ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿ ವಜಾ.. ಶುರುವಾಯ್ತು ಬಂಧನ ಭೀತಿ

Published : Nov 22, 2016, 05:07 AM ISTUpdated : Apr 11, 2018, 12:39 PM IST
ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿ ವಜಾ.. ಶುರುವಾಯ್ತು ಬಂಧನ ಭೀತಿ

ಸಾರಾಂಶ

ವಿಶೇಷ ತನಿಖಾ ದಳ ಅಧಿಕಾರಿಗಳು ನ್ಯಾಯಾಲಯಕ್ಕೆ  ಸಲ್ಲಿಕೆ ಮಾಡಿದ್ದ ಚಾರ್ಚ್ ಶೀಟ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಭಾಸ್ಕರ್ ರಾವ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ನ್ಯಾಯಾಲಯ ಇವತ್ತು ತೀರ್ಪು ನೀಡಿದ್ದು, ವೈ ಭಾಸ್ಕರ್ ರಾವ್ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು  ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಈ ಮೂಲಕ ಭಾಸ್ಕರ್ ರಾವ್ ಅವರು ಮತ್ತೆ ಸಂಕಷ್ಟಕ್ಕೆ  ಸಿಲುಕಿದಂತಾಗಿದೆ.

ಬೆಂಗಳೂರು(ನ.22): ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ನ್ಯಾ. ಭಾಸ್ಕರ್ ರಾವ್ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ  ವಜಾ ಮಾಡಿದೆ. ಹೈಕೋರ್ಟ್ ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ ಭಾಸ್ಕರ್ ರಾವ್ ಗೆ ಬಂಧನದ ಭೀತಿ ಎದುರಾಗಿದೆ.

ವಿಶೇಷ ತನಿಖಾ ದಳ ಅಧಿಕಾರಿಗಳು ನ್ಯಾಯಾಲಯಕ್ಕೆ  ಸಲ್ಲಿಕೆ ಮಾಡಿದ್ದ ಚಾರ್ಚ್ ಶೀಟ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಭಾಸ್ಕರ್ ರಾವ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಅದರಂತೆ ನ್ಯಾಯಾಲಯ ಇವತ್ತು ತೀರ್ಪು ನೀಡಿದ್ದು, ವೈ ಭಾಸ್ಕರ್ ರಾವ್ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು  ವಜಾಗೊಳಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಈ ಮೂಲಕ ಭಾಸ್ಕರ್ ರಾವ್ ಅವರು ಮತ್ತೆ ಸಂಕಷ್ಟಕ್ಕೆ  ಸಿಲುಕಿದಂತಾಗಿದೆ.

ಇನ್ನೂ, ಪ್ರಕರಣದಲ್ಲಿ ಪುತ್ರ ಅಶ್ವಿನ್ ರಾವ್`ಗೆ ಸಹಾಯ ಮಾಡಿದ್ದು, ಭ್ರಷ್ಟಚಾರದ ಮಾಹಿತಿ ಇದ್ದರೂ ಸಹ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ರಾಜ್ಯಪಾಲರು ಸಹ ಅನುಮತಿ ನೀಡಿದ್ದರು.ಆದರೆ, ಇದು ಸರಿಯಲ್ಲ  ಭಾಸ್ಕರ್ ರಾವ್ ಅವರ ವಿಚಾರಣೆ ನಡೆಸಬೇಕಾದ್ರೆ ಸದನದ ಅನುಮತಿ ಬೇಕು, ಅಲ್ಲದೆ ಜಡ್ಜಸ್ ಪ್ರೊಟೆಕ್ಷನ್ ಆಕ್ಟ್ ಪ್ರಕಾರ ನಮಗೆ ಪ್ರೊಟೆಕ್ಷನ್ ಇದೆ ಎಂದು ಭಾಸ್ಕರ್ ರಾವ್ ಪರ ವಕೀಲ ಚಂದ್ರಶೇಖರ್ ವಾದವನ್ನು ಮಂಡಿಸಿದ್ದರು.. ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಪಿ.ಎಸ್.ಜಾಧವ್ ಇವರು ಸದ್ಯಕ್ಕೆ ಜಡ್ಜ್ ಅಲ್ಲ, ನಿವೃತ್ತರಾಗಿದ್ದು ನ್ಯಾಯಾಮೂರ್ತಿಗಳ ರಕ್ಷಣಾ ಕಾಯ್ದೆಯಡಿ ಬರುವುದಿಲ್ಲ. ಅಲ್ಲದೆ, ಎಸ್ ಐಟಿ ತನಿಖೆ ನಡೆಸಿ ಕೋರ್ಟ್`ಗೆ ವರದಿ ಸಲ್ಲಿಸಬೇಕಾಗಿರುವುದು ನಿಯಮ ಎಂದು ವಾದ ಮಂಡಿಸಿದ್ದರು. ಸರ್ಕಾರಿ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ

ಚಾರ್ಜ್ ಶೀಟ್`ನಲ್ಲೇನಿದೆ..?: ಲೋಕಾಯುಕ್ತ ಕಚೇರಿಯನ್ನು ದುರ್ಬಳಕೆಗೆ ಭಾಸ್ಕರ್ ರಾವ್ ಅವಕಾಶ ನೀಡಿದ್ದು  ತಂದೆಯ ಸಮ್ಮತಿ ಮೇಲೆ ಕಚೇರಿಯನ್ನು ಅಶ್ವಿನ್ ರಾವ್ ದುರ್ಬಳಕೆ ಮಾಡಿಕೊಂಡಿದ್ದರು.. ಅಲ್ಲದೆ, ಮಗ ಅಶ್ವಿನ್​ ರಾವ್​ ಮಾಡುತ್ತಿದ್ದ ಪ್ರತಿಯೊಂದು ಡೀಲ್​ ಭಾಸ್ಕರ್​ ರಾವ್` ಗೆ ಗೊತ್ತಿತ್ತು. ಜಂಟಿ ಆಯುಕ್ತ ರಿಯಾಜ್​ ಮೂಲಕ ಭಾಸ್ಕರ್​ ರಾವ್​ ಡೀಲ್​ ನಡೆಸಿದ್ದರು. ಮಗನ ಆಕ್ಸಿಸ್​ ಬ್ಯಾಂಕ್​ ಅಕೌಂಟ್`ನಲ್ಲಿ ಪದೇ ಪದೇ ಹಣದ ವಹಿವಾಟು ನಡೆದಿದ್ದು, 20 ಕೋಟಿ ಹಣ ಒಂದೇ ವಾರದಲ್ಲಿ ವಹಿವಾಟು ಮಾಡಿರುವ ಬಗ್ಗೆ ದಾಖಲೆ ಇದೆ. ಅಲ್ಲದೆ, ಅಶ್ವಿನ್​ ರಾವ್​ ವಿರುದ್ಧ ಎಫ್​ಐಆರ್​ ದಾಖಲಾದ ನಂತರ ಆತನನ್ನು ಉಳಿಸುವ ಪ್ರಯತ್ನ ನಡೆಸಿದ್ದರು.. ಕೃಷ್ಣ ಮೇಲ್ದಂಡೆ ಯೋಜನೆಯ ಫೈಲ್​ ನಾಪತ್ತೆ ವಿಚಾರ ಗೊತ್ತಿದ್ದರು ಭಾಸ್ಕರ್ ರಾವ್ ಸುಮ್ಮನಿದ್ದರು.. ಈ ಎಲ್ಲಾ ಅಂಶಗಳು ಭಾಸ್ಕರ್ ವಿರುದ್ಧದ ಚಾರ್ಜ್ ಶೀಟ್`ನಲ್ಲಿದೆ.

ಇನ್ನೂ, ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಎಸ್ ಐ ಟಿ ಮುಖ್ಯಸ್ಥ ಕಮಲ್ ಪಂತ್ ನಮ್ಮ ಮುಂದಿನ ತನಿಖೆ ಎಂದಿನಂತೆ ನಡೆಯಲಿದೆ ಎಂದಿದ್ಧ಻ರೆ.

ಇನ್ನೂ, ಭಾಸ್ಕರ್ ರಾವ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ಭಾಸ್ಕರ್ ರಾವ್ ಬಂಧನವಾಗುವ ಎಲ್ಲಾ  ಸಾಧ್ಯತೆಗಳು ಸಹ ಇದೆ. ಪ್ರಕರಣದಲ್ಲಿ ಇದುವರೆಗೂ ಎಲ್ಲಾ ಆರೋಪಿಗಳು ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದಾರೆ.. ಆದರೆ, ಭಾಸ್ಕರ್ ರಾವ್ ಇದುವರೆಗೂ ಬಂಧನವಾಗಿಲ್ಲ.

ಬೆಂಗಳೂರಿನಿಂದ ಶಶಿಶೇಖರ್ ಜೊತೆ ಚೇತನ್.ಎಂ, ಕ್ರೈಂಬ್ಯೂರೋ, ಸುವರ್ಣನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!