ಬಡ್ತಿ ಮೀಸಲು ಗೊಂದಲ ಅಂತ್ಯ, ಅಧಿಕೃತ ಆದೇಶದಲ್ಲಿ ಏನಿದೆ?

By Web DeskFirst Published Feb 27, 2019, 7:28 PM IST
Highlights

ಬಡ್ತಿ ಮೀಸಲಾತಿ ಸಂಬಂಧ ಅಂತೂ ಇಂತೂ ಸಿಎಂ ಕುಮಾರಸ್ವಾಮಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಹಲವಾರು ದಿನಗಳಿಂದ ಹಿಂದಕ್ಕೆ ಬಿದ್ದಿದ್ದ ವಿಚಾರವೊಂದಕ್ಕೆ ಅಂತ್ಯ ಸಿಕ್ಕಿದೆ.

ಬೆಂಗಳೂರು[ಫೆ. 27]  ದಲಿತಪರ ಹೋರಾಟಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಮಣಿದಿದೆ. ಬಡ್ತಿ ಮೀಸಲಾತಿ ಕಾಯ್ದೆಯಂತೆ ದಲಿತ ನೌಕರರಿಗೆ ಮುಂಬಡ್ತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.

ಹಿಂಬಡ್ತಿಯಾದ ಸ್ಥಳದಲ್ಲೇ ಮುಂದುವರಿಸಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಬಡ್ತಿ ಮೀಸಲಾತಿ ಜಾರಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿತ್ತು. ದಲಿತ ಸಚಿವರ ಒತ್ತಡಕ್ಕೆ ಮಣಿದಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂಬಡ್ತಿಗೆ ಪೂರಕವಾಗಿ ಅಧಿವೇಶನದಲ್ಲಿ ವಿಧೇಯಕಕ್ಕೂ ಅಂಗೀಕಾರ ಪಡೆದುಕೊಂಡಿದ್ದರು.

ಕೇಂದ್ರದ ಮೇಲ್ವರ್ಗ ಮೀಸಲು, ಷರತ್ತು ಜಾರಿ

ಇದಾದ ಮೇಲೆ ವಿಧೇಯಕದಂತೆ ಮುಂಬಡ್ತಿ ನೀಡಲು ಸಿಎಂ ಕುಮಾರಸ್ವಾಮಿ ವಿಳಂಬ ಮಾಡಿದ್ದನ್ನು ದಲಿತ ಸಚಿವರು ಸಂಪುಟ ಸಭೆಯಲ್ಲಿ ವಿರೋಧಿಸಿದ್ದರು.  ಆದರೆ ಇಂದು ಅಧಿಕೃತ ಆದೇಶ ಹೊರಬಿದ್ದಿದೆ.

click me!