SSLCಯಲ್ಲಿ ಅಭಿರಾಮ್ ಜಿಲ್ಲೆಗೇ ಮೊದಲ ಸ್ಥಾನ: ವೈದ್ಯನ ಎಡವಟ್ಟಿನಿಂದ ಸಿಹಿಸುದ್ದಿ ಕೇಳಲು ವಿದ್ಯಾರ್ಥಿಯೇ ಬದುಕಿಲ್ಲ

Published : May 13, 2017, 02:57 AM ISTUpdated : Apr 11, 2018, 12:41 PM IST
SSLCಯಲ್ಲಿ ಅಭಿರಾಮ್ ಜಿಲ್ಲೆಗೇ ಮೊದಲ ಸ್ಥಾನ: ವೈದ್ಯನ ಎಡವಟ್ಟಿನಿಂದ ಸಿಹಿಸುದ್ದಿ ಕೇಳಲು ವಿದ್ಯಾರ್ಥಿಯೇ ಬದುಕಿಲ್ಲ

ಸಾರಾಂಶ

ಆತ ನೂರಾರು ಕನಸುಗಳನ್ನು ಹೊತ್ತುಕೊಂಡ SSLC ಪರೀಕ್ಷೆ ಬರೆದಿದ್ದ. ಅವನ ಪ್ರಯತ್ನಕ್ಕೆ ಫಲ ಎಂಬಂತೆ  ಎಸ್ಎಸ್ಎಲ್ ಸಿಯಲ್ಲಿ ಜಿಲ್ಲೆಗೆ ರ್ಯಾಂಕ್ ಬಂದಿದ್ದಾನೆ. ಆದರೆ ಈ ಸುದ್ದಿ ಕೇಳೋಕ್ಕೆ ಆತನೇ ಇಲ್ಲ. ನಕಲಿ ವೈದ್ಯನ ಮಾನಗೇಡಿ ಕೃತ್ಯಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಕೋಲಾರ(ಮೇ.13): ಆತ ನೂರಾರು ಕನಸುಗಳನ್ನು ಹೊತ್ತುಕೊಂಡ SSLC ಪರೀಕ್ಷೆ ಬರೆದಿದ್ದ. ಅವನ ಪ್ರಯತ್ನಕ್ಕೆ ಫಲ ಎಂಬಂತೆ  ಎಸ್ಎಸ್ಎಲ್ ಸಿಯಲ್ಲಿ ಜಿಲ್ಲೆಗೆ ರ್ಯಾಂಕ್ ಬಂದಿದ್ದಾನೆ. ಆದರೆ ಈ ಸುದ್ದಿ ಕೇಳೋಕ್ಕೆ ಆತನೇ ಇಲ್ಲ. ನಕಲಿ ವೈದ್ಯನ ಮಾನಗೇಡಿ ಕೃತ್ಯಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ  ವಡ್ಡಹಳ್ಳಿ ನಿವಾಸಿಯಾದ ಅಭಿರಾಮ್ ಕಿವಿ ನೋವಿಗೆ  ಚಿಕಿತ್ಸೆ ಪಡೆಯಲು ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್'ಗೆ ಹೋಗಿದ್ದಾನೆ.  ಕ್ಲಿನಿಕ್'ನಲ್ಲಿದ್ದ  ನಕಲಿ ವೈದ್ಯ ನವೀನ್ ಕುಮಾರ್, ಇಂಜೆಕ್ಷನ್ ನೀಡುತ್ತಿದಂತೆ  ಅಭಿರಾಮ್  ಕುಸಿದು ಬಿದ್ದಿದ್ದಾನೆ. ನಂತರ   ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ  ಚಿಕಿತ್ಸೆ  ಫಲಕಾರಿಯಾಗದೆ ಅಭಿರಾಮ್ ಮೃತಪಟ್ಟಿದ್ದಾನೆ.  ವೈದ್ಯನ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಸಾವನ್ನಪ್ಪಿರುವುದು ಪೋಷಕರ ಆರೋಪ.  ಈ ಕುರಿತು ಬೇತಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪೋಷಕರ ಸಂಭ್ರಮ ನೋಡಿ ಅಭಿರಾಮ್ ಫೋಷಕರು ಕಣ್ಣಿರು ಹಾಕುತ್ತಿದ್ದಾರೆ. ಒಟ್ಟಿನಲ್ಲಿ  ನಕಲಿ ವೈದ್ಯನ ಮಾನಗೇಡಿ ಕೆಲಸಕ್ಕೆ  ಬಾಳ ಬದುಕಬೇಕಾಗಿದ್ದ ಅಭಿರಾಮ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಬುಲಾವ್ ನೀಡಿದ್ರೂ ಬಾರದ ಅಧಿಕಾರಿ; ಐಎಎಸ್ ಪಂಕಜ್ ಕುಮಾರ್ ಪಾಂಡೆಗೆ ನೋಟೀಸ್?
ಮಾದಪ್ಪನ ಭಕ್ತರ ಮೇಲೆ ಚಿರತೆ ದಾಳಿ: ಪ್ರಕರಣ ಮರುಕಳಿಸದಂತೆ ಅಧಿಕಾರಿಗಳಿಗೆ ಸಚಿವ ವೆಂಕಟೇಶ್ ಸೂಚನೆ