2016 ಏಪ್ರಿಲ್'ನಿಂದ ನವೆಂಬರ್ 9ರವರೆಗೆ ನಿಮ್ಮ ಖಾತೆಗೆ 2.5 ಲಕ್ಷ ಜಮೆ ಮಾಡಿದ್ದೀರಾ? ನಿಮಗೂ ಕಾದಿದೆ ಕಂಟಕ

Published : Jan 08, 2017, 10:51 AM ISTUpdated : Apr 11, 2018, 12:47 PM IST
2016 ಏಪ್ರಿಲ್'ನಿಂದ ನವೆಂಬರ್ 9ರವರೆಗೆ ನಿಮ್ಮ ಖಾತೆಗೆ 2.5 ಲಕ್ಷ ಜಮೆ ಮಾಡಿದ್ದೀರಾ? ನಿಮಗೂ ಕಾದಿದೆ ಕಂಟಕ

ಸಾರಾಂಶ

ನೋಟ್ ಬ್ಯಾನ್ ಆದೇಶ ಜಾರಿಗೊಳಿಸುವುದಕ್ಕೂ ಮೊದಲು ನಿಮ್ಮ ಅಕೌಂಟ್'ಗೆ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾ ಮಾಡಿದ್ದೀರಾ? ಹಾಗಿದ್ದರೆ ನೀವು ಈ ಸ್ಟೋರಿ ಓದಲೇಬೇಕು. ನೀವು ಜಮಾ ಮಾಡಿದ ಹಣ ಅನಧಿಕೃತವಾಗಿದ್ದಾದರೆ ಕಂಟಕ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನವದೆಹಲಿ(ಜ.08): ನೋಟ್ ಬ್ಯಾನ್ ಆದೇಶ ಜಾರಿಗೊಳಿಸುವುದಕ್ಕೂ ಮೊದಲು ನಿಮ್ಮ ಅಕೌಂಟ್'ಗೆ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾ ಮಾಡಿದ್ದೀರಾ? ಹಾಗಿದ್ದರೆ ನೀವು ಈ ಸ್ಟೋರಿ ಓದಲೇಬೇಕು. ನೀವು ಜಮಾ ಮಾಡಿದ ಹಣ ಅನಧಿಕೃತವಾಗಿದ್ದಾದರೆ ಕಂಟಕ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿತ್ತ ಸಚಿವಾಲಯ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಅಧಿಕಾರಿಗಳ ಬಳಿ 2016 ರ ಏಪ್ರಿಲ್ 1 ರಿಂದ 9 ನವೆಂಬರ್ 2016ರವರೆ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾವಣೆ ಮಾಡಿದ ಉಳಿತಾಯ ಖಾತೆಯ ಮಾಹಿತಿ, ಹಾಗೂ 12.5 ಲಕ್ಷಕ್ಕಿಂತ ಅಧಿಕ ಮೊತ್ತ ಜಮೆ ಮಾಡಿದ ಚಾಲ್ತಿ ಖಾತೆಯ ಮಾಹಿತಿಯನ್ನು ನೀಡಲು ಸೂಚಿಸಿದೆ.

ವಿತ್ತ ಸಚಿವಾಲಯ ನೀಡಿದ ಈ ಆದೇಶದ ಬಳಿಕ ಕಾರ್ಯಪ್ರವೃತ್ತವಾದ ಆದಾಯ ತೆರಿಗೆ ವಿಭಾಗ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾವಣೆಗೊಂಡ ಉಳಿತಾಯ ಖಾತೆಗಳ ಮಾಹಿತಿಯನ್ನು ನೀಡುವಂತೆ ಬ್ಯಾಂಕ್ ಹಾಗೂ ಅಂಚೆಕಚೇರಿಗೆ ಸೂಚಿಸಿದೆ.

ಬ್ಯಾಂಕ್ ನೀಡುವ ಡೇಟಾವನ್ನು ಕೇವಲ ತುಲನಾತ್ಮಕ ಅಧ್ಯಯನ ನಡೆಸಲು ಬಳಸಲಾಗುತ್ತದೆ. ಈ ಮೂಲಕ ಇಂತಹ ಖಾತೆಗಳ ಡೆಪಾಸಿಟ್ ಹಿಸ್ಟ್ರಿ ನಮಗೆ ಸಿಗುತ್ತದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಇನ್ನು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು 2017 ರ ಫೆಬ್ರವರಿ 28ಕ್ಕೂ ಮೊದಲು ತಮ್ಮ ಪಾನ್ ಕಾರ್ಡ್ ನಂಬರ್ ಇಲ್ಲವೇ ಫಾರ್ಮ್ 60ಯನ್ನು ನೀಡುವಂತೆ ವಿತ್ತ ಸಚಿವಾಲಯ ಸೂಚನೆ ಹೊರಡಿಸಿದೆ. ಈ ಮೂಲಕ ಕಪ್ಪು ಹಣವನ್ನು ತಡೆಗಟ್ಟುವುದು ಅವರ ಉದ್ದೇಶವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಹರು Bigg Boss ಗೆದ್ದಿಲ್ಲ, ಗಿಲ್ಲಿ ನಟನೂ ಗೆಲ್ಲಲ್ಲ: ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿಣಿ ಭವಿಷ್ಯ!
ಕರಾವಳಿ ರೈಲು ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗೆ 100 ಕೋಟಿ ರು. ನೀಡಲು ಒಪ್ಪಿಗೆ, ಕೇಂದ್ರ ರೈಲ್ವೆ ಸಚಿವರ ಅನುಮೋದನೆ