‘ಮಾಸ್ಟರ್‌ಪ್ಲ್ಯಾನ್‌ ಮಾಡುವವರು ಮಾಡ್ತಾನೆ ಇರ್ತಾರೆ’ ಸಿದ್ದು ಬಗ್ಗೆ ಸಿಎಂ ಹೀಗಂದಿದ್ಯಾಕೆ!

Published : Dec 24, 2018, 05:48 PM ISTUpdated : Dec 24, 2018, 06:28 PM IST
‘ಮಾಸ್ಟರ್‌ಪ್ಲ್ಯಾನ್‌ ಮಾಡುವವರು ಮಾಡ್ತಾನೆ ಇರ್ತಾರೆ’ ಸಿದ್ದು ಬಗ್ಗೆ ಸಿಎಂ ಹೀಗಂದಿದ್ಯಾಕೆ!

ಸಾರಾಂಶ

ಸಿಎಂ ಕುಮಾರಸ್ವಾಮಿ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿರುವ ಬಗ್ಗೆ ಸ್ವತಃ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಅಸಮಾಧಾನಿತರ ಸಮಾಧಾನ ಮಾಡುವ ಬಗ್ಗೆಯೂ ಮಾತನ್ನಾಡಿದ್ದಾರೆ.

ಬಾಗಲಕೋಟೆ[ಡಿ.24] ರಾಜಕಾರಣದಲ್ಲಿ ತಂತ್ರಗಾರಿಕೆ ಸಹಜ ಪ್ರಕ್ರಿಯೆ. ನಾನ್ಯಾಕೆ ಬೇರೆಯವರ ಬಗ್ಗೆ ಮಾತನಾಡಲಿ. ಅಲ್ಲೊಬ್ಬ ಮೇಲಿದ್ದಾನೆ ಅವನೇನು ಅವನು ಎಲ್ಲವನ್ನು ನೋಡುತ್ತಿರುತ್ತಾನೆ ಎಂದು  ಹೇಳಿದರು. ಈ ಮೂಲಕ ಯಾವುದನ್ನು ಸ್ಪಷ್ಟವಾಗಿ ಸಿಎಂ ಹೇಳಲಿಲ್ಲ.

ಜಾರಕಿಹೊಳಿ ರಾಜೀನಾಮೆ ನೀಡುವ ವಿಚಾರದ ಕುರಿತು ಮಾತನಾಡಿದ ಸಿಎಂ ಕೆಲವರ ಉದ್ದೇಶಗಳು ತಲುಪದೇ ಹೋದಾಗ ಉದ್ವೇಗದಲ್ಲಿ ಮಾತನಾಡೋದು ಸಹಜ. ಇದಕ್ಕೆಲ್ಲಾ ನನ್ನ ಅಭಿಪ್ರಾಯದಲ್ಲಿ ಕಾಲವೇ ಉತ್ತರ ಕೊಡಲಿದೆ. ನಾನು ಕೂಡಾ ಈ ಬಗ್ಗೆ ಎಲ್ಲರ ಜೊತೆ ಚರ್ಚೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕಗ್ಗಂಟಾದ ವಿಸ್ತರಣೆಯಿಂದ 8 ಸಚಿವರಿಗೆ ಖಾತೆ ಹಂಚಿಕೆ ಇಲ್ಲ

ಹಲವರು ನನ್ನ ಜೊತೆ ಒಳ್ಳೆಯ ಸಂಭಂಧ ಹೊಂದಿದ್ದಾರೆ. ರಮೇಶ ಜಾರಕಿಹೊಳಿ ಜತೆಯೂ ಮಾತನಾಡುತ್ತೇನೆ. ರಾಮಲಿಂಗಾ ರೆಡ್ಡಿ ಅವರೊಂದಿಗೂ ಮಾತನಾಡುತ್ತೇನೆ. ಅವರಿಗೆ ಅಸಮಾಧಾನ ಇರೋದು ಸಹಜ. ಅದನ್ನೆಲ್ಲಾ  ಕಾಂಗ್ರೆಸ್ ಸರಿಪಡಿಸುತ್ತದೆ ಎಂದು ಹೇಳಿದರು.

ನಾನು ಮುಂದಿನ ತಿಂಗಳು ಎಲ್ಲರೊಂದಿಗೆ ಸಭೆ ಕರೆಯುತ್ತೇನೆ. ಕರೆದು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೊಂದು ಸುತ್ತು ಮಾತನಾಡುತ್ತೇನೆ. ಲೋಕಸಭೆ ಬಳಿಕ ಮತ್ತೇ ಸಂಪುಟ ವಿಸ್ತರಣೆ ಕಾಂಗ್ರೆಸ್‌ಗೆ ಸಂಬಂಧಿಸಿದ ವಿಚಾರ. ನನಗೆ ಅದರ ಬಗ್ಗೆ ಲಿಮಿಟೇಶನ್ ಇದೆ. ನಾನು ಈ ವಿಷಯವಾಗಿ ಯಾರ ಮೇಲೂ ಹೇರುವವನಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ