ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ್ದು ರಾಜೀವ್: ಸ್ವಾಮಿ ಮೆಚ್ಚುಗೆ

Published : Mar 26, 2017, 05:02 PM ISTUpdated : Apr 11, 2018, 12:50 PM IST
ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ್ದು ರಾಜೀವ್: ಸ್ವಾಮಿ ಮೆಚ್ಚುಗೆ

ಸಾರಾಂಶ

‘ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದು, ನಾವು ಆ ಪಕ್ಷದ ಅಂತ್ಯಕ್ರಿಯೆ ನೆರವೇರಿಸುತ್ತೇವೆ' - ಸುಬ್ರಮಣಿಯನ್ ಸ್ವಾಮಿ

ಪಟನಾ(ಮಾ.26): ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕುಟುಂಬದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಾತ್ರವೇ ಒಳ್ಳೆಯ ಮಾನವತಾವಾದಿ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಹಿಂದೂಗಳ ಜಾಗೃತಿಗಾಗಿ ಅವರು ಮಾತ್ರವೇ ಕೊಡುಗೆ ನೀಡಿದ್ದರು ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ಈ ಬಗ್ಗೆ ಅಯೋಧ್ಯೆ ಕುರಿತು ಉಪನ್ಯಾಸದ ಬಳಿಕ ಮಾತನಾಡಿದ ಅವರು, ‘ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್ ನಾಯಕರ ವಿರೋಧದ ನಡುವೆಯೂ ಪ್ರಸಿದ್ಧ ಪೌರಾಣಿಕ ರಾಮಾಯಣದ ಧಾರವಾಹಿಯನ್ನು ದೂರದರ್ಶನದಲ್ಲಿ ಪ್ರಸಾರಕ್ಕೆ ಮತ್ತು ಅಯೋಧ್ಯೆಯಲ್ಲಿರುವ ರಾಮ ಮಂದಿರದ ಬೀಗ ತೆರೆದು ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರು,’ ಎಂದು ರಾಜೀವ್ ಅವರನ್ನು ಕೊಂಡಾಡಿದರು.

‘ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿದ್ದು, ನಾವು ಆ ಪಕ್ಷದ ಅಂತ್ಯಕ್ರಿಯೆ ನೆರವೇರಿಸುತ್ತೇವೆ,’ ಎಂದು ಕಾಂಗ್ರೆಸ್‌'ಗೆ ತಿವಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ