120 ಮಿಲಿಯನ್ ರಿಲಾಯನ್ಸ್ ಜಿಯೋ ಗ್ರಾಹಕರ ವೈಯುಕ್ತಿಕ ಮಾಹಿತಿ ಕಳವು?

By Suvarna Web DeskFirst Published Jul 10, 2017, 11:14 AM IST
Highlights

ದೇಶದ ಅತೀ ದೊಡ್ಡ ಮಾಹಿತಿ ಕಳವು ಎನ್ನಬಹುದಾದ ಕೃತ್ಯ ನಡೆದಿದ್ದು,  ಬಾರಿ ರಿಲಯನ್ಸ್ ಜಿಯೋ ಗ್ರಾಹಕರ ಮಾಹಿತಿಯನ್ನು magicapk.comನಲ್ಲಿ ಪ್ರಕಟಿಸಲಾಗಿದೆ ಎಂದು ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.

ನವದೆಹಲಿ (ಜು. 10): ದೇಶದ ಅತೀ ದೊಡ್ಡ ಮಾಹಿತಿ ಕಳವು ಎನ್ನಬಹುದಾದ ಕೃತ್ಯ ನಡೆದಿದ್ದು,  ಬಾರಿ ರಿಲಯನ್ಸ್ ಜಿಯೋ ಗ್ರಾಹಕರ ಮಾಹಿತಿಯನ್ನು magicapk.comನಲ್ಲಿ ಪ್ರಕಟಿಸಲಾಗಿದೆ ಎಂದು ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.

ಭಾರತದಲ್ಲಿ 120 ಮಿಲಿಯನ್’ಕ್ಕಿಂತಲೂ ಹೆಚ್ಚು ಚಂದಾದದಾರನ್ನು ರಿಲಾಯನ್ಸ್ ಜಿಯೋ ಹೊಂದಿದೆ. ಮೇಲ್ನೋಟಕ್ಕೆ ವೆಬ್’ಸೈಟ್’ನಲ್ಲಿ ಪ್ರಕಟವಾಗಿರುವ ಮಾಹಿತಿಯು ನಕಲಿಯಾಗಿದೆ ಎಂದು ರಿಲಾಯನ್ಸ್ ಹೇಳಿದೆ. ಅದಾಗ್ಯೂ ಅದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ.  ಈ ಕೃತ್ಯ ವರದಿಯಾದ ಬೆನ್ನಲ್ಲೇ ಆ ವೆಬ್’ಸೈಟ್ ಆಫ್’ಲೈನ್ ಆಗಿಬಿಟ್ಟಿದೆ.

ಮಾಹಿತಿ ಕಳವಾಗಿರುವುದನ್ನು ಮೊದಲು ಬಹಿರಂಗಪಡಿಸಿರುವುದು Fonearens.com ಎಂಬ ವೆಬ್’ಸೈಟ್. ನಾನು ಹಾಗೂ ನನ್ನ ಸಹೋದ್ಯೋಗಿಗಳು ತಮ್ಮ ವೈಯುಕ್ತಿಕ ಮಾಹಿತಿಯನ್ನು ಆ ಜಾಲತಾಣದಲ್ಲಿ ಕಂಡು ದಂಗಾದೆವು ಎಂದು Fonearens.com ಸಂಪಾದಕ ವುರುಣ್ ಕಿಶೋರ್ ಇಂಡಿಯನ್ ಎಕ್ಸ್’ಪ್ರೆಸ್’ಗೆ ಹೇಳಿದ್ದಾರೆ.

ಕಳೆದ ವಾರ ಚಂದಾದಾರರಾಗಿರುವ ವ್ಯಕ್ತಿಗಳ ಮಾಹಿತಿಯೂ ಕೂಡಾ ಆ ವೆಬ್’ಸೈಟ್’ನಲ್ಲಿ ಅಪ್’ಡೇಟ್ ಆಗಿದೆ ಎಂದು ಹೇಳಲಾಗಿದೆ.

ಆ ವೆಬ್’ಸೈಟ್’ನಲ್ಲಿರು ‘ಸರ್ಚ್’ನಲ್ಲಿ ಜಿಯೋ ಮೊಬೈಲ್ ನಂ. ಹಾಕಿದರೆ ಸಾಕು, ಚಂದಾದಾರರ ಈಮೇಲ್ ಹಾಗೂ ಆಧಾರ್ ಸಂ. ಸೇರಿದಂತೆ ಎಲ್ಲಾ ವಿವರಗಳು ಲಭ್ಯವಿದೆ. ಇನ್ನೂ ಆಕ್ಟಿವೇಟ್ ಆಗದ ಗ್ರಾಹಕರ ವಿವರಗಳು ಲಭ್ಯವಾಗಿತ್ತು ಎಂದು ಹೇಳಲಾಗಿದೆ.  

ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದ್ದಂತೆ ಆ ವೆಬ್’ಸೈಟ್ ಆಫ್’ಲೈನ್ ಆಗಿದೆ. ಹೆಚ್ಚು ಮಂದಿ ಭೇಟಿ ನೀಡಿರುವುದರಿಂದ ಅದು ಕ್ರ್ಯಾಶ್ ಆಗಿದೆಯೋ ಅಥವಾ ಅದನ್ನು ಅಧಿಕಾರಿಗಳು ಬ್ಲಾಕ್ ಮಾಡಿದ್ದಾರೋ ಎಂದು ತಿಳಿದು ಬಂದಿಲ್ಲ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ರಿಲಾಯನ್ಸ್ ಜಿಯೋ, ಮೇಲ್ನೋಟಕ್ಕೆ ಆ ವೆಬ್’ಸೈಟ್’ನಲ್ಲಿದ್ದ ಮಾಹಿತಿಯು ನಕಲಿ ಎಂದು ತಿಳಿದುಬಂದಿದೆ. ನಮ್ಮ ಬಳಿ ಇರುವ ಗ್ರಾಹಕರ ಮಾಹಿತಿಯು ಅತೀ ಸುರಕ್ಷಿತವಾಗಿದೆ. ಈ ಬಗ್ಗೆ ನಾವು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ, ಎಂದು ಹೇಳಿದೆ.

click me!