ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರಣ ಹಾಗೂ ಕೊಲೆ ಪ್ರಕರಣ ಸುದ್ದಿ ಕೇಳಿದ ದಿನದಿಂದ ದೇಶದ ಪ್ರತಿಯೊಬ್ಬರು ಮರುಗುತ್ತಲೇ ಇದ್ದರು. ನೋವು, ಆಕ್ರೋಶ ಹೊರಹಾಕುತ್ತಲೇ ಇದ್ದರು. ಆದರೆ ಇಂದು ಬೆಳೆಗ್ಗೆ ಬಂದ ಸುದ್ದಿ ಆರಂಭದಲ್ಲೇ ನಂಬಲೇ ಸಾಧ್ಯವಾಗಿಲ್ಲ. ರೇಪ್ ಆರೋಪಿಗಳನ್ನು ಹೈದರಾಬಾದ್ ಪೊಲೀಸ್ ಕಮಿಷನರ್, ಕನ್ನಡಿಗ ವಿಶ್ವನಾಥ್ ಸಜ್ಜನರ್ ಎನ್‌ಕೌಂಟರ್ ಮಾಡಿದ್ದರು. ಅತ್ಯಾಚಾರಿ ಆರೋಪಿಗಳ ಎನ್‌ಕೌಂಟರ್, ದೇಶದೆಲ್ಲೆಡೆ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ, ಎನ್‌ಕೌಂಟ್ ಕುರಿತು ಪರ ವಿರೋಧ ಸೇರಿದಂತೆ ಡಿಸೆಂಬರ್ 6ರ ಟಾಪ್ 10 ಸುದ್ದಿ ಇಲ್ಲಿದೆ.
1) ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!...
ಹೈದರಾಬಾದ್ ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. ಪ್ರಕರಣದ ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಮಹಜರು ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಬೇರೆ ವಿಧಿ ಇಲ್ಲದ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಾರೆ.
2) ಹೈದರಾಬಾದ್ ಅತ್ಯಾಚಾರಿಗಳಿಗೆ ಗುಂಡಿಟ್ಟ ಸಿಂಗಂ, ಕನ್ನಡಿಗ ಸಜ್ಜನರ್!
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳು ಎನ್‌ಕೌಂಟರ್‌ಗೆ ಬಳಿಯಾಗಿದ್ದಾರೆ. ಇಡೀ ದೇಶವೇ ಹೈದರಾಬಾದ್ ಪೊಲಿಸರ ನಡೆಯನ್ನು ಸಮರ್ಥಿಸಿಕೊಂಡಿದ್ದು, ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡಕ್ಕೆ ಅಭಿನಂದಿಸಿದ್ದಾರೆ. ಈ ಎನ್‌ಕೌಂಟರ್ ನಡೆಸಿದ ಪೊಲೀಸ್ ತಂಡದ ನೇತೃತ್ವ ವಹಿಸಿದ IPS ವಿ. ಸಿ. ಸಜ್ಜನರ್ ಕನ್ನಡಿಗ ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ.
3) ಕನ್ನಡಿಗನಿಂದ ಕನ್ನಡದಲ್ಲಿ ವಿವರಣೆ: ಶೂಟೌಟ್ ಬಗ್ಗೆ ವಿಶ್ವನಾಥ್ ಸರ್ ಹೇಳಿದ್ದಿಷ್ಟು!
ದಿಶಾ ಹತ್ಯಾಚಾರ ಆರೋಪಿಗಳ ಎನ್‌ಕೌಂಟರ್ ಕುರಿತು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗ ವಿಶ್ವನಾಥ್ ಸಜ್ಜನರ್ ಮಾಹಿತಿ ನೀಡಿದ್ದಾರೆ. ದಿಶಾ ಅತ್ಯಾಚಾರ ಹಾಗೂ ಹತ್ಯೆ, ಆರೋಪಿಗಳ ಬಂಧನ, ತನಿಖೆ ಹಾಗೂ ಎನ್‌ಕೌಂಟರ್ ಕುರಿತು ವಿಶ್ವನಾಥ್ ಸುದೀರ್ಘವಾಗಿ ಮಾಹಿತಿ ನೀಡಿದರು.
4) ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್
ಹೈದರಾಬಾದ್ ಎನ್‌ಕೌಂಟರ್ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕ್ಷಮಾದಾನ ಇಲ್ಲ, ಕ್ಷಮಾದಾನ ಅರ್ಜಿ ಸ್ವೀಕರಿಸುವುದಿಲ್ಲ ಎಂಬ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಈ ನಿರ್ಧಾರ ಅತ್ಯಾಚಾರಿಗಳಲ್ಲಿ ಮತ್ತಷ್ಟು ನಡುಕ ಹುಟ್ಟಿಸಿದೆ.
5) ಕೊಂದಿದ್ದು ಸರಿ, ತಪ್ಪು: ಆರೋಪಿಗಳ ಕುಟುಂಬದವರ ಮಿಶ್ರ ಪ್ರತಿಕ್ರಿಯೆ!
ದಿಶಾ ಹತ್ಯಾಚಾರಿಗಳ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬ ವರ್ಗ ಮಿಶ್ರ ಪ್ರತಿಕ್ರಿಯೆ ನೀಡಿದೆ. ಕೆಲವರು ಎನ್‌ಕೌಂಟರ್‌ನ್ನು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ಎನ್‌ಕೌಂಟರ್ ಕುರಿತು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
6) ಹೈದರಾಬಾದ್ ಪೊಲೀಸರನ್ನು ನೋಡಿ ಕಲಿರಿ: ಯುಪಿ ಪೊಲೀಸರಿಗೆ ಮಾಯಾವತಿ ಸಲಹೆ!
ದಿಶಾ ಹತ್ಯಾಚಾರಿಗಳನ್ನು ಕೊಂದ ಹೈದರಾಬಾದ್ ಪೊಲೀಸರ ನಡೆಯನ್ನು, ಉತ್ತರಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಉತ್ತರಪ್ರದೇಶ ಪೊಲೀಸರು, ಹೈದರಾಬಾದ್ ಪೊಲೀಸರಿಂದ ಪಾಠ ಕಲಿಯಬೇಕು ಎಂದು ಮಾಯಾವತಿ ಸಲಹೆ ನೀಡಿದ್ದಾರೆ.
7) 'ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ತು'.
ಹೈದರಾಬಾದ್ ಎನ್‌ಕೌಂಟರ್‌ನಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೖದಿದ್ದ ನಾಲ್ವರು ಆರೋಪಿಗಳು ಹತರಾಗಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ತಂಡಕ್ಕೆ ಧನ್ಯವಾದ ಎಂದಿರುವ ಸಂತ್ರಸ್ತೆಯ ತಂದೆ 'ನನ್ನ ಮಗಳ ಆತ್ಮಕ್ಕೇ ಈಗ ಶಾಂತಿ ಸಿಕ್ತು' ಎಂದು ಭಾವುಕರಾಗಿದ್ದಾರೆ.
8) ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!
ಹೈದರಾಬಾದ್‌ನಲ್ಲಿ ವೈದ್ಯೆ ಮೇಲೆ ನಡೆದ ರೇಪ್ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ನಡೆದ ಬೆನ್ನಲ್ಲೇ, ದೇಶದಾದ್ಯಂತ ಜನರು ಪಟಾಕಿ ಸಿಡಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಜನರು ಎನ್‌ಕೌಂಟರ್ ನಡೆಸಿದ ವಿ. ಸಿ,. ಸಜ್ಜನರ್ ನೇತೃತ್ವದ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
9) ದಿಶಾ ರೇಪ್ ಆರೋಪಿಗಳ ಹತ್ಯೆ: ಸೆಲೆಬ್ರಿಟಿಗಳ ರಿಯಾಕ್ಷನ್ ಇದು
ಶುಕ್ರವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎನ್‌ಕೌಂಟರ್ ಘಟನೆ ಭಾರತೀಯರಿಗೆ ಭರವಸೆ ಮತ್ತು ಧೈರ್ಯ ತುಂಬಿದೆ. ಸಾಮಾಜಿಕ ಜಾಲತಾಣದಲ್ಲಿ #JusticforDisha #TelanganaPolice #Dishacase #Encounter ಟ್ರೆಂಡ್ ಆಗುತ್ತಿವೆ. ಇದಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿ ತಾರೆಯರು ಟ್ಟೀಟ್ ಮಾಡುವ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ..
10) ಕಾನೂನುಬಾಹಿರ ಎನ್‌ಕೌಂಟರ್ ಅಪಾಯ: ತರೂರ್, ಮನೇಕಾ ಅಭಿಪ್ರಾಯ!...
ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಈ ಮಧ್ಯೆ ಪೊಲೀಸರ ಎನ್‌ಕೌಂಟರ್ ಪರ-ವಿರೋಧದ ಚರ್ಚೆಯೂ ಶುರುವಾಗಿದೆ.