ಮೈತ್ರಿಕೂಟದ ಅತೃಪ್ತರು ಬಿಜೆಪಿಗೆ: ಸುಳಿವು ನೀಡಿದ ಕೇಸರಿ ಪಾಳೆಯ

By Web DeskFirst Published Jul 1, 2019, 1:14 PM IST
Highlights

ಬಿಜೆಪಿ ಸೇರಲು ಮೈತ್ರಿ ಕೂಟದ ಶಾಸಕರು ಸಜ್ಜಾಗಿದ್ದಾರೆ ಎಂದು ಕಮಲ ಪಾಳಯದ ನಾಯಕರೇ ಸುಳಿವು ನೀಡಿದ್ದಾರೆ. ಇತ್ತ ರಾಜೀನಾಮೆ ಸೌಂಡ್ ಮಾಡುತ್ತಿರುವಾಗಲೇ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಬೆಂಗಳೂರು [ಜು.1] : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.  ಅಲ್ಲದೇ ಇನ್ನೂ ಕೆಲಸ ಶಾಸಕರು ಮೈತ್ರಿ ಕೂಟ ತೊರೆಯಲಿದ್ದಾರೆ ಎನ್ನಲಾಗುತ್ತಿದೆ. 

ಇದೇ ವೇಳೆ ಬಿಜೆಪಿ ನಾಯಕರೋರ್ವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಮೈತ್ರಿ ಕೂಟ ಅತೃಪ್ತ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುಳಿವು ನೀಡಿದ್ದಾರೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಮೋದಿ ನಾಯಕತ್ವವನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ರಾಜ್ಯದಲ್ಲಿಯೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಇದು ಬಿಜೆಪಿಯತ್ತ ವಾಲಲು ಕಾರಣ ಎಂದರು.

ರಾಜೀನಾಮೆ ಪರ್ವ: ಗೌಪ್ಯ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ!

ನರೇಂದ್ರ ಮೋದಿ ನಾಯಕತ್ವವನ್ನು ಇಡೀ ದೇಶದ ಜನರೇ ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬೆಳೆಸಲು ಯಡಿಯೂರಪ್ಪ 50 ವರ್ಷದಿಂದಲೂ ಕೂಡ ಶ್ರಮಿಸಿದ್ದಾರೆ. ಆ ಕಾರಣಕ್ಕೆ ಅನೇಕ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. 

click me!