ತನ್ನ ರಾಜಿನಾಮೆ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ

Published : Jan 30, 2017, 04:42 AM ISTUpdated : Apr 11, 2018, 12:59 PM IST
ತನ್ನ ರಾಜಿನಾಮೆ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ, ಕಾಂಗ್ರೆಸ್ ಗೆ  ದಿಢೀರ್ ರಾಜೀನಾಮೆ ನೀಡಿರುವುದಕ್ಕೆ ಕೆಲ ಕಾರಣಗಳನ್ನು ಕೊಟ್ಟಿದ್ದಾರೆ. ಆತ್ಮಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದ ಕಡೆ ನಾನಿರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸುಮ್ಮನಿರುವುದರ ಹಿಂದೆ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದೆ. ಆ ಕಾರಣಗಳೇನು ಇಲ್ಲಿದೆ ವಿವರ

ಬೆಂಗಳೂರು(ಜ.30): ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ, ಕಾಂಗ್ರೆಸ್ ಗೆ  ದಿಢೀರ್ ರಾಜೀನಾಮೆ ನೀಡಿರುವುದಕ್ಕೆ ಕೆಲ ಕಾರಣಗಳನ್ನು ಕೊಟ್ಟಿದ್ದಾರೆ. ಆತ್ಮಗೌರವ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದ ಕಡೆ ನಾನಿರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸುಮ್ಮನಿರುವುದರ ಹಿಂದೆ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದೆ. ಆ ಕಾರಣಗಳೇನು ಇಲ್ಲಿದೆ ವಿವರ

-ಪಕ್ಷದಲ್ಲಿ ಸೇವಾ ಹಿರಿತನಕ್ಕೆ ಬೆಲೆ ಕೊಡಲಿಲ್ಲ . ತಮ್ಮ ಅನುಭವ ಪರಿಗಣಿಸದೇ ಪಕ್ಷದಲ್ಲಿ ಸೈಡ್​​ಲೈನ್​ ಮಾಡಲಾಯಿತು.

-ಕಾಂಗ್ರೆಸ್'​ಗೆ ಈಗ ಜನ ಸಮುದಾಯದ ಲೀಡರ್​'ಗಳು ಬೇಕಾಗಿಲ್ಲ ಅನಿಸುತ್ತದೆ. ವಯಸ್ಸಿನ ನೆಪವೊಡ್ಡಿ, ಮೂಲೆಗುಂಪು ಮಾಡಿದ್ದು ಎಷ್ಟು ಸರಿ?

-ನನಗೆ ಆತ್ಮಗೌರವ, ಸ್ವಾಭಿಮಾನ ಮತ್ತು ಹಿರಿತನ ಮುಖ್ಯ. ಹಿರಿತನಕ್ಕೆ ಬೆಲೆ ಕೊಡದಿದ್ದಕ್ಕೆ ನೋವಿನಿಂದ ತೆಗೆದುಕೊಂಡ ತೀರ್ಮಾನ

-ವಿದೇಶಾಂಗ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಕ್ಕೆ ಕಾರಣ ಕೊಡಲಿಲ್ಲ.

-ರಾಜ್ಯಸಭಾ ಸ್ಥಾನ ಕೊಡುತ್ತಿಲ್ಲ ಅಂತಾ ಸೋನಿಯಾ ಗಾಂಧಿ ನೇರವಾಗಿ ಹೇಳಲಿಲ್ಲ

ಇದಿಷ್ಟು ರಾಜೀನಾಮೆ ನೀಡಿರುವುದಕ್ಕೆ ಎಸ್. ಎಂ ಕೃಷ್ಣ ಕೊಟ್ಟ ಕಾರಣಗಳಾದರೆ, ಹೈಕಮಾಂಡ್ ಸುಮ್ಮನಾಗಿರುವುದ ಹಿಂದೆ ಕೆಲವು ಕಾರಣಗಳೂ ಇವೆ.

-ಎಸ್​. ಎಂ. ಕೃಷ್ಣ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ

-ಕೆಪಿಸಿಸಿ ಅಧ್ಯಕ್ಷ, ಸಿಎಂ, ಸಚಿವ, ರಾಜ್ಯಪಾಲ ಸ್ಥಾನವನ್ನು ಕೊಟ್ಟಿದೆ

-ಶಾಸಕಾಂಗ ಮತ್ತು ಸಾಂವಿಧಾನಿಕ ಅಧಿಕಾರಗಳನ್ನು ಅನುಭವಿಸಿದ್ದಾರೆ

-ಸಕ್ರಿಯ ರಾಜಕಾರಣದಲ್ಲಿರಲೂ ಅವರಿಗೆ ಆರೋಗ್ಯ ಸಹಕರಿಸುತ್ತಿಲ್ಲ

-ವಿದೇಶಾಂಗ ಸಚಿವರಾಗಿದ್ದಾಗ ಭಾರತದ ಬದಲು ಪೋರ್ಚುಗಲ್ ಭಾಷಣ ಓದಿದ್ದು

ಒಟ್ಟಿನಲ್ಲಿ ಅಜಯ್ ಮಾಕನ್ ಮಾತನ್ನು ಕೇಳಿದರೆ ಎಸ್. ಎಂ ಕೃಷ್ಣ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಷ್ಟೊಂದು ಮಹತ್ವವಾಗಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಒಟ್ಟಾರೆ  ರಾಜೀನಾಮೆಗೆ ಕಾರಣವನ್ನು ಅಚ್ಚುಕಟ್ಟಾಗಿ ಕೃಷ್ಣ ಅವರು ಕಟ್ಟಿಕೊಟ್ಟಿದ್ದರೂ ಮುಂದಿನ ನಡೆಯ ಬಗ್ಗೆ  ಗುಟ್ಟು ಬಿಟ್ಟುಕೊಟ್ಟಿಲ್ಲ.

ಕಿರಣ್​  ಹನಿಯಡ್ಕ, ಪೊಲಿಟಿಕಲ್​  ಬ್ಯೂರೋ, ಸುವರ್ಣ ನ್ಯೂಸ್​.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!