ಕೇರಳದ ಭೀಕರ ಸ್ಥಿತಿಗೆ ಕಾರಣವೇನು?

By Web DeskFirst Published Aug 20, 2018, 11:34 AM IST
Highlights

ಕೇರಳ ಹಾಗೂ ಕೊಡಗಿನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹವೆಂಬುದು ಭಾರತಕ್ಕೆ ಪ್ರತಿವರ್ಷದ ಶಾಪ. ಇರುವುದರಲ್ಲೇ ದಕ್ಷಿಣ ಭಾರತ ಸುರಕ್ಷಿತವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಾವಿರಾರು ಮಂದಿ ಮರಣ ಹೊಂದುತ್ತಾರೆ. ವಿಶ್ವಬ್ಯಾಂಕ್‌ನ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಪ್ರವಾಹದಿಂದ ಮರಣ ಹೊಂದುವವರ ಪೈಕಿ ಐವರಲ್ಲಿ ಒಬ್ಬರು ಭಾರತೀಯರು. 

ಬೆಂಗಳೂರು (ಆ. 20): ಕೇರಳ ಹಾಗೂ ಕೊಡಗಿನಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹವೆಂಬುದು ಭಾರತಕ್ಕೆ ಪ್ರತಿವರ್ಷದ ಶಾಪ. ಇರುವುದರಲ್ಲೇ ದಕ್ಷಿಣ ಭಾರತ ಸುರಕ್ಷಿತವಾಗಿದ್ದು, ಈಶಾನ್ಯ ಭಾರತದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಾವಿರಾರು ಮಂದಿ ಮರಣ ಹೊಂದುತ್ತಾರೆ.

ವಿಶ್ವಬ್ಯಾಂಕ್‌ನ ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ ಪ್ರವಾಹದಿಂದ ಮರಣ ಹೊಂದುವವರ ಪೈಕಿ ಐವರಲ್ಲಿ ಒಬ್ಬರು ಭಾರತೀಯರು. ಇದಕ್ಕೆಲ್ಲ ಕಾರಣ ಹವಾಮಾನ ಬದಲಾವಣೆ ಎಂದು ವಿಶ್ವಬ್ಯಾಂಕ್ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಭೀಕರ ಸ್ಥಿತಿಗೆ ಕಾರಣವೇನು? ಇಲ್ಲಿವರೆಗೆ ಬಲಿಯಾದವರೆಷ್ಟು ಜನ? ಭವಿಷ್ಯದಲ್ಲಿ ನೆರೆ, ಪ್ರವಾಹ ಇನ್ನಷ್ಟು ಹೆಚ್ಚಲಿದೆಯೇ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

ಕೇರಳದ ಭೀಕರ ಸ್ಥಿತಿಗೆ ಕಾರಣವೇನು?

ಸಾಮಾನ್ಯವಾಗಿ ಮಾನ್ಸೂನ್‌ನಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಕೇರಳವೂ ಒಂದು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ಬಾರಿ ಪ್ರತಿವರ್ಷಕ್ಕಿಂತ ಶೇ.37 ರಷ್ಟು ಹೆಚ್ಚು ಮಳೆಯಾಗಿದೆ. ಅಂದರೆ ಈ ಬಾರಿ 2,191.1 ಎಂಎಂ ನಷ್ಟು ಮಳೆಯಾಗಿದೆ. ಕಳೆದ ವರ್ಷ 1,855 ಎಂಎಂ ಮಳೆಯಾಗಿತ್ತು. ಇತ್ತ ಪರಿಸರವಾದಿಗಳು ಅರಣ್ಯನಾಶವೇ ಕೇರಳದ ಬೀಕರ ಸ್ಥಿತಿಗೆ ಕಾರಣ ಎಂದಿದ್ದಾರೆ. ಅಲ್ಲದೆ ಕೇರಳದಲ್ಲಿ ಒಟ್ಟು 41 ನದಿಗಳು, 80 ಅಣೆಕಟ್ಟುಗಳಿದ್ದು ಎಲ್ಲವೂ ಭರ್ತಿಯಾಗಿ ಹರಿಯುತ್ತಿವೆ.

ಕೇರಳ ರಾಜ್ಯಕ್ಕಾದ ನಷ್ಟ ಎಷ್ಟು ಗೊತ್ತಾ?

ಶತಮಾನದ ಭೀಕರ ಪ್ರವಾಹದಿಂದಾಗಿ ಕೇರಳ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಇಡೀ ರಾಜ್ಯದ ಜನತೆ ತತ್ತರಗೊಂಡಿದ್ದಾರೆ. ಇದುವರೆಗೆ ಮಹಾಮಳೆಗೆ ಸಿಲುಕಿ 324 ಜನರು ಮೃತಪಟ್ಟಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ 20.000 ಕೋಟಿ ರು. ನಷ್ಟ ಸಂಭವಿಸಿದೆ. ಮಾಹಿತಿಯೊಂದರ ಪ್ರಕಾರ 2,23,000 ಜನರು ಸುಮಾರು 1500 ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕೇರಳ ನೆರೆಪೀಡಿತ ಸಂತ್ರಸ್ತರ ನೆರವಿಗೆ ಹಲವು ರಾಜ್ಯಗಳು ಮುಂದಾಗಿದ್ದು, ಸಾಕಷ್ಟು ಪರಿಹಾರ ನಿಧಿಯೂ ಹರಿದುಬರುತ್ತಿದೆ. 

click me!