ಆರ್‌ಆರ್ ನಗರ ಫಲಿತಾಂಶ: ದಾಖಲೆ ನಿರ್ಮಿಸಿದ ಹುಚ್ಚ ವೆಂಕಟ್!

Published : May 31, 2018, 07:43 PM ISTUpdated : May 31, 2018, 07:44 PM IST
ಆರ್‌ಆರ್ ನಗರ ಫಲಿತಾಂಶ:  ದಾಖಲೆ ನಿರ್ಮಿಸಿದ ಹುಚ್ಚ ವೆಂಕಟ್!

ಸಾರಾಂಶ

ಬೆಂಗಳೂರಿನ ಆರ್‌‌ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಸಹ ಕಣದಲ್ಲಿದ್ದರು. ನಿರೀಕ್ಷೆಯಂತೆ ಠೇವಣಿ ಕಳೆದುಕೊಂಡಿದ್ದರೂ, ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೇಗೆ?

ಬೆಂಗಳೂರು: ಅಕ್ರಮ ಮತ ಚೀಟಿ ಸಂಗ್ರಹ ಪತ್ತೆಯಾದ ಹಿನ್ನೆಲೆಯಲ್ಲಿ ಮೇ 28ಕ್ಕೆ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರದ ಚುನಾವಣಾ ಫಲಿತಾಂಶ ಮೇ 31ಕ್ಕೆ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸುಮಾರು 41 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಆದರೆ, ಕಣದಲ್ಲಿ ಹುಚ್ಚ ವೆಂಕಟ್ ಗಳಿಸಿದ ಮತವೆಷ್ಟು ಗೊತ್ತಾ?

'ನಾನು ದೇಶದ ಪ್ರಧಾನಿ' ಆಗುತ್ತೇನೆಂದು ಆರ್‌ಆರ್‌ ನಗರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ನಟ, ನಿರ್ದೇಶಕ, ಬಿಗ್‌ ಬಾಸ್ ಸ್ಪರ್ಧಿ ಹುಚ್ಚ ವೆಂಕಟ್ ಹೇಳಿದ್ದು ಎಲ್ಲರಿಗೂ ಅಚ್ಚರಿ ತಂದಿತ್ತು. ನಿರೀಕ್ಷೆಯಂತೆ ಇವರು ಠೇವಣಿ ಕಳೆದುಕೊಂಡಿದ್ದಾರೆ. ಆದರೆ, ಅಲ್ಲಿಯೂ ಒಂದು ದಾಖಲೆ ನಿರ್ಮಿಸಿದ್ದಾರೆ!

ಕಣದಲ್ಲಿದ್ದ 14 ಪಕ್ಷೇತರರ ಪೈಕಿ ಹುಚ್ಚ ವೆಂಕಟ್ ಅತ್ಯಧಿಕವೆಂದರೆ 764 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ಅತಿ ಹೆಚ್ಚು ಮತಗಳನ್ನು ಹುಚ್ಚು ವೆಂಕಟ್ ಪಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. 

ಮುನಿರತ್ನ ಅವರು ಕ್ಷೇತ್ರದಲ್ಲಿ ಮತ ಪಡೆಯಲು ಕುಕ್ಕರ್, ಸೀರೆ ಹಂಚಿ ಆಮಿಷ ತೋರುತ್ತಿದ್ದಾರೆಂದೂ ಪ್ರಚಾರದ ವೇಳೆ ವೆಂಕಟ್ ಆರೋಪಿಸಿದ್ದರು. 'ನಾನು ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರಿಗೆ ಯಾವುದೇ ಆಮಿಷಗಳನ್ನು ತೋರಿಸಿರಲಿಲ್ಲ. ಇದೀಗ ಸೋತಿದ್ದೇವೆ. ಪ್ರಾಮಾಣಿಕನನ್ನು ಮತದಾರರು ಸೋಲಿಸಿದ್ದಾರೆ,' ಎಂದು ಸೋಲಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಬಿಹಾರ ಸೋಲಿನ ಬಳಿಕ ಪ್ರಶಾಂತ್ ಕಿಶೋರ್ - ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ?
Karnataka News Live: ಬುರುಡೆ ಚಿನ್ನಯ್ಯನಿಗೆ ಕೊನೆಗೆ ಬಿಡುಗಡೆ ಭಾಗ್ಯ; ಸಿಕ್ತು ಶ್ಯೂರಿಟಿ