ಸೋಮಣ್ಣನ ರಾಜಿನಾಮೆ ನಾಟಕದ ಹಿಂದಿದೆ ಬ್ಲ್ಯಾಕ್‌ ಮೇಲ್ ತಂತ್ರ!

By Suvarna Web DeskFirst Published Jan 19, 2017, 4:25 PM IST
Highlights

ಸೋಮಣ್ಣ ಕಾಂಗ್ರೆಸ್​ ಹೋಗುತ್ತಾರೆ ಅನ್ನೊ ಸುದ್ದಿ ಹಬ್ಬಲಿ ಅಂತ ಸೋಮಣ್ಣ ಬಯಸಿದ್ಯಾಕೆ? ಕಾಂಗ್ರೆಸ್​ ಗುಮ್ಮ ತೋರಿಸುವ ಹಿಂದಿದ್ದ ಸೋಮಣ್ಣನ ಉದ್ದೇಶವೇನು? ಸೋಮಣ್ಣಗೆ ನಿಜಕ್ಕೂ ಆಗಬೇಕಾಗಿದ್ದೇನು? ಆಗಿದ್ದೇನು? ಸೋಮಣ್ಣ ಕಾಂಗ್ರೆಸ್​'ಗೆ ಹೋಗುತ್ತಾರೆ ಎನ್ನುವ ಹೈಡ್ರಾಮಾದ ಹಿಂದಿನ ಅಸಲಿಯತ್ತು ಇಲ್ಲಿದೆ ನೋಡಿ

ಬೆಂಗಳೂರು(ಜ.20): ಸೋಮಣ್ಣ ಕಾಂಗ್ರೆಸ್​ ಹೋಗುತ್ತಾರೆ ಅನ್ನೊ ಸುದ್ದಿ ಹಬ್ಬಲಿ ಅಂತ ಸೋಮಣ್ಣ ಬಯಸಿದ್ಯಾಕೆ? ಕಾಂಗ್ರೆಸ್​ ಗುಮ್ಮ ತೋರಿಸುವ ಹಿಂದಿದ್ದ ಸೋಮಣ್ಣನ ಉದ್ದೇಶವೇನು? ಸೋಮಣ್ಣಗೆ ನಿಜಕ್ಕೂ ಆಗಬೇಕಾಗಿದ್ದೇನು? ಆಗಿದ್ದೇನು? ಸೋಮಣ್ಣ ಕಾಂಗ್ರೆಸ್​'ಗೆ ಹೋಗುತ್ತಾರೆ ಎನ್ನುವ ಹೈಡ್ರಾಮಾದ ಹಿಂದಿನ ಅಸಲಿಯತ್ತು ಇಲ್ಲಿದೆ ನೋಡಿ

ಸೋಮಣ್ಣನ ಈ ಹೈಡ್ರಾಮಾದಿಂದ ಇಂತದೊಂದು ಪ್ರಶ್ನೆ ಉದ್ಭವಿಸಿದೆ. ‘ಸೋಮಣ್ಣ  ಕಾಂಗ್ರೆಸ್'​ಗೆ ಹೋಗ್ತಾರಂತೆ’’ ಎನದನುವ ಸುದ್ದಿ ಸೋಮಣ್ಣನ ಅಂಗಳದಿಂದಲೇ ಹುಟ್ಟಿತ್ತು. ಈ ಸುದ್ದಿ ಸುಳ್ಳು ಅಂತ ಹೇಳಲ್ಲ’ ಅಂತಲೂ ಸೋಮಣ್ಣನೇ ಹೇಳಿ ಸುದ್ದಿಗೆ ವೇಗ ನೀಡಿದ್ದರು. ಆದರೆ ಕಡೆಗೆ ಯಾರೋ ಗೊಂದಲ ಸೃಷ್ಟಿಸುತ್ತಿದ್ದಾರೆ ಅಂತೇಳಿ ಕಾಂಗ್ರೆಸ್ ಸೇರ್ತಾರಂತೆ ಎಂಬ ಹೈಡ್ರಾಮಾಕ್ಕೆ  ಫುಲ್ ಸ್ಟಾಪ್ ಇಟ್ಟಿದ್ದಾರೆ.

Latest Videos

2-3 ದಿನಗಳಿಂದ ಯಾರೋ ಗೊಂದಲ ಮೂಡಿಸುತ್ತಿದ್ದಾರೆ ಅಂತ ನಿನ್ನೆ ಸಂಜೆ ಹೇಳಿದ ಸೋಮಣ್ಣಗೆ ಕೆಲ ಗಂಟೆಗಳ ಮೊದಲು ‘‘ಕಾಂಗ್ರೆಸ್ ಸೇರುವ ಸುದ್ದಿ ಸುಳ್ಳು ಅಂತ ಹೇಳಲ್ಲ’’ ಅಂತ ಅವರೇ ಹೇಳಿದ್ದು ಮರೆತುಹೋಗಿರಲಿಲ್ಲ. ಆದರೆ ಎರಡೂ ಹೇಳಿಕೆಗಳ ಹಿಂದೆ ತಮ್ಮ ವೈಯಕ್ತಿಕ ಲಾಭದ ಲೆಕ್ಕಾಚಾರ ಇತ್ತು ಅನ್ನೋದು ಅಸಲಿ ಕತೆ.

ಸೋಮಣ್ಣನ ಹೈಡ್ರಾಮಾಕ್ಕೆ ಬಿಎಸ್‌'ವೈ, ಶೋಭಾ ಕಾರಣ!

ಸೋಮಣ್ಣ ಈ ಹೈಡ್ರಾಮಾಕ್ಕೆ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ. ಇತ್ತೀಚಿಗೆ ವಿಧಾನಸಭೆಯಿಂದ ವಿಧಾನಪರಿಷತ್'​ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಂದು ಅಭ್ಯರ್ಥಿಯನ್ನ ಬಹಳ ಸುಲಭವಾಗಿ ಹಾಗೂ ಇನ್ನೋರ್ವ ಅಭ್ಯರ್ಥಿಯನ್ನ ಕಷ್ಟದಿಂದ ಗೆಲ್ಲಿಸಿಕೊಳ್ಳಬೇಕಾಗಿತ್ತು. ಸುಲಭವಾಗಿ ಗೆಲ್ಲಿಸಿಕೊಳ್ಳಬಹುದಾದ ಮೊದಲ ಅಭ್ಯರ್ಥಿಯ ಸ್ಥಾನಕ್ಕೆ ಸೋಮಣ್ಣ ಆಕಾಂಕ್ಷಿ ಆಗಿದ್ದರು. ಆದರೆ ಬಿಎಸ್‌ವೈ ಮುಂದಿಟ್ಟಿದ್ದು, ಪಕ್ಷದ ಸಂಘಟನೆಯೇ ಗೊತ್ತಿಲ್ಲದ ಲೆಹರ್​ಸಿಂಗ್ ಹೆಸರನ್ನ.

ಆ ಹಂತದಲ್ಲಿ ಸೋಮಣ್ಣ ನವರ ಕೈಹಿಡಿದು ಸೋಮಣ್ಣನವರನ್ನೇ ಮೊದಲ ಅಭ್ಯರ್ಥಿ ಮಾಡಿದ್ದು  ಅನಂತಕುಮಾರ್, ಆರ್​. ಅಶೋಕ್ ಆಂಡ್​ ಟೀಮ್​. ಆದರೆ ಇತ್ತೀಚಿಗೆ ಅಶೋಕ್ ಹಾಗೂ ಅನಂತಕುಮಾರ್​ ಒಪ್ಪಿಗೆಯೊಂದಿಗೇ ರಾಯಣ್ಣ ಬ್ರಿಗೇಡ್​ನ ವೆಂಕಟೇಶ್​ಮೂರ್ತಿ ಬಿಜೆಪಿಯಿಂದ ಅಮಾನತುಗೊಂಡಾಗ ಸೋಮಣ್ಣಗೆ ಅಭದ್ರತೆ ಕಾಡಿತು.

ಇವರೂ ಯಡಿಯೂರಪ್ಪ ಜತೆ ಸೇರಿಬಿಟ್ಟರೆ ನನ್ನ ಭವಿಷ್ಯವೇನು ಅಂತ ಚಿಂತಿಸಿದ್ರು. ಆಗಲೇ ಅವರ ಆಪ್ತ ಕೊಟ್ಟಿದ್ದು ಸೋಮಣ್ಣ ‘ಕಾಂಗ್ರೆಸ್​ಗೆ ಹೋಗ್ತಾರೆ’ ಅಂತ ಸುದ್ದಿ ಹಬ್ಬಿಸುವ ಪ್ಲಾನ್​. ಈ ಸುದ್ದಿ ಹಬ್ಬುತ್ತಿದಂತೆ, ಅನಂತ್ ಕುಮಾರ್, ಸೋಮಣ್ಣನಿಗೆ ಫೋನ್ ಮಾಡಿ, ನಿಮ್ಮೊಂದಿಗೆ ನಾವಿದ್ದೇವೆ, ಪಕ್ಷ ಬಿಡಬೇಡಿ ಅಂತಾ ಹೇಳಿದ್ದಾರೆ. ಇದ್ರಿಂದ ನನ್ನ ರಕ್ಷಣೆಗೆ ಅನಂತ್ ಕುಮಾರ್ ಇದ್ದಾರೆಂದು ನಿಟ್ಟುಸಿರು ಬಿಟ್ಟರು. ನಾನು ಕಾಂಗ್ರೆಸ್ ಸೇರ್ತಿನಿ ಅಂತ ಯಾರೋ ಗೊಂದಲ ಸೃಷ್ಟಿಸ್ತಿದ್ದಾರೆ’ ಅಂತಾ ಹೈಡ್ರಾಮಾಕ್ಕೆ ತೆರೆಎಳೆದರು.

ಹೀಗೆ ಸೋಮಣ್ಣ ತಮಗೇನು ಬೇಕೋ ಅದನ್ನ ಕಾಂಗ್ರೆಸ್ ಗುಮ್ಮ ತೋರಿಸಿ ಟ್ರ್ಯಾಕ್​ಗೆ ತಂದುಕೊಂಡಿದ್ದಾರೆ. ಅಲ್ಲಿಗೆ "ಸೋಮಣ್ಣ ಕಾಂಗ್ರೆಸ್ ಸೇರ್ತಾರಂತೆ’’ ಎನ್ನುವ ಹೈಡ್ರಾಮ ಮಾಡಿ ಕೊನೆಗೆ ಬಿಎಸ್‌ವೈರನ್ನು ಬ್ಲ್ಯಾಕ್ ಮೇಲ್ ಮಾಡಿರೋದು ಸಾಬೀತಾಗುತ್ತಾ ಬರುತ್ತಿದೆ.

ವರದಿ: ವೀರೇಂದ್ರ ಉಪ್ಪುಂದ, ಸುವರ್ಣ ನ್ಯೂಸ್

click me!