ಬುದ್ಧಿ ಹೇಳಿದ್ದಕ್ಕೆ ದಂಪತಿ ಮೇಲೆ ಹಲ್ಲೆ ನಡೆಸಿದ ಅಪ್ಪ, ಮಗ

Published : Jan 30, 2017, 02:59 AM ISTUpdated : Apr 11, 2018, 12:42 PM IST
ಬುದ್ಧಿ ಹೇಳಿದ್ದಕ್ಕೆ ದಂಪತಿ ಮೇಲೆ ಹಲ್ಲೆ ನಡೆಸಿದ ಅಪ್ಪ, ಮಗ

ಸಾರಾಂಶ

ರಸ್ತೆಯಲ್ಲಿ ಯಾರಾದರೂ ಸರಿಯಾಗಿ ವಾಹನ ಚಲಾಯಿಸದೇ, ಯರ್ರಾಬಿರ್ರಿ ಓಡಿಸಿದರೆ ಸಹಜವಾಗಿ ಬುದ್ದಿವಾದ ಹೇಳುತ್ತಾರೆ. ಹೀಗೆ ಬುದ್ದಿವಾದ ಹೇಳಿದವರ ಮೇಲೆ ಅಪ್ಪ-ಮಗ ಸೇರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಚಿತ್ರದುರ್ಗ(ಜ.30): ರಸ್ತೆಯಲ್ಲಿ ಯಾರಾದರೂ ಸರಿಯಾಗಿ ವಾಹನ ಚಲಾಯಿಸದೇ, ಯರ್ರಾಬಿರ್ರಿ ಓಡಿಸಿದರೆ ಸಹಜವಾಗಿ ಬುದ್ದಿವಾದ ಹೇಳುತ್ತಾರೆ. ಹೀಗೆ ಬುದ್ದಿವಾದ ಹೇಳಿದವರ ಮೇಲೆ ಅಪ್ಪ-ಮಗ ಸೇರಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಡ್ಡದಸಂತೇನಹಳ್ಳಿಯಲ್ಲಿ .   ಸರಿಯಾಗಿ ಜೀಪ್ ಓಡಿಸು ಎಂದು ಬುದ್ಧಿಮಾತು ಹೇಳಿದಕ್ಕೆ ತಿಪ್ಪೇಸ್ವಾಮಿ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ ಜಗಳ ಬಿಡಿಸಲು ಬಂದ ತಿಪ್ಪೇಸ್ವಾಮಿ ಹೆಂಡತಿ ಮಮತಾಳ ಮೇಲೂ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಕೈಗಳು ಮುರುದು ಹೋಗುವಂತೆ ಹೊಡೆದಿದ್ದಾರೆ.

ಸಾಕ್ಷಪ್ಪ  ಎಂಬಾತ ಈ ರೀತಿ ಪುಂಡಾಟಿಕೆ ಮೆರೆದಿದ್ದಾನೆ. ಈತನಿಗೆ ಈತನ  ತಂದೆ ಮಹಾದೇವಪ್ಪ ಕೂಡಾ ಸಾಥ್​ ನೀಡಿದ್ದಾನೆ. ಮೊದಲಿನಿಂದಲೂ ಸಾಕ್ಷಪ್ಪ ನಡುವಳಿಕೆ ಸರಿಯಾಗಿಲ್ಲ. ಕೆಲ ವರ್ಷಗಳ ಹಿಂದೆ ತಿಪ್ಪೇಸ್ವಾಮಿ ಮಮತಾ ದಂಪತಿ ಮಗಳ ಕೈಹಿಡಿದು ಎಳೆದಾಡಿ ಬಸ್ ಸ್ಟಾಂಡ್ನಲ್ಲಿನಲ್ಲಿ ಒದೆ ತಿಂದು ಪೊಲೀಸ್ ಅತಿಥಿಯಾಗಿದ್ದ. ಆಗ ಪ್ರಕರಣ ವಾಪಸ್ ಪಡೆಯುವಂತೆ ಇನ್ನಿಲ್ಲದೆ ಕರಸರತ್ತು ನಡೆಸಿದ್ದ ಇದೇ ದ್ವೇಷ ಇಟ್ಟುಕೊಂಡು ಈಗ ಬುದ್ದಿಮಾತಿಗೆ ಹಲ್ಲೆಮಾಡಿ ದ್ವೇಷ ತೀರಿಸಿಕೊಂಡಿದ್ದಾನಂತೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 20 ಲಕ್ಷ ಅಕ್ರಮ ವಲಸಿಗರು? ಪೊಲೀಸರ ಲೆಕ್ಕದಲ್ಲಿ ಕೇವಲ 485 ಮಂದಿ!
india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ