳೆ ಫೈಜುಲ್‌ಗೆ ಹೆಚ್ಚಿನ ಹಣವೇನೂ ಸಿಕ್ಕಿರಲಿಲ್ಲ. ಬಂದಷ್ಟು ಹಣವನ್ನು ತಾಜ​ಮಹಲ್‌ಗೆ ವ್ಯಯಿಸಿದರು. ಆದರೆ ಆ ಹಣ ಯಾವುದಕ್ಕೂ ಸಾಲಲಿಲ್ಲ. ಇವರ ಈ ಪ್ರೇಮಕಥೆ ಕೆಲ ವರ್ಷಗಳ ಹಿಂದೆ ಅಂದಿನ ಉತ್ತರಪ್ರದೇಶ ಸಿಎಂ ಅಖಿಲೇಶ್‌ಸಿಂಗ್‌ ಯಾದವ್‌ ಕಿವಿಗೆ ಬಿತ್ತು. ಅವರು ಧನ ಸಹಾಯಕ್ಕೆ ಮುಂ​ದಾದರು. ಆದರೆ ಪರರ ಹಣದಲ್ಲಿ ಪ್ರೀತಿಯ ಸ್ಮಾರಕ ನಿರ್ಮಾಣಕ್ಕೆ ಒಪ್ಪದ ಫೈಜುಲ್‌, ತಮಗೆ ಬರುವ ಪಿಂಚಣಿ ಹಣದಲ್ಲೇ ಕಟ್ಟುವ ನಿರ್ಧಾರಕ್ಕೆ ಬದ್ಧರಾದರು.

ಆದರೆ ಸಿಎಂಗೆ ಹಣ ನೀಡುವ ಬದಲು ತಮ್ಮ ಹಳ್ಳಿಗೊಂಡು ಹೆಣ್ಣುಮಕ್ಕಳ ಶಾಲೆ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿ ಸಿಎಂ ಶಾಲೆ ಮಂಜೂರು ಮಾಡಿದರು. ಶಾಲೆಗೆ ಜಾಗವನ್ನು ಫೈಜುಲ್‌ ತಾವೇ ನೀಡಿದರು. ಇದೀಗ ಶಾಲೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಫೈಜುಲ್‌ ಮಾತ್ರ, ತಾಜ್‌ಮಹಲ್‌ ಪೂರ್ಣಗೊಳಿಸಲು 6 ಲಕ್ಷ ಹಣ ಹೊಂದಿಸಲಾಗದೇ ಇನ್ನೂ ಪರದಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?