
ಮುಂಬೈ(ಜೂ.06): ಉಚಿತ ಕರೆ ಹಾಗೂ ಇಂಟರ್'ನೆಟ್ ಸೌಲಭ್ಯ ಒದಗಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಲಾಯನ್ಸ್ ಜಿಯೋ ಕಂಪನಿಯು ವೇಗದ ಡೌನ್'ಲೋಡ್ ಸೌಲಭ್ಯ ಒದಗಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ
ಹೌದು ಟ್ರಾಯ್ ಪ್ರಕಟಿಸಿದ ನೂತನ ವರದಿಯಂತೆ, ಜಿಯೋ ನೆಟ್'ವರ್ಕ್ ಕಳೆದ ಮೇ ತಿಂಗಳಲ್ಲಿ 19.123 ಎಂಬಿಪಿಎಸ್ ಡೇಟಾ ಸ್ಪೀಡ್ ಒದಗಿಸುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರೆದಿದೆ.ಇದು ಇತರೆ ಎಲ್ಲಾ ಟೆಲಿಕಾಂ ಕಂಪನಿಗಳಿಗಿಂತ ಹೆಚ್ಚು ಎಂದು ಟ್ರಾಯ್ ವರದಿ ಬಹಿರಂಗಪಡಿಸಿದೆ.
ಜಿಯೋ ನಂತರದ ಸ್ಥಾನವನ್ನು ಐಡಿಯಾ(13,709 ಎಂಬಿಪಿಎಸ್) ಮತ್ತು ವೋಡಾಫೋನ್(13,387ಎಂಬಿಪಿಎಸ್) ಪಡೆದುಕೊಂಡಿವೆ.
ಡೌನ್‌ಲೋಡ್ ಸ್ಪೀಡ್ ವಿಚಾರದಲ್ಲಿ ಜಿಯೊ ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ.
ಮೊದಲ 6 ತಿಂಗಳ ಕಾಲ ಉಚಿತ ಕರೆ ದರ ಹಾಗೂ ಇಂಟರ್'ನೆಟ್ ಸೌಲಭ್ಯ ಒದಗಿಸಿದ್ದ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆ ಇದೀಗ ಟ್ಯಾರೀಫ್ ಯೋಜನೆ ಪ್ರಕಟಿಸಿದ್ದು, ಅದೇ ಸೌಲಭ್ಯಕ್ಕೆ ದಿನವೊಂದಕ್ಕೆ ಗರಿಷ್ಟ 10 ರುಪಾಯಿ ಚಾರ್ಜ್ ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.