ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರೂ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಕಾಂಗ್ರೆಸ್'ನ ಮೂರು ಅಭ್ಯರ್ಥಿಗಳ ಹಿನ್ನಲೆ ಹೀಗಿದೆ ನೋಡಿ..
ಬೆಂಗಳೂರು(ಮಾ.13): ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರೂ ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಕಾಂಗ್ರೆಸ್'ನ ಮೂರು ಅಭ್ಯರ್ಥಿಗಳ ಹಿನ್ನಲೆ ಹೀಗಿದೆ ನೋಡಿ..
ಚಂದ್ರಶೇಖರ್ ಬಳಿ 15 ಕೋಟಿ ರು.
undefined
ವಿದ್ಯಾರ್ಹತೆ: ಎಂ.ಎ (ಸಾರ್ವಜನಿಕ ಆಡಳಿತ)
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಜಿ.ಸಿ. ಚಂದ್ರಶೇಖರ್ ತಮ್ಮ ಕುಟುಂಬದ ಒಟ್ಟು ಚರ ಮತ್ತು ಸ್ಥಿರಾಸ್ತಿ ಮೌಲ್ಯ 15.67 ಕೋಟಿ ರು. ಎಂದು ಘೋಷಿಸಿಕೊಂಡಿದ್ದಾರೆ. ತಮ್ಮ ಕುಟುಂಬವು 2.64 ಕೋಟಿ ರು. ಚರಾಸ್ತಿ ಹೊಂದಿದ್ದು, ಜಿ.ಸಿ. ಚಂದ್ರಶೇಖರ್ ಬಳಿ 45.75 ಲಕ್ಷ ರು., ಪತ್ನಿ ಡಾ. ಸುಧಾ ಚಂದ್ರಶೇಖರ್ ಬಳಿ 1.06 ಕೋಟಿ ರು., ತಮ್ಮ ಅವಲಂಬಿತರ ಬಳಿ ತಲಾ 56.45 ಲಕ್ಷ ರು. ಸೇರಿ ಒಟ್ಟು 2.64 ಕೋಟಿ ರು. ಚರಾಸ್ತಿ ಇದೆ. ಚರಾಸ್ತಿಯಲ್ಲಿ ತಮ್ಮ ಬಳಿ 5 ಸಾವಿರ ನಗದು, ಬ್ಯಾಂಕ್‌ನಲ್ಲಿ 35.75 ಲಕ್ಷ ಹಣ, ಉಳಿತಾಯ ಯೋಜನೆಗಳಲ್ಲಿ 10 ಲಕ್ಷ ರು. ಇದೆ. ಜತೆಗೆ ತಮ್ಮ ಹೆಸರಿನಲ್ಲಿ ವಿವಿದೆಡೆ 4.53 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಪತ್ನಿ ಹೆಸರಿನಲ್ಲಿ 8.5 ಕೋಟಿ ರು. ಸ್ಥಿರಾಸ್ತಿ ಸೇರಿ ಸುಮಾರು 13 ಕೋಟಿ ರು. ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಹನುಮಂತಯ್ಯ ಆಸ್ತಿ 8.5 ಕೋಟಿ ರು.
ವಿದ್ಯಾರ್ಹತೆ: ಮೈಸೂರು ವಿ.ವಿ.ಯಲ್ಲಿ ಪಿಎಚ್‌ಡಿ ಪದವಿ
ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಮೊದಲ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಡಾ.ಎಲ್. ಹನುಮಂತಯ್ಯ ತಮ್ಮ ಕುಟುಂಬದ ಆಸ್ತಿ ಮೌಲ್ಯ 8.5 ಕೋಟಿ ರು. ಎಂದು ಘೋಷಿಸಿದ್ದಾರೆ. ತಮ್ಮ ಹೆಸರಿನಲ್ಲಿ 1,24,18,892 ರು. ಹಾಗೂ ಪತ್ನಿ ಹೆಸರಿನಲ್ಲಿ 13.62 ಲಕ್ಷ ರು. ಚರಾಸ್ತಿ ಹೊಂದಿದ್ದು, ತಮ್ಮ ಹೆಸರಿನಲ್ಲಿ 3.48 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹಾಗೂ ಪತ್ನಿ ಎಚ್. ವಿಜಯಾಂಬಿಕೆ ಹೆಸರಿನಲ್ಲಿ 3.55 ಕೋಟಿ ರು. ಸ್ಥಿರಾಸ್ತಿ ಇದೆ. ತಮ್ಮ ಬಳಿ 20 ಸಾವಿರ ರು. ನಗದು ಹಾಗೂ ಪತ್ನಿ ಬಳಿ 10 ಸಾವಿರ ರು. ನಗದು ಹೊಂದಿದ್ದು, ಬ್ಯಾಂಕ್‌ಗಳಲ್ಲಿ ಸುಮಾರು 18 ಲಕ್ಷ ರು., ಎಚ್'ಡಿಎಫ್'ಸಿ ಬ್ಯಾಂಕ್‌ನಲ್ಲಿ 1 ಕೋಟಿ ರು., ಎಲ್‌ಐಸಿಯಲ್ಲಿ 6 ಲಕ್ಷ ರು. ಹೂಡಿಕೆ ಮಾಡಿದ್ದೇನೆ. ಈ ಎಲ್ಲಾ ಮೊತ್ತವೂ ಸೇರಿ ಒಟ್ಟು 1.24 ಕೋಟಿ ರು. ಚರಾಸ್ತಿ ಹೊಂದಿದ್ದೇನೆ. ಸ್ಥಿರಾಸ್ತಿ ಪೈಕಿ ದೊಡ್ಡಬಳ್ಳಾಪುರದ ರಾಮೇಶ್ವರ ಬಳಿ 65 ಲಕ್ಷ ರು. ಮಾರುಕಟ್ಟೆಮೌಲ್ಯದ 4.10 ಎಕರೆ ಜಮೀನು, ನಂದಿನಿ ಲೇಔಟ್‌ನಲ್ಲಿ ಎರಡು ಹಾಗೂ ಆರ್‌ಎಂವಿ ಎಕ್ಸೆ$್ಟನ್ಷನ್‌ನಲ್ಲಿ 1 ನಿವೇಶನ ಸೇರಿ ಕೆಲ ಆಸ್ತಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ನಾಸೀರ್ ಹುಸೇನ್ ಸಂಪತ್ತು 1.87 ಕೋಟಿ ರು.
ವಿದ್ಯಾರ್ಹತೆ: ದೆಹಲಿಯ ಜೆಎನ್‌ಯು ವಿ.ವಿ.ಯಲ್ಲಿ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ
ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ ಡಾ.ಸಯ್ಯದ್ ನಾಸೀರ್ ಹುಸೇನ್ ತಮ್ಮ ಕುಟುಂಬದ ಆಸ್ತಿ ಮೌಲ್ಯ 1.87 ಕೋಟಿ ರು. ಎಂದು ಘೋಷಿಸಿಕೊಂಡಿದ್ದಾರೆ. ತಮ್ಮ ಕೈಯಲ್ಲಿ 12 ಸಾವಿರ ರು. ನಗದು, ಪತ್ನಿ ಮೆಹ್ನಾಜ್ ಅನ್ಸಾರಿ ಬಳಿ 8,500 ರು. ನಗದು ಮಾತ್ರ ಇದೆ. 75.77 ಲಕ್ಷ ರು. ಒಟ್ಟು ಚರಾಸ್ತಿ ಹೊಂದಿದ್ದು, ತಮ್ಮ ಬಳಿ 18.28 ಲಕ್ಷ ರು. ಚರಾಸ್ತಿ, ಪತ್ನಿ ಬಳಿ 42.41 ಲಕ್ಷ ರು., ಅವಲಂಬಿತರಾದ ಸಯ್ಯದ್ ಹಶಿರ್ ಹುಸೇನ್ ಅವರ ಬಳಿ 7.96 ಲಕ್ಷ ರು. ಸಯ್ಯದ್ ತಾಹಿರ್ ಹುಸೇನ್ ಅವರ ಬಳಿ 7.12 ರು. ಚರಾಸ್ತಿ ಇದೆ. ಸ್ಥಿರಾಸ್ತಿ ಪೈಕಿ ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲಿರುವ ಕೃಷಿ ಜಮೀನು, ವಾಣಿಜ್ಯ ನಿವೇಶನ, ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 1.12 ಕೋಟಿ ರು. ಆಸ್ತಿ ಹೊಂದಿದ್ದೇನೆ. ಜತೆಗೆ ಪತ್ನಿಯ ಹೆಸರಲ್ಲಿ 5.76 ಲಕ್ಷ ರು. ಸಾಲ ಹೊಂದಿದ್ದೇನೆ ಎಂದು ಪ್ರಮಾಣಪತ್ರದಲ್ಲಿ ಹೇಳಿಕೊಂಡಿದ್ದಾರೆ.