ಮದುವೆ ದುಡ್ಡಿಗೆ ಕಠಿಣ ಷರತ್ತು: ಖಾತೆಯಿಂದ 2.5 ಲಕ್ಷ ಪಡೆಯಲು ಹೊಸ ಕ್ಯಾತೆ

Published : Nov 22, 2016, 04:35 AM ISTUpdated : Apr 11, 2018, 12:54 PM IST
ಮದುವೆ ದುಡ್ಡಿಗೆ ಕಠಿಣ ಷರತ್ತು: ಖಾತೆಯಿಂದ 2.5 ಲಕ್ಷ ಪಡೆಯಲು ಹೊಸ ಕ್ಯಾತೆ

ಸಾರಾಂಶ

ಮದುವೆ ಉದ್ದೇಶಕ್ಕಾಗಿ ಬ್ಯಾಂಕ್‌ ಖಾತೆಗಳಿಂದ ಗರಿಷ್ಠ 2.5 ಲಕ್ಷ ರೂ. ಹಿಂಪಡೆಯುವ ಬಗ್ಗೆ ರಿಸರ್ವ್‌ ಬ್ಯಾಂಕ್‌ ಅಧಿಸೂಚನೆ ಹೊರಡಿಸಿದ್ದು, ಮತ್ತುಷ್ಟ ಕಠಿಣ ಷರತ್ತುಗಳನ್ನು ವಿಧಿಸಿದೆ. ಕಳೆದ ವಾರವೇ ಮದುವೆ ಉದ್ದೇಶಕ್ಕೆ 2.5 ಲಕ್ಷ ರೂ. ಹಣ ತೆಗೆಯಲು ವಿನಾಯಿತಿ ಪ್ರಕಟಿಸಿಲಾಗಿತ್ತಾದರೂ, ಈ ಸಂಬಂಧ ಆರ್‌ಬಿಐ ಅಧಿಸೂಚನೆ ಬ್ಯಾಂಕ್‌ಗಳಿಗೆ ತಲುಪದ ಕಾರಣ ಈ ಆದೇಶ ಜಾರಿಯಾಗಿರಲಿಲ್ಲ. ಇದೀಗ ಆರ್‌ಬಿಐ ಕಠಿಣ ಷರತ್ತುಗಳೊಂದಿಗೆ ಈ ಸೌಲಭ್ಯದ ನಿಯಮಗಳನ್ನು ಪ್ರಕಟಿಸಿದೆ.

ನವದೆಹಲಿ(ನ.22): ಮದುವೆ ಉದ್ದೇಶಕ್ಕಾಗಿ ಬ್ಯಾಂಕ್‌ ಖಾತೆಗಳಿಂದ ಗರಿಷ್ಠ 2.5 ಲಕ್ಷ ರೂ. ಹಿಂಪಡೆಯುವ ಬಗ್ಗೆ ರಿಸರ್ವ್‌ ಬ್ಯಾಂಕ್‌ ಅಧಿಸೂಚನೆ ಹೊರಡಿಸಿದ್ದು, ಮತ್ತುಷ್ಟ ಕಠಿಣ ಷರತ್ತುಗಳನ್ನು ವಿಧಿಸಿದೆ. ಕಳೆದ ವಾರವೇ ಮದುವೆ ಉದ್ದೇಶಕ್ಕೆ 2.5 ಲಕ್ಷ ರೂ. ಹಣ ತೆಗೆಯಲು ವಿನಾಯಿತಿ ಪ್ರಕಟಿಸಿಲಾಗಿತ್ತಾದರೂ, ಈ ಸಂಬಂಧ ಆರ್‌ಬಿಐ ಅಧಿಸೂಚನೆ ಬ್ಯಾಂಕ್‌ಗಳಿಗೆ ತಲುಪದ ಕಾರಣ ಈ ಆದೇಶ ಜಾರಿಯಾಗಿರಲಿಲ್ಲ. ಇದೀಗ ಆರ್‌ಬಿಐ ಕಠಿಣ ಷರತ್ತುಗಳೊಂದಿಗೆ ಈ ಸೌಲಭ್ಯದ ನಿಯಮಗಳನ್ನು ಪ್ರಕಟಿಸಿದೆ. ಷರತ್ತುಗಳ ವಿವರ ಹೀಗಿದೆ:

-ನೋಟು ರದ್ದು ಆದೇಶ ಹೊರಬಿದ್ದ ದಿನವಾದ ನ.8ರಂದು ಅಥವಾ ಅದಕ್ಕೂ ಮುನ್ನವೇ ಖಾತೆಯಲ್ಲಿ 2.5 ಲಕ್ಷ ರೂ. ಬ್ಯಾಲೆನ್ಸ್‌ ಹೊಂದಿರಬೇಕು.

-ನ.8ರ ಬಳಿಕ ಜಮೆ ಮಾಡಲಾದ ಹಣ ತೆಗೆಯಲು ಅವಕಾಶವಿಲ್ಲ.

-ವಿತ್‌ಡ್ರಾ ಮಾಡಲಾದ ನಗದನ್ನು ಬ್ಯಾಂಕ್‌ ಖಾತೆ ಹೊಂದಿರದ ವ್ಯಕ್ತಿಗಳಿಗಷ್ಟೇ ಪಾವತಿಸಬೇಕು

-ಹಣ ಪಡೆದ ವ್ಯಕ್ತಿಗಳ ಹೆಸರನ್ನು ಕ್ಯಾಶ್‌ ವಿತ್‌ ಡ್ರಾಗಾಗಿ ಸಲ್ಲಿಸುವ ಅರ್ಜಿಯಲ್ಲಿ ನಮೂದಿಸಬೇಕು.

-ತಾವು ಹಣ ಪಾವತಿಸುತ್ತಿರುವ ವ್ಯಕ್ತಿಗಳಿಗೆ ಬ್ಯಾಂಕ್‌ ಖಾತೆ ಇಲ್ಲವೆಂಬುದನ್ನು ಅರ್ಜಿದಾರರು ಪ್ರಮಾಣೀಕರಿಸಿ ಸಹಿ ಹಾಕಬೇಕು.

-ಬ್ಯಾಂಕ್‌ ಖಾತೆ ಹೊಂದಿರುವ ವ್ಯಕ್ತಿಗಳಿಗೆ ನಗದು ರೂಪದಲ್ಲಿ ಹಣ ಪಾವತಿಸಲು ಅವಕಾಶವಿಲ್ಲ.

-ಅಂಥವರಿಗೆ ಚೆಕ್‌, ಆನ್‌ಲೈನ್‌ ಪೇಮೆಂಟ್‌ ಇಲ್ಲವೇ ಡೆಬಿಟ್‌ ಕಾರ್ಡ್‌ ಮೂಲಕ ಹಣ ಟ್ರಾನ್ಸ್‌ಫರ್‌ ಮಾಡಬಹುದು.

-ಅರ್ಜಿಯಲ್ಲಿ ವರ ಮತ್ತು ವಧುವಿನ ಹೆಸರನ್ನು ನಮೂದಿಸಬೇಕು.

-ಐಡಿ ಪ್ರೂಫ್‌, ವಿಳಾಸ ದಾಖಲೆ ಹಾಗೂ ಮದುವೆ ದಿನಾಂಕವನ್ನು ಒದಗಿಸಬೇಕು.

 -ಅರ್ಜಿ ಜತೆಗೆ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು.

-ಇದರ ಭಾಗವಾಗಿ ವಿವಾಹ ಆಹ್ವಾನ ಪತ್ರಿಕೆ, ಕಲ್ಯಾಣ ಮಂಟಪ, ಕೆಟರಿಂಗ್‌ ಇತ್ಯಾದಿ ಸೇವೆಗಳಿಗೆ ಅಡ್ವಾನ್ಸ್‌ ಹಣ ಪಾವತಿಸಿರುವ ಬಗ್ಗೆ ರಸೀದಿ ಒದಗಿಸಬಹುದು.

-ಡಿ.30, 2016ರ ಒಳಗೆ ಮದುವೆ ನಡೆಯುವಂತಿದ್ದರೆ ಮಾತ್ರ ಹಣ ವಿತ್‌ಡ್ರಾ ಮಾಡಬಹುದು.

-ವಧು, ವರ ಅಥವಾ ಅವರ ತಂದೆ-ತಾಯಿ ಪೈಕಿ ಯಾರಾದರೂ ಒಬ್ಬರಿಗೆ ಮಾತ್ರ ಹಣ ವಿತ್‌ಡ್ರಾ ಮಾಡಲು ಅವಕಾಶ.

-ಚೆಕ್‌, ಡ್ರಾಫ್ಟ್‌, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌, ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ನಂತಹ ಕ್ಯಾಶ್‌ಲೆಸ್‌ ಮಾರ್ಗಗಳ ಮೂಲಕ ಹಣ ಪಾವತಿಸುವಂತೆ ಬ್ಯಾಂಕ್‌ಗಳು ಗ್ರಾಹಕರಿಗೆ ಉತ್ತೇಜಿಸಬೇಕು.

 ಬ್ಯಾಂಕ್‌ಗಳು ಗ್ರಾಹಕರಿಂದ ಪಡೆದ ದಾಖಲೆಗಳನ್ನು ಸಂಗ್ರಹಿಸಿ, ಅಗತ್ಯಬಿದ್ದಾಗ ತೆರಿಗೆ ಅಧಿಕಾರಿಗಳಿಗೆ ಒದಗಿಸಬೇಕು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ
ಯಾವ ರಾಜ್ಯದಲ್ಲಿ ಗರಿಷ್ಠ ಬೆಲೆಗೆ ಮಾರಾಟವಾಗುತ್ತೆ ಪೆಟ್ರೋಲ್? ಕಡಿಮೆಗೆ ಎಲ್ಲಿ ಸಿಗುತ್ತೆ?