
ಮುಂಬೈ(ಸ.05): ಬಿಟೌನ್ ಸೂಪರ್ ಸ್ಟಾರ್ಗಳ ಶೀತಲಸಮರ ಮುಂದುವರಿದಿದೆ. ಕಂಗನಾ ಆರೋಪಗಳಿಗೆ ಪ್ರತಿಯಾಗಿ ಹೃತಿಕ್ ರೋಷನ್ ಏಪ್ರಿಲ್ ಮುಂಬೈಪೊಲೀಸರಿಗೆ 29 ಪುಟಗಳ ದೂರು ಸಲ್ಲಿಸಿದ್ರು. ತಮ್ಮ ಪರ ವಕೀಲ ಮಹೇಶ್ ಜೇಠ್ಮಲಾನಿ ದೂರು ಸಲ್ಲಿಸಿದ್ದು, ಮೊಬೈಲ್, ಲ್ಯಾಪ್'ಟಾಪ್ ಸೇರಿ ಹಲವು ದಾಖಲೆ ನೀಡಿದರು. ಈ ಎಲ್ಲಾ ದಾಖಲೆಗಳು ಸುವರ್ಣ ನ್ಯೂಸ್ ಸೋದರ ಸಂಸ್ಥೆ ರಿಪಬ್ಲಿಕ್ ಗೆ ಲಭ್ಯವಾಗಿದೆ. ಇದರಲ್ಲಿ ಕಂಗನಾ ರನಾವತ್ ಹೃತಿಕ್ ರೋಷನ್‍ಗೆ ಕಳುಹಿಸಿದ್ದ ಕೆಲ ಈ-ಮೇಲ್ ಗಳು ಬಹಿರಂಗಗೊಂಡಿವೆ.
ಹೃತಿಕ್ ರೋಷನ್ ದಾಖಲೆ ಸಲ್ಲಿಸಿ ತನಿಖೆಗೆ ಸಿದ್ಧ ಎಂಬ ಸಂದೇಶ ಸಾರಿದ್ದಾರೆ. ತನಿಖೆಗೆ ಬರಲಿ ಎಂದು ಪದೇ ಪದೇ ಹೇಳುತ್ತಿದ್ದ ಕಂಗನಾ ಮಾತ್ರ ಗಫ್ಚುಫ್ ಆಗಿದ್ದಾರೆ. ಕಂಗಾನಾ ರನಾವತ್ ಹಾಗೂ ಹೃತಿಕ್ ರೋಷನ್ ನಡುವೆ ಕೈಟ್ ಸಿನಿಮಾದ ಬಳಿಕ ಫೈಟ್ ಶುರುವಾಗಿತ್ತು. ಹೃತಿಕ್ ರೋಷನ್ ತನ್ನ ಹಿಂದೆ ಬಿದ್ದಿದ್ದು, ಹಲವು ಸಂದೇಶಗಳನ್ನ ಕಳುಹಿಸಿ ನನಗೆ ಹಿಂಸೆ ನೀಡಿದ್ದಾರೆಂದು ಕಂಗಾನಾ ಆರೋಪಿಸಿದ್ದಳು. ಅಲ್ಲದೇ, ಹೃತಿಕ್ ರೋಷನ್ ವಿರುದ್ಧ ಆತ ನನ್ನ ಶೋಷಣೆ ಮಾಡುತ್ತಿದ್ದಾನೆ, ದೂಷಿಸುತ್ತಿದ್ದಾನೆ, ನನ್ನ ಇ-ಮೇಲ್ ಅಕೌಂಟ್ ಹ್ಯಾಕ್ ಆರೋಪಿಸಿ ದೂರು ಕೂಡ ನೀಡಿದ್ದರು.
ಆದರೆ, ಇವರಿಬ್ಬರ ನಡುವಿನ ಸಮರ, ಇತ್ತೀಚಿನ ದಿನಗಳಲ್ಲಿ ತಾರಕ್ಕೇರಿತ್ತು. ಹೋದಲ್ಲಿ ಬಂದಲೆಲ್ಲಾ ನಟಿ ಕಂಗನಾ, ಹೃತಿಕ್ ರೋಷನ್ ಹಾಗೂ ರಾಕೇಶ್ ರೋಷನ್ ವಿರುದ್ಧ ಮಾತನಾಡುತ್ತಲೇ ಇದ್ದರು. ಈ ಹಿನ್ನೆಲೆ ಇದೀಗ, ಕಂಗನಾ ವಿರುದ್ಧ ಹೃತಿಕ್ ರೋಶನ್ ಕೂಡ ಕಾನೂನು ಸಮರ ಸಾರಿದ್ದು ಪೊಲೀಸ್ ಠಾಣೆ ಮೆಟ್ಟಿಲಿದ್ದಾರೆ.
ಹೃತಿಕ್ ವಿರುದ್ಧ ಟ್ವೀಟ್
ಇತ್ತ ಹೃತಿಕ್ ರೋಷನ್ ಕಂಗಾನಾ ವಿರುದ್ಧ ದಾಖಲಿಸುತ್ತಿದ್ದ ದೂರಿನ ಪ್ರತಿ ಬಹಿರಂಗವಾಗುತ್ತಿದ್ದಂತೆ ಅತ್ತ ಕಂಗನಾ ಸಹೋದರಿ ರಂಗೋಲಿ ಚಂಡೇಲ್ ಹೃತಿಕ್ ವಿರುದ್ಧ ಸರಣಿ ಟ್ವೀಟ್ ಮಾಡಿದ್ದಾರೆ. ಕಂಗಾನಾ ಕಳುಹಿಸಿದ ಈ-ಮೇಲ್ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ತನ್ನ ಸಹೋದರಿ ಕಂಗನಾಳ ರಕ್ಷಣೆಗೆ ನಿಂತಿರುವ ರಂಗೋಲಿ ಚಂಡೇಲ್.. ಹೃತಿಕ್ ರೋಷನ್ ವಿರುದ್ಧ ಹಿಗ್ಗಾಮುಗ್ಗಾ ಟ್ವೀಟ್ ಮಾಡಿದ್ದಾರೆ.
ಹೃತಿಕ್ ವಿರುದ್ಧ ಕಂಗನಾ ಸಹೋದರಿ ಟ್ವೀಟ್
ಎಲ್ಲರಿಗೂ ಗೊತ್ತು ಯಾರು ಯಾರ ಹಿಂದೆ ಬಿದ್ದಿದ್ದರು ಅಂತ. ಕಂಗನಾಳ ಬಗ್ಗೆ ಚಿಂತಿಸುವುದನ್ನ ಬಿಟ್ಟುಬಿಡು. ಅವಳು ನಿನಗಿಂತ ಎಷ್ಟೋ ಮುಂದೆ ಸಾಗಿದ್ದಾಳೆ. ಅಂಕಲ್ ನೀನು ನಿನ್ನ ಮಕ್ಕಳು ಮತ್ತು ಪತ್ನಿಯ ಬಗ್ಗೆ ಗಮನಹರಿಸು.
ಒಟ್ಟಿನಲ್ಲಿ ಬಾಲಿವುಡ್'ನಲ್ಲಿ ಭಾರೀ ಸದ್ದು ಮಾಡಿದ್ದ ಈ ಇಬ್ಬರು ಸ್ಟಾರ್'ಗಳ ಫೈಟ್ ಇದೀಗ ಮತ್ತೆ ಭಾರೀ ಸದ್ದು ಮಾಡುತ್ತಿದೆ. ತಾನು ಮಾಡಿದ್ದ ಸರಣಿ ಈ ಮೇಲ್ ಗಳ ಬಗ್ಗೆ ಕಂಗಾನಾ ರನಾವತ್ ಏನು ಹೇಳುತ್ತಾರೆ ಕಾದು ನೋಡ್ಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.