ಟಿಸಿಎಸ್ ಮಾರಾಟಕ್ಕೆ ಮುಂದಾಗಿದ್ದ ಟಾಟಾ: ಮಿಸ್ತ್ರಿ ಆರೋಪ

Published : Nov 22, 2016, 01:24 PM ISTUpdated : Apr 11, 2018, 01:00 PM IST
ಟಿಸಿಎಸ್ ಮಾರಾಟಕ್ಕೆ ಮುಂದಾಗಿದ್ದ ಟಾಟಾ: ಮಿಸ್ತ್ರಿ ಆರೋಪ

ಸಾರಾಂಶ

ಟಾಟಾ ಸನ್ಸ್ ಅಧ್ಯಕ್ಷಸ್ಥಾನದಿಂದ ಮಿಸಿ ಅವರನ್ನು ಕಿತ್ತೊಗೆದ ನಂತರ ನಡೆಯುತ್ತಿರುವ ಆರೋಪ ಪ್ರತ್ಯಾರೋಪ ಸಮರ ಈಗ ಹೊಸ ಮಜಲುಮುಟ್ಟಿದೆ. ರತನ್ ಅವರ ನಿರ್ಧಾರದಿಂದ ಟಿಸಿಎಸ್ ಮರಣಶಯ್ಯೆ ಸಮೀಪಿಸಿದ ಅನುಭವ ಟಿಸಿಎಸ್‌ಗಾಗಿದೆ ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ.

ಮುಂಬೈ(ನ.23): ಟಾಟಾ ಸಮೂಹದ ನಗದು ಕರೆಯುವ ಕಾಮದೇನು ಎಂದೇ ಹೆಸರಾಗಿರುವ ಟಿಸಿಎಸ್ ಕಂಪನಿಯನ್ನು ರತನ್ ಟಾಟಾ ಐಬಿಎಂಗೆ ಮಾರಾಟ ಮಾಡಲು ಮುಂದಾಗಿದ್ದರು ಎಂಬ ಹೊಸ ಬಾಂಬನ್ನು ಸೈರಸ್ ಮಿಸ್ತ್ರಿ ಸಿಡಿಸಿದ್ದಾರೆ.

ಟಾಟಾ ಸನ್ಸ್ ಅಧ್ಯಕ್ಷಸ್ಥಾನದಿಂದ ಮಿಸಿ ಅವರನ್ನು ಕಿತ್ತೊಗೆದ ನಂತರ ನಡೆಯುತ್ತಿರುವ ಆರೋಪ ಪ್ರತ್ಯಾರೋಪ ಸಮರ ಈಗ ಹೊಸ ಮಜಲುಮುಟ್ಟಿದೆ. ರತನ್ ಅವರ ನಿರ್ಧಾರದಿಂದ ಟಿಸಿಎಸ್ ಮರಣಶಯ್ಯೆ ಸಮೀಪಿಸಿದ ಅನುಭವ ಟಿಸಿಎಸ್‌ಗಾಗಿದೆ ಎಂದು ಮಿಸ್ತ್ರಿ ಬಣ್ಣಿಸಿದ್ದಾರೆ. ಟಾಟಾ ಅವರ ಅಹಂ ನಿಂದಾಗಿ ಕೊರಸ್ ಕಂಪನಿಯನ್ನು ಹೆಚ್ಚಿನ ದರಕ್ಕೆ ಖರೀದಿಸಲಾಯಿತು. ಬೋರ್ಡ್ ಸದಸ್ಯರು ಮತ್ತು ಹಿರಿಯ ಅಕಾರಿಗಳು 12 ಬಿಲಿಯನ್‌ಗೆ ಕೋರಸ್ ಕಂಪನಿ ಖರೀದಿಸುವುದಕ್ಕೆ ವಿರೋಸಿದ್ದರು. ಆದರೂ ಟಾಟಾ ತಮ್ಮ ಅಹಂನಿಂದಾಗಿ ಹೆಚ್ಚಿನ ದರ ನೀಡಿ ಖರೀದಿಸಿದರು ಎಂದು ಹೇಳಿದ್ದಾರೆ. ಟಾಟಾ ಸಮೂಹದಲ್ಲಿ ಟಿಸಿಎಸ್ ಅತಿ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಮತ್ತು ಹೆಚ್ಚು ಲಾಭ ತರುತ್ತಿರುವ ಕಂಪನಿ. ಅದನ್ನೇ ಟಾಟಾ ಮಾರಾಟಕ್ಕೆ ಮುಂದಾಗಿದ್ದರು ಎಂದು ಆರೋಪಿಸುವ ಮೂಲಕ ಮಿಸ್ತ್ರಿ ರತನ್ ಟಾಟಾ ಅವರಿಗೆ ದೊಡ್ಡ ಪೆಟ್ಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ