ತ್ರೀ ಈಡಿಯಟ್ಸ್‌: ಚತುರ್‌ ಮೂತ್ರ ವಿಸರ್ಜನೆ ಮಾಡಿದ್ದ ಗೋಡೆ ಕೆಡವಲು ನಿರ್ಧಾರ

By Web DeskFirst Published Sep 25, 2018, 11:13 AM IST
Highlights

ತ್ರೀ ಈಡಿಯಟ್ಸ್‌ನಲ್ಲಿ ಚತುರ್‌ ಮೂತ್ರ ವಿಸರ್ಜನೆ ಮಾಡಿದ್ದ ಗೋಡೆ ಕೆಡವಲು ನಿರ್ಧಾರ | ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿರುವುದರಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ | 

ಲೇಹ್‌ (ಸೆ. 25): ಅಮೀರ್‌ ಖಾನ್‌ ಅಭಿನಯದ ತ್ರೀ ಈಡಿಯಟ್ಸ್‌ ಚಿತ್ರದ ಮೂಲಕ ಖ್ಯಾತಿಗಳಿಸಿದ್ದ ಇಲ್ಲಿನ ಡ್ರೂಕ್‌ ಪದ್ಮಾ ಕಾರ್ಪೋ ಸ್ಕೂಲ್‌, ರಾಂಚೋ ಗೋಡೆಯನ್ನು ಕೆಡವಲು ನಿರ್ಧರಿಸಿದೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತಿರುವುದರಿಂದ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಚಿತ್ರದಲ್ಲಿ ಬರುವ ಚತುರ್‌ ಎಂಬ ಪಾತ್ರ ಗೋಡೆಯ ಮೇಲೆ ಮೂತ್ರ ವಿಸರ್ಜನೆಗೆ ಯತ್ನಿಸುವಾಗ ವಿದ್ಯಾರ್ಥಿಗಳು ಕಂಡುಹಿಡಿದ ಉಪಕರಣವೊಂದರಿಂದ ವಿದ್ಯುತ್‌ ಶಾಕ್‌ ತಗುಲಿಸಿಕೊಳ್ಳುವ ದೃಶ್ಯವನ್ನು ಇಲ್ಲಿ ಚಿತ್ರೀಕರಿಕರಿಸಲಾಗಿತ್ತು.

ಆ ಬಳಿಕ ಗೋಡೆ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಗೋಡೆಯ ಮೇಲೆ ತ್ರೀ ಈಡಿಯಟ್ಸ್‌ ಚಿತ್ರದ ದೃಶ್ಯಗಳನ್ನು ಬಿಡಿಸಲಾಗಿದೆ. ಈ ಗೋಡೆಯ ಮುಂದೆ ನಿಂತು ಪ್ರವಾಸಿಗರು ಫೋಟೋ ತೆಗೆಸಿಕೊಳ್ಳುವುದು, ಕಸ ಎಸೆದು ಹೊಗುತ್ತಿರುವುದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಗೋಡೆಯನ್ನು ಕೆಡವಲು ನಿರ್ಧರಿಸಲಾಗಿದೆ ಎಂದು ಶಾಲೆಯ ಪ್ರಿನ್ಸಿಪಾಲ್‌ ಸ್ಟಾನ್ಜಿನ್‌ ಕುಂಜಾಂಗ್‌ ಹೇಳಿದ್ದಾರೆ.

click me!