
ನವದೆಹಲಿ(ಜ.16): ಸಾಮೂಹಿಕ ಮತಾಂತರ ಭಾರತಕ್ಕೆ ಕಳವಳದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸಾಮೂಹಿಕ ಮತಾಂತರದ ಕುರಿತು ಪರಿಶೀಲನೆಯ ಅಗತ್ಯವಿದೆ ಎಂದಿರುವ ರಾಜನಾಥ್, ಹಿಂದುಗಳು ಹಿಂದುಗಳಾಗಿ, ಮುಸ್ಲಿಮರು ಮುಸ್ಲಿಮರಾಗಿ ಹಾಗೂ ಕ್ರಿಶ್ಚಿಯನ್ನರು ಕ್ರಿಶ್ಚಿಯನ್ನರಾಗಿ ಬಾಳಿದರೆ ಚೆಂದ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕ್ರೈಸ್ತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ‘ನೀವು ಹಿಂದೂ ಆಗಿದ್ದರೆ ಹಿಂದೂ ಆಗಿಯೇ ಇರಿ. ಮುಸ್ಲಿಂ ಆಗಿದ್ದರೆ ಮುಸ್ಲಿಂ ಆಗಿಯೇ ಇರಿ. ಕ್ರಿಶ್ಚಿಯನ್ ಆಗಿದ್ದರೆ ಕ್ರಿಶ್ಚಿಯನ್ ಆಗಿಯೇ ಇರಿ. ನೀವು ಇಡೀ ಪ್ರಪಂಚವನ್ನೇ ಪರಿವರ್ತನೆ ಮಾಡಲು ಏಕೆ ಬಯಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಯಾರಾದರೊಬ್ಬರು ಒಂದು ಧರ್ಮವನ್ನು ಸ್ವೀಕರಿಸಲು ಬಯಸಿದರೆ ಅದು ಅವರ ಸ್ವಾತಂತ್ರ. ಆದರೆ ಆದರೆ ಸಾಮೂಹಿಕ ಮತಪರಿವರ್ತನೆ ನಡೆಯುತ್ತಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ಬದಲಿಸಲು ಪ್ರಾರಂಭಿಸಿದರೆ, ಅದು ಯಾವುದೇ ದೇಶಕ್ಕಾದರೂ ಕಳವಳದ ವಿಷಯವಾಗುತ್ತದೆ. ಎಂದು ರಾಜನಾಥ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.