
ನದಿಗಳ ಪುನಶ್ಚೇತನಕ್ಕೆ ಸದ್ಗುರು ಜಗ್ಗಿ ವಾಸುದೇವ್ ಟೊಂಕ ಕಟ್ಟಿ ನಿಂತಿದ್ದಾರೆ. ಕನ್ಯಾಕುಮಾರಿಯಿಂದ ಹಿಮಾಲಯದ ತನಕ 16 ರಾಜ್ಯಗಳಲ್ಲಿ 'ರಾಲಿ ಫಾರ್ ರಿವರ್' ಎಂಬ ಜಲಾಂದೋಲನ ಹಮ್ಮಿಕೊಂಡಿದ್ದಾರೆ. ಈ ಜನಾಂದೋಲನಕ್ಕೆ ಇಂದು ಕೊಯಮತ್ತೂರಿನಲ್ಲಿ ಚಾಲನೆ ಸಿಕ್ಕಿದೆ.
ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ್ ಈ ಱಲಿಗೆ ಚಾಲನೆ ನೀಡಿದರು. ಕ್ರಿಕೆಟಿಗ ವೀರೇಂದ್ರ ಸೆಹವಾಗ್,ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಪಂಜಾಬ್ ರಾಜ್ಯಪಾಲ್ ವಿ.ಪಿ ಸಿಂಗ್ ಬಾದ್ನೋರೆ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಕೆ. ರಾಮಸ್ವಾಮಿ, ತಮಿಳುನಾಡು ಪೌರಾಡಳಿತ ಸಚಿವ ಎಸ್. ಪಿ ವೇಲುಮನಿ ಈ ಜನಾಂದೋಲನಕ್ಕೆ ಕೈಜೋಡಿಸಿದರು.
ನದಿಗಳ ಉಳಿವು ನಮ್ಮೆಲ್ಲರ ಕರ್ತವ್ಯ.ಈಗಿನ ಪರಿಸ್ಥಿತಿ ಹೀಗೆ ಮುಂದುವರಿದರೆ 25 ವರ್ಷಗಳ ನಂತರ ಪರಿಸ್ಥಿತಿ ಭೀಕರವಾಗಲಿದೆ. ಹೀಗಾಗಿ ಎಲ್ಲರೂ ನದಿ ಉಳಿಸೋಣ ಬನ್ನಿ ಅಂತಾ ಸದ್ಗುರು ಜಗ್ಗಿ ವಾಸುದೇವ್ ಕರೆ ನೀಡಿದರು.
ಇಂದಿನಿಂದ ಹಿಮಾಲಯದ ತನಕ 16 ರಾಜ್ಯಗಳಲ್ಲಿ 'ರಾಲಿ ಫಾರ್ ರಿವರ್' ಎಂಬ ಜಲಾಂದೋಲನ ಶುರುವಾಗಿದೆ. ಈ ಆಂದೋಲನಕ್ಕೆ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಕೂಡಾ ಸಂಪೂರ್ಣ ಬೆಂಬಲವಾಗಿ ನಿಂತಿದೆ. ಸೆಪ್ಟಂಬರ್ 8ಕ್ಕೆ ಜಾಥಾ ಮೈಸೂರಿಗೆ ಆಗಮಿಸಲಿದೆ. ಸೆಪ್ಟಂಬರ್ 9ಕ್ಕೆ ಬೆಂಗಳೂರಿಗೂ ಬರಲಿದ್ದು, ಅಕ್ಟೋಬರ್ 2ರಂದು ದೆಹಲಿಯಲ್ಲಿ ರಾಲಿ ಮುಕ್ತಾಯಗೊಳ್ಳಲಿದೆ.
ನಮ್ಮ ಮುಂದಿನ ಭವಿಷ್ಯಕ್ಕೆ ನದಿಗಳ ರಕ್ಷಣೆ ತುಂಬಾ ಮುಖ್ಯ. ಹಾಗಾಗಿ ನೀವು ಜನಾಂದೋಲನಕ್ಕೆ 80009 80009 ನಂಬರ್ಗೆ ಮಿಸ್ ಕಾಲ್ ನೀಡಿ ಬೆಂಬಲಿಸಿ. ಜೊತೆಗೆ ರಾಜ್ಯದಲ್ಲೂ ನಡೆಯುವ ಱಲಿಯಲ್ಲೂ ಭಾಗಿಯಾಗಿ ನದಿಗಳ ಉಳಿವಿಗೆ ಕೈಜೋಡಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.