
ಬೆಂಗಳೂರು(ಸೆ.22): ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಲಾಬಿ ತೀವ್ರಗೊಳಿಸುತ್ತಿದ್ದು, ಹಿರಿಯ ಐಎಎಸ್ ಅಕಾರಿಗಳಾದ ರತ್ನಪ್ರಭಾ ಮತ್ತು ಸುಭಾಶ್ಚಂದ್ರ ಖುಂಟಿಯಾ ಹೆಸರುಗಳು ಮುಂಚೂಣಿಯಲ್ಲಿವೆ. ಕೇಂದ್ರ ಸೇವೆಯಲ್ಲಿದ್ದು ಖುಂಟಿಯಾ ಅವರನ್ನು ರಾಜ್ಯ ಸೇವೆಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನೇ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಸರ್ಕಾರ ಆಸಕ್ತಿ ತೋರಿಸಿದೆ ಎನ್ನಲಾಗಿತ್ತಾದರೂ ದಿನ ಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ.
ಮುಖ್ಯ ಕಾರ್ಯದರ್ಶಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ ಎನ್ನಲಾಗಿದೆ. ಕೊನೆ ಸಂದರ್ಭದಲ್ಲಿ ಬದಲಾವಣೆಗಳಾಗುವ ಸಂಭವ ಇದೆ. ಪರಿಣಾಮ ಮುಖ್ಯ ಕಾರ್ಯದರ್ಶಿ ಹುದ್ದೆ ರತ್ನಪ್ರಭಾ ಅವರಿಗೆ ಒಲಿಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠರೂ ರಂಗಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತನ್ನ ನಿರ್ಧಾರ ಬದಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಹಾಲಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಈ ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದುತ್ತಿದ್ದು ಮುಂದಿನ ಸಿ.ಎಸ್ ಆಗಿ ಹಿರಿಯ ಐಎಎಸ್ ಅಕಾರಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದ ಸುಭಾಶ್ಚಂದ್ರ ಖುಂಟಿಯಾ ಅವರನ್ನು ಸಿಎಂ ಈ ಮೊದಲು ಆಯ್ಕೆ ಮಾಡಿದ್ದರು. ಕೇಂದ್ರ ಸೇವೆಯಿಂದ ಅವರನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಪತ್ರ ಬರೆದಿದ್ದರು. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಪ್ರಧಾನಿ ಮೋದಿ ಕೂಡ ಇದಕ್ಕೆ ಸಮ್ಮತಿಸಿದ್ದರು. ಇದೀಗ ಖುಂಟಿಯಾರನ್ನು ಕೇಂದ್ರ ಸೇವೆಯಿಂದ ಬಿಡುಗಡೆಗೊಳಿಸುವ ಆದೇಶವನ್ನು ತಡೆಹಿಡಿಯುವಂತೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯಲು ಚಿಂತನೆ ನಡೆಸಿದ್ದಾರೆಂದು ಇಂಗ್ಲೀಷ್ ದೈನಿಕ ಟೈಮ್ಸ್ ಆ್ ಇಂಡಿಯಾ ವರದಿ ಮಾಡಿದೆ.
ಕಾಂಗ್ರೆಸ್ ಹಿರಿಯಾಳುಗಳಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್,ಎಐಸಿಸಿ ಪರಿಶಿಷ್ಟ ಜಾತಿ ಪಂಗಡಗಳ ಕೋಶದ ಎ. ರಾಜು ಮೊದಲಾದವರು ಮುಂದಿನ ಸಿ.ಎಸ್ ಆಗಿ ರತ್ನಪ್ರಭಾರನ್ನು ಆಯ್ಕೆ ಮಾಡುವಂತೆ ಸಿಎಂಗೆ ಸೂಚಿಸಬೇಕೆಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರಿಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್ ಸಿಎಂಗೆ ಕರೆ ಮಾಡಿ ಮಹಿಳೆ, ದಲಿತ ಜನಾಂಗಕ್ಕೆ ಸೇರಿರುವ ರತ್ನಪ್ರಭಾರನ್ನೇ ಆಯ್ಕೆ ಮಾಡುವಂತೆ ಸೋನಿಯಾ ಸೂಚಿಸಿದ್ದಾರೆಂದು ತಿಳಿಸಿದ್ದರು. ಈ ಕುರಿತು ತಾನು ಖುದ್ದಾಗಿ ಮೇಡಂ ಸೋನಿಯಾಗೆ ವಿವರಿಸುವುದಾಗಿ ಸಿಎಂ ಹೇಳಿದರೂ ಸೋನಿಯಾರವರು ಗಂಟಲು ಬೇನೆಯಿಂದ ಬಳಲುತ್ತಿರುವುದರಿಂದ ಯಾರ ಕರೆಗಳನ್ನೂ ಸ್ವೀಕರಿಸುತ್ತಿಲ್ಲವೆಂದು ಅವರು ತಿಳಿಸಿದ್ದರು. ಹೀಗಾಗಿ ಸಿಎಂ ಸೋನಿಯಾರೊಂದಿಗೆ ಮಾತುಕತೆ ಸಾಧ್ಯವಾಗಿಲ್ಲವೆಂದು ಟೈಮ್ಸ್ ಹೇಳಿದೆ.
ಕೇಂದ್ರದ ಮಾನವ ಸಂಪನ್ಮೂಲ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಭಾಶ್ಚಂದ್ರ ಕುಂಟಿಯ 1981ರ ಬ್ಯಾಚ್‌ನ ಐಎಎಸ್ ಅಕಾರಿಯಾಗಿದ್ದು 16 ತಿಂಗಳ ಸೇವಾವ ಹೊಂದಿದ್ದಾರೆ. ರತ್ನಪ್ರಭಾ ಆಯ್ಕೆ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಆಗ್ರಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.