ವಿಶ್ವಾಸ ಮತ ಮುಗಿಯುತ್ತಲೇ ಸ್ವಗೃಹದಲ್ಲಿ ರೆಬಲ್ ಶಾಸಕ ಪ್ರತ್ಯಕ್ಷ

By Web DeskFirst Published Jul 24, 2019, 10:38 PM IST
Highlights

ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡ ಮೇಲೆ ರೆಬಲ್ ಶಾಸಕರ ಟೀಂನಲ್ಲಿ ಗುರುತಿಸಿಕೊಂಡಿದ್ದ ಶಾಸಕ ಶಿವರಾಮ ಹೆಬ್ಬಾರ್ ತವರಿಗೆ ವಾಪಸಾಗಿದ್ದಾರೆ.

ಶಿರಸಿ/ಬೆಂಗಳೂರು[ಜು. 24]  ಅತೃಪ್ತ ಶಾಸಕ ಶಿವರಾಮ ಹೆಬ್ಬಾರ್ ಸ್ವಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮುಂಬಯಿ ಮೂಲಕ ಯಲ್ಲಾಪುರಕ್ಕೆ ಆಗಮಿಸಿದ ಶಾಸಕ‌ ಹೆಬ್ಬಾರ್ ಯಲ್ಲಾಪುರದ ತಮ್ಮ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬುಧವಾರ ಸಂಜೆ ಮುಂಬೈನಿಂದ ಹೊರಟಿದ್ದ ಹೆಬ್ಬಾರ್ ಯಲ್ಲಾಪುರಕ್ಕೆ ಆಗಮಿಸಿದ್ದಾರೆ. ಜುಲೈ 6ರಂದು ಮೊದಲೊಮ್ಮೆ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಕೊಟ್ಟಿದ್ದ ಶಾಸಕ ಹೆಬ್ಬಾರ್ ಸ್ಪೀಕರ್ ಬುಲಾವ್ ಮೇಲೆ ಮತ್ತೆ ವಿಶೇಷ ವಿಮಾನದಲ್ಲಿ ಆಗಮಿಸಿ ಉಳಿದ ಶಾಸಕರೊಂದಿಗೆ ಜು. 11 ರಂದು ಸ್ಪೀಕರ್ ಎದುರೆ ಕುಳಿತು ರಾಜೀನಾಮೆ ಬರೆದುಕೊಟ್ಟಿದ್ದರು. ರಾಜೀನಾಮೆ ಕೊಟ್ಟು ಮರುಕ್ಷಣೆವೇ ಮತ್ತೆ ಮುಂಬೈಗೆ ಹಾರಿದ್ದರು.

ಡೆಡ್ಲಿ ಕಾಂಬಿನೇಶನ್.. ಗೊತ್ತಿರದ ಉತ್ತರ ಕೊಟ್ಟ ಅತೃಪ್ತರ ಜಾತಿ ಲೆಕ್ಕಾಚಾರ

ಹಲವು ದಿನಗಳ ಚರ್ಚೆಯ ತರುವಾಯ ಜುಲೈ 23 ರಂದು ಸಂಜೆ ಕುಮಾರಸ್ವಾಮಿ ತಮ್ಮ ದೋಸ್ತಿ ಸರ್ಕಾರದ ವಿಶ್ವಾಸ ಯಾಚಿಸಿದ್ದರು. ವಿಶ್ವಾಸಮತದ  ಪರ 99 ಮತಗಳು ಬಂದಿದ್ದರೆ ವಿರುದ್ಧವಾಗಿ 105 ಮತಗಳು ಬಂದಿದ್ದವು. ಶಿವರಾಮ ಹೆಬ್ಬಾರ್ ಸೇರಿದಂತೆ 20 ಶಾಸಕರು ಸದನಕ್ಕೆ ಗೈರಾಗಿದ್ದರು.

ಅತೀ ಜರೂರು ಕೆಲಸದ ನಿಮಿತ್ತ ಕ್ಷೇತ್ರಕ್ಕೆ ಬಂದಿದ್ದೇನೆ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ನಾವು ಒಂದು ಟೀಮ್ ಆಗಿ ಹೋಗಿದ್ದೇವೆ. ಒಂದೇ ನಿಲುವಿನಲ್ಲಿ ಇದ್ದೇವೆ. ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ರಾಜೀನಾಮೆ ಒಪ್ಪಿಕೊಳ್ಳಬೇಕು ಎಂದು ಸುಪ್ರಿಂಕೋರ್ಟಗೆ ಅಫಿಡವಿಟ್ ಸಲ್ಲಿಸಿದ್ದೇವೆ. ಸ್ಪೀಕರ್ ಒಪ್ಪಿಕೊಳ್ಳುತ್ತಾರೆಂಬ ಭರವಸೆ ಇದೆ. ನಾಳೆ ಸ್ಪೀಕರ್ ಭೇಟಿ ಆಗುವುದಿಲ್ಲ.‌ ಸೂಕ್ತ ಸಂದರ್ಭದಲ್ಲಿ ಭೇಟಿ ಮಾಡುತ್ತೇವೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡುತ್ತ ಸ್ಪಷ್ಟನೆ ನೀಡಿದ್ದಾರೆ.


 

ಕರ್ನಾಟಕ ರಾಜಕೀಯ ರಣರಂಗ: ಆರಂಭದಿಂದ ಅಂತ್ಯದವರೆಗೆ

click me!