ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೊಘಲ್ ವಂಶಸ್ಥನಿಂದ ಚಿನ್ನದ ಇಟ್ಟಿಗೆ!

By Web DeskFirst Published Aug 19, 2019, 12:42 PM IST
Highlights

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕು| ವಿವಾದಿತ ಸ್ಥಳ ನನಗೆ ಸಿಕ್ಕರೆ ರಾಮ ಮಂದಿರ ನಿರ್ಮಿಸ್ತೇನೆ| ರಾಮ ಮಂದಿರಕ್ಕಾಗಿ ಚಿನ್ನದ ಇಟ್ಟಿಗೆ ದಾನ ಮಾಡ್ತೇನೆ: ಮೊಘಲ್ ವಂಶಸ್ಥನ ಘೋಷಣೆ

ನವದೆಹಲಿ[ಆ.19]: ಮೊಘಲ್ ವಂಶದ ಕೊನೆಯ ದೊರೆ ಬಹದ್ದೂರ್ ಶಾ ಜಫರ್ ವಂಶಸ್ಥನೆಂದು ಕರೆಸಿಕೊಳ್ಳುವ ರಾಜಕುಮಾರ ಹಬೀಬುದ್ದೀನ್ ಟುಸೀ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಚಿನ್ನದ ಇಟ್ಟಿಗೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದಿದ್ದಾರೆ.

1529ರಲ್ಲಿ ಮೊಗಲ್ ವಂಶದ ಮೊದಲ ದೊರೆ ಬಾಬರ್ ಅಯೋಧ್ಯೆಯುಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದ. ಹೀಗಾಗಿ ಮೊಘಲ್ ವಂಶದ ಉತ್ತರಾಧಿಕಾರಿಯಾಗಿರುವ ತನಗೇ ಬಾಬ್ರಿ ಮಸೀದಿ ಹಾಗೂ ರಾಮ ಮಂದಿರದ ವಿಚಾರವಾಗಿ ವಿವಾದವೆಬ್ಬಿಸಿರುವ ಭೂಮಿ ನ್ಯಾಯಯುತವಾಗಿ ತನಗೇ ಸೇರಬೇಕೆಂಬುವುದು ಹಬೀಬುದ್ದೀನ್ ವಾದ. 

'ಬಾಬ್ರಿ ಮಸೀದಿ ನಿರ್ಮಿಸಿದ್ದ ಸ್ಥಳದಲ್ಲಿ ಅದಕ್ಕೂ ಮೊದಲು ರಾಮ ಮಂದಿರ ಇತ್ತೆಂಬ ಹಿಂದೂಗಳ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಹಿಗಾಗಿ ಒಂದು ವೇಳೆ ಸುಪ್ರೀಂ ಕೋರ್ಟ್ ಈ ವಿವಾದಿತ ಭೂಮಿಯನ್ನು ನನಗೆ ನೀಡಿದರೆ, ಈ ಇಡೀ ಜಮೀನನ್ನು ನಾನು ರಾಮ ಮಂದಿರ ನಿರ್ಮಿಸಲು ದಾನ ಮಾಡುತ್ತೇನೆ' ಎಂಬುವುದು ಹಬೀಬುದ್ದೀನ್ ಮಾತು.

‘ರಾಮಮಂದಿರ ನಿರ್ಮಾಣ ಯಾವಾಗ ಮೊದಲು ಹೇಳಿ’

ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ನೂರಾರು ಮಂದಿ ಕರ ಸೇವರಕರು ಧ್ವಂಸಗೊಳಿಸಿದ್ದರು. ಇಂದಿಗೂ ಈ ವಿವಾದಿತ ಸ್ಥಳ ಕೋರ್ಟ್ ಅಂಗಳದಲ್ಲಿದ್ದು, ಇದು ಯಾರಿಗೆ ಸೇರಬೇಕು? ಮಸೀದಿ ನಿರ್ಮಾಣವಾಗಬೇಕೋ ಅಥವಾ ಮಂದಿರ ನಿರ್ಮಾಣವಾಗಬೇಕೋ ಎಂಬುವುದು ಇತ್ಯರ್ಥವಾಗಿಲ್ಲ. 

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಬೀಬುದ್ದೀನ್ 'ಹಲವಾರು ಮಂದಿ ಈ ವಿವಾದಿತ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ತಮ್ಮದೇ ಮನವಿ ಸಲ್ಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಬೀಬುದ್ದೀನ್ ನ್ಯಾಯಾಲಯಕ್ಕೆ ಮೊರೆ ಹೋದ ಯಾರೊಬ್ಬರಲ್ಲೂ ಪ್ರಕರಣದ ಕುರಿತು ತಮ್ಮ ವಾದ ಸಾಬೀತುಪಡಿಸಲು ಬೇಕಾದ ಸಾಕ್ಷ್ಯಗಳಿಲ್ಲ. ಹೀಗಾಗಿ ಮೊಘಲ್ ವಂಶಸ್ಥನಾದ ನನಗೆ ಈ ಭೂಮಿ ಸೇರಬೇಕು' ಎಂದಿದ್ದಾರೆ.

ಹಬೀಬುದ್ದೀನ್ ಈಗಾಗಲೇ ಮೂರು ಬಾರಿ ಅಯೋಧ್ಯೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ರಾಮ ಮಂದಿರ ಧ್ವಂಸಗೊಳಿಸಿದಕ್ಕೆ ಹಿಂದೂಗಳಲ್ಲಿ ಕ್ಷಮೆಯನ್ನೂ ಯಾಚಿಸಿದ್ದಾರೆ.

click me!