ಏ ಜೀ, ಓ ಜೀ: ಮಸೂದ್ ಅಜರ್ ಜೀ ಎಂದ ಬಿಜೆಪಿ ಸಂಸದ!

Published : Jul 24, 2019, 09:29 PM IST
ಏ ಜೀ, ಓ ಜೀ: ಮಸೂದ್ ಅಜರ್ ಜೀ ಎಂದ ಬಿಜೆಪಿ ಸಂಸದ!

ಸಾರಾಂಶ

ಮಸೂದ್ ಅಜರ್ ಮೇಲೆ ಅದೇನು ಪ್ರೀತಿ, ಗೌರವ?| ಮಸೂದ್ ಅಜರ್ ಜೀ ಎಂದು ಸಂಬೋಧಿಸಿದ ಬಿಜೆಪಿ ಸಂಸದ| ಮಸೂದ್ ಅಜರ್ ಜೀ ಎಂದ ಬಿಜೆಪಿ ಸಂಸದ ವಿಷ್ಣು ದಯಾಳ್ ರಾಮ್| ಯುಎಪಿಎ ಮೇಲಿನ ಚರ್ಚೆ ವೇಳೆ ವಿಷ್ಣು ದಯಾಳ್ ಎಡವಟ್ಟು|

ನವದೆಹಲಿ(ಜು.23): ಭಾರತದ ಬಹುತೇಕ ರಾಜಕೀಯ ನಾಯಕರಿಗೂ , ಪಾಕ್’ನ ಉಗ್ರ ಮಸೂದ್ ಅಜರ್’ಗೂ ಅದೇನೊ ಸುಮಧುರ ಸಂಬಂಧವಿದ್ದಂತಿದೆ.

ಮಸೂದ್ ಅಜರ್’ನ ಪ್ರಸ್ತಾಪ ಬಂದಾಗಲೆಲ್ಲಾ ಆತನಿಗೆ ಭರಪೂರ ಮರ್ಯಾದೆ ಕೊಡುವ ನಾಯಕರಿಗೇನು ಕಮ್ಮಿಯಿಲ್ಲ. 

ಈ ಹಿಂದೆ ಮಸೂದ್’ನನ್ನು ಮಸೂದ್ ಅಜರ್ ಜೀ ಎಂದು ಸಂಭೋಧಿಸಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ದಿಗ್ವಿಜಯ್ ಸಿಂಗ್ ಟ್ರೋಲ್’ಗೊಳಗಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೀಗ ಬಿಜೆಪಿ ಸಂಸದರೊಬ್ಬರು ಪಾಕ್ ಉಗ್ರನನ್ನು ಮಸೂದ್ ಅಜರ್ ಜೀ ಎಂದು ಕರೆದು ಪೇಚಿಗೆ ಸಿಲುಕಿದ್ದಾರೆ. ವಿಷ್ಣು ದಯಾಳ್ ರಾಮ್ ಅವರೇ ಮಸೂದ್’ನನ್ನು ಜೀ ಎಂದು ಕರೆದ ಬಿಜೆಪಿ ಸಂಸದ.

  ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕ (ಯುಎಪಿಎ)ದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ, ವಿಷ್ಣು ದಯಾಳ್ ಭಯೋತ್ಪಾದಕರ ಪಟ್ಟಿಯನ್ನು ಹೇಳುವಾಗ ಬಾಯ್ತಪ್ಪಿನಿಂದ ಮಸೂದ್’ನನ್ನು ಮಸೂದ್ ಅಜರ್ ಜೀ ಎಂದು ಹೇಳಿದರು.

ತಕ್ಷಣವೇ ಎಚ್ಚೆತ್ತುಕೊಂಡ ವಿಷ್ಣು ದಯಾಳ್, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮಸೂದ್ ಅಜರ್ ಎಂದು ಮತ್ತೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ