ಎಣ್ಣೆ ಬೇಕು ಅಣ್ಣ, ಸಿಗದ್ದಕ್ಕೆ ಬಾರ್‌ಗೆ ಬೆಂಕಿ ಇಡೋದಾ!

Published : Aug 24, 2018, 01:26 PM ISTUpdated : Sep 09, 2018, 09:10 PM IST
ಎಣ್ಣೆ ಬೇಕು ಅಣ್ಣ, ಸಿಗದ್ದಕ್ಕೆ ಬಾರ್‌ಗೆ ಬೆಂಕಿ ಇಡೋದಾ!

ಸಾರಾಂಶ

ಎಣ್ಣೆ ಕುಡಿದ ಮೇಲೆ ಏನೆನೋ ಮಾಡಿಸುತ್ತೆ, ಎಣ್ಣೆ ಸಿಗದೇ ಇದ್ದರೂ ಜನ ಏನನ್ನಾದರೂ ಮಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಕುಡಿಯಲು ಮದ್ಯ ಕೊಡದ ಬಾರ್ ಗೆ ಕುಡುಕರು ಬೆಂಕಿ ಇಟ್ಟಿದ್ದಾರೆ. ಇದು ನಮ್ಮ ಮಂಡ್ಯ ಜಿಲ್ಲೆಯದ್ದೆ ಸುದ್ದಿ.

 

ಮದ್ದೂರು(ಆ.24] ಮದ್ಯ ಕೊಡಲು ನಿರಾಕರಿಸಿದ ಬಾರ್‌ಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತಾಲೂಕಿನ ಶಿವಪುರದಲ್ಲಿ ಬುಧವಾರ ಮಧ್ಯರಾತ್ರಿ ಕುಡುಕರು ದುಷ್ಕೃತ್ಯ ಮಾಡಿದ್ದಾರೆ.

ಶಿವಪುರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಗೌಡ ಬಾರ್‌ಗೆ ರಾತ್ರಿ 11.15ರ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ಮದ್ಯ ಕೇಳಿದ್ದಾರೆ. ಈ ವೇಳೆ ಅವಧಿ ಮುಗಿದ ಕಾರಣ ಮದ್ಯ ನೀಡಲು ಕ್ಯಾಷಿಯರ್‌ ನಿರಾಕರಿಸಿದ್ದಾರೆ. ಬಳಿಕ ಮಧ್ಯರಾತ್ರಿ 12ರ ವೇಳೆಗೆ ಮತ್ತೆ ಪೆಟ್ರೋಲ್‌ ತುಂಬಿದ ಬಾಟಲಿಗಳೊಂದಿಗೆ ಆಗಮಿಸಿದ ಅದೇ ಇಬ್ಬರು, ಬಾರ್‌ ಮುಂಭಾಗದ ರೋಲಿಂಗ್‌ ಶೆಟರ್‌ ಕೆಳಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಈ ವೇಳೆ ದಟ್ಟವಾದ ಹೊಗೆ ಆವರಿಸಿದ್ದು, ಎಚ್ಚರಗೊಂಡ ಬಾರ್‌ನಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಿ, ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಾರ್‌ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಮದ್ಯ ದೊರೆಯದೇ ಹಿಂದೆ ಹೋಗಿದ್ದ ಇಬ್ಬರೇ ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆತಂಕಕಾರಿ ಹಂತಕ್ಕೆ ದೆಹಲಿ ಹವೆ: 430ರ ಗಡಿ ದಾಟಿದ ವಾಯು ಗುಣಮಟ್ಟ ಸೂಚ್ಯಂಕ: ವಾರದಲ್ಲಿ ಕೆಲವೇ ದಿನ ಮಕ್ಕಳಿಗೆ ಶಾಲೆ
ಈ 6 ದೇಶಗಳಲ್ಲಿ ‘ಧುರಂಧರ್’ ಬ್ಯಾನ್; ಆದ್ರೂ ಕಲೆಕ್ಷನ್‌ಗೆ ಸ್ವಲ್ಪವೂ ಹೊಡೆತವಿಲ್ಲ, ಅದು ಹೇಗೆ..!