ರಾಷ್ಟ್ರಗೀತೇಲಿ ಸಿಂಧ್‌ ಬದಲಿಸಿ ಈಶಾನ್ಯ ರಾಜ್ಯ ಅಳವಡಿಸಲು ಕಾಂಗ್ರೆಸ್‌ ಸಂಸದನ ಒತ್ತಾಯ

By Suvarna Web DeskFirst Published Mar 17, 2018, 9:43 AM IST
Highlights

ರಾಷ್ಟ್ರಗೀತೆಯಲ್ಲಿ ಬರುವ ‘ಸಿಂಧ್‌’ ಪದ ಬದಲಾಯಿಸಿ, ‘ಈಶಾನ್ಯ ಭಾರತ’ ಪದ ಸೇರ್ಪಡೆಗೊಳಿಸುವಂತೆ ಕೋರಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ರಿಪುನ್‌ ಬೋರಾ ಖಾಸಗಿ ಮಸೂದೆ ಮಂಡಿಸಿದ್ದಾರೆ.

ನವದೆಹಲಿ: ರಾಷ್ಟ್ರಗೀತೆಯಲ್ಲಿ ಬರುವ ‘ಸಿಂಧ್‌’ ಪದ ಬದಲಾಯಿಸಿ, ‘ಈಶಾನ್ಯ ಭಾರತ’ ಪದ ಸೇರ್ಪಡೆಗೊಳಿಸುವಂತೆ ಕೋರಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ರಿಪುನ್‌ ಬೋರಾ ಖಾಸಗಿ ಮಸೂದೆ ಮಂಡಿಸಿದ್ದಾರೆ.

ಪಾಕಿಸ್ತಾನಕ್ಕೆ ಸೇರಿರುವ ಸಿಂಧ್‌ ಈಗ ಭಾರತದ ಭಾಗವಾಗಿಲ್ಲ, ಆದರೆ ಈಶಾನ್ಯ ಭಾರತ ದೇಶದ ಅತ್ಯಂತ ಪ್ರಮುಖ ಭಾಗವಾಗವಾಗಿದೆ.

ಆದರೆ, ಅದು ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಎಂಬುದು ವಿಷಾಧನೀಯ ಎಂದು ಬೋರಾ ಹೇಳಿದ್ದರೆ. 1911ರಲ್ಲಿ ನೊಬೆಲ್‌ ಪುರಸ್ಕೃತ ಕವಿ ರವೀಂದ್ರನಾಥ ಠಾಗೊರ್‌ ಬಂಗಾಳಿಯಲ್ಲಿ ‘ಜನಗಣಮನ’ ಗೀತೆ ರಚಿಸಿದ್ದು, ಆಗ ಭಾರತದ ವ್ಯಾಪ್ತಿ ಬಲೂಚಿಸ್ತಾನದವರೆಗೂ ವಿಸ್ತರಿಸಿದ್ದುದರಿಂದ, ಸಿಂಧ್‌ ಭಾರತದ ಭಾಗವಾಗಿ ಪರಿಗಣಿಸಲ್ಪಟ್ಟಿತ್ತು.

1947ರಲ್ಲಿ ದೇಶವಿಭಜನೆಯ ವೇಳೆ ಸಿಂಧ್‌ ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟಿತ್ತು. ಗೀತೆಯ ಹಿಂದಿ ಆವೃತ್ತಿಗೆ 1950, ಜ.24ರಂದು ಸಂಸತ್ತಿನಲ್ಲಿ ರಾಷ್ಟ್ರಗೀತೆಯ ಮಾನ್ಯತೆ ನೀಡಲಾಗಿತ್ತು.

click me!