
ಗೋವಾ(ಅ.13): ನಿಮ್ಮ ನಾಯಿ ಮಿಸ್ ಆಗಿದೆಯಾ? ಎಲ್ಲೆಲ್ಲೋ ಹುಡುಕುವ ಬದಲು, ಪಕ್ಕದ ಮಾಂಸದ ಹೋಟೇಲ್'ನಲ್ಲೇ ಹುಡುಕಿ. ಯಾಕಂದ್ರೆ ನಿಮ್ಮ ನಾಯಿ ಮಾಂಸದ ಅಂಗಡಿಯಲ್ಲಿ ಕಬಾಬ್ ಆಗಿರಬಹುದು. ಹೌದು, ಗೋವಾದ ಚೈನೀಸ್ ಫುಡ್ ಸೆಂಟರ್'ವೊಂದರಲ್ಲಿ ಖಾದ್ಯಗಳನ್ನ ತಯಾರಿಸೋಕೆ ನಾಯಿ ಮಾಂಸವನ್ನ ಬಳಸುತ್ತಾರೆ ಎಂಬ ಆಘಾತಕಾರಿ ಸುದ್ದಿಯೊಂದು ಬಯಲಾಗಿದೆ.
ದಕ್ಷಿಣ ಗೋವಾದ ಸಾಲಿಗೌನ್ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಕಾಲಂಗುಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಾದಲ್ಲಿ ಇತ್ತೀಚಿಗೆ ಚೈನೀಸ್ ಫುಡ್ ಶಾಪ್ ನಡೆಸುವ ಯುವಕರು ಕದ್ದು ಮುಚ್ಚಿ ಬ್ಯಾಗ್'ನಲ್ಲಿ ಮಾಂಸ ತೆಗೆದುಕೊಂಡು ಹೋಗ್ತಾ ಇದ್ರು. ಅವರ ಮೇಲೆ ಅನುಮಾನ ಬಂದಿದ್ದರಿಂದಾಗಿ ಸ್ಥಳೀಯರು ಅವರನ್ನ ಕರೆದು ಬ್ಯಾಗ್ ಚೆಕ್ ಮಾಡಿದ್ದಾರೆ. ಆಗ ಅದರಲ್ಲಿ ನಾಯಿ ಮಾಂಸ ಇರೋದನ್ನ ನೋಡಿ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.
ಇಷ್ಟೇ ಅಲ್ಲದೆ ಯುವಕರು ನಡೆಸುವ ಫುಡ್ ಸೆಂಟರ್ ಬಳಿ ಇರುವ ಪ್ಯಾರೇರಾ ರೆಸ್ಟೋರೆಂಟ್ ಮಾಲೀಕ ಸಾಕಿದ್ದ ನಾಯಿಯ ಕಾಲು ಪತ್ತೆಯಾಗಿದೆ. ಕಾಲುಗಳನ್ನ ನೋಡಿದ ರೆಸ್ಟೋರೆಂಟ್ ಮಾಲೀಕ ನಾಯಿ ನನ್ನದು ಅಂತಾ ಗುರುತಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.ನಂತರ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಆ ಯುವಕರನ್ನ ಪೋಲೀಸರಿಗೆ ಒಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.