ಉತ್ತರ ಕೊರಿಯಾದಿಂದ ಅಣುಬಾಂಬ್ ಪರೀಕ್ಷೆ; ಜಾಗತಿಕವಾಗಿ ತೀವ್ರ ಖಂಡನೆ

By Suvarna Web DeskFirst Published Sep 3, 2017, 8:48 PM IST
Highlights

ಬ್ರಿಕ್ಸ್​ ಸಮ್ಮೇಳನದ ಆರಂಭಕ್ಕೂ ಮುನ್ನವೇ  ಉತ್ತರ ಕೊರಿಯಾ ಅಣು ಬಾಂಬ್​ ಪರೀಕ್ಷೆ ಮಾಡಿದೆ. ಹಿಂದಿಗಿಂತಲೂ ಹತ್ತು ಪಟ್ಟು ಬಲಶಾಲಿಯಾದ ಅಣುಬಾಂಬ್ ಪರೀಕ್ಷೆ​ ಇದಾಗಿದೆ ಎಂದು ಉತ್ತರ ಕೊರಿಯಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ನವದೆಹಲಿ (ಸೆ.03): ಬ್ರಿಕ್ಸ್​ ಸಮ್ಮೇಳನದ ಆರಂಭಕ್ಕೂ ಮುನ್ನವೇ  ಉತ್ತರ ಕೊರಿಯಾ ಅಣು ಬಾಂಬ್​ ಪರೀಕ್ಷೆ ಮಾಡಿದೆ. ಹಿಂದಿಗಿಂತಲೂ ಹತ್ತು ಪಟ್ಟು ಬಲಶಾಲಿಯಾದ ಅಣುಬಾಂಬ್ ಪರೀಕ್ಷೆ​ ಇದಾಗಿದೆ ಎಂದು ಉತ್ತರ ಕೊರಿಯಾ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ಅಮೆರಿಕದ ಎಚ್ಚರಿಕೆ ಮಧ್ಯೆಯೂ ಉ.ಕೊರಿಯಾ ಬಾಂಬ್​ ಪರೀಕ್ಷೆ ಮಾಡಿದ್ದು ಇದರಿಂದ ಚೀನಾ ಮಿತ್ರಕೂಟಕ್ಕೆ ಭಾರೀ ಮುಖಭಂಗವಾಗಿದೆ. ಅಣು ಬಾಂಬ್​ ಪರೀಕ್ಷೆಯಿಂದ ಪ್ರಬಲ ಭೂಕಂಪ ಉಂಟಾಗಿದೆ.

ಕೋರಿಯಾ ಬಾಂಬ್ ಪರೀಕ್ಷೆಯನ್ನು ಚೀನಾ ಕಟುವಾಗಿ ವಿರೋಧಿಸಿದೆ.

ಉತ್ತರ ಕೊರಿಯಾ ಇಂದು ಅಣು ಬಾಂಬ್ ಪ್ರಯೋಗ ಪರೀಕ್ಷೆ ನಡೆಸಿದೆ. ಇದು ಹೀಗೆ ಮುಂದುವರೆದರೆ ಯುಎಸ್’ಗೆ ಅಪಾಯವಾಗಿ ಪರಿಣಮಿಸಲಿದೆ. ಇದೊಂದು ದುಷ್ಟ ರಾಷ್ಟ್ರವಾಗಿದ್ದು, ದೊಡ್ಡ ಬೆದರಿಕೆಯಾಗಿದೆ. ಕೋರಿಯಾದ  ಕೃತ್ಯದಿಂದ ಚೀನಾಗೆ ಭಾರೀ ಮುಜುಗರವಾಗಿದೆ ಎಂದು ಡೊನಾಲ್ಡ್  ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಭಾರತ ಕೂಡಾ ಅಣು ಪರೀಕ್ಷೆಯನ್ನು ತೀವ್ರವಾಗಿ ಖಂಡಿಸಿದೆ. ಇಂತಹ ಕೃತ್ಯದಿಂದ ಜಾಗತಿಕ ಶಾಂತಿ ಕದಡುತ್ತದೆ. ಪ್ರಾದೇಶಿಕ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ ಇದನ್ನು ತಡೆಯಲು ಕೋರಿಯಾಗೆ ಹೇಳುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

(ಸಾಂದರ್ಭಿಕ ಚಿತ್ರ)

click me!