(ವಿಡಿಯೋ) ಕನ್ನಡಿಗರ ಬಳಿ ಕನ್ನಡದಲ್ಲೇ ಮನವಿ! ಕನ್ನಡಿಗರ ಕಿಚ್ಚು ಕಂಡು ಕಂಗಾಲಾದ ರಾಜಮೌಳಿ ಹೇಳಿದ್ದೇನು?

Published : Apr 19, 2017, 08:49 PM ISTUpdated : Apr 11, 2018, 01:03 PM IST
(ವಿಡಿಯೋ) ಕನ್ನಡಿಗರ ಬಳಿ ಕನ್ನಡದಲ್ಲೇ ಮನವಿ! ಕನ್ನಡಿಗರ ಕಿಚ್ಚು ಕಂಡು ಕಂಗಾಲಾದ ರಾಜಮೌಳಿ ಹೇಳಿದ್ದೇನು?

ಸಾರಾಂಶ

‘ಕಟ್ಟಪ್ಪ' ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ-2 ಸಿನಿಮಾನವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪುನರುಚ್ಚರಿಸುತ್ತಿರುವ ಹಿನ್ನೆಲೆಯಲ್ಲಿ  ಕೊನೆಗೂ ಕನ್ನಡಿಗರಿಗೆ  ನಿರ್ದೇಶಕ ರಾಜಮೌಳಿ  ಮೊರೆ ಹೋಗಿದ್ದಾರೆ. ಇದೀಗ ಕನ್ನಡಿಗರ ಕೋಪ ತಣಿಸಲು ರಾಜಮೌಳಿ ಕನ್ನಡದಲ್ಲೇ ಮಾತನಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಬೆಂಗಳೂರು(ಎ.20): ‘ಕಟ್ಟಪ್ಪ' ಸತ್ಯರಾಜ್ ಕನ್ನಡಿಗರ ಕ್ಷಮೆ ಯಾಚಿಸುವವರೆಗೂ ಬಾಹುಬಲಿ-2 ಸಿನಿಮಾನವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪುನರುಚ್ಚರಿಸುತ್ತಿರುವ ಹಿನ್ನೆಲೆಯಲ್ಲಿ  ಕೊನೆಗೂ ಕನ್ನಡಿಗರಿಗೆ  ನಿರ್ದೇಶಕ ರಾಜಮೌಳಿ  ಮೊರೆ ಹೋಗಿದ್ದಾರೆ. ಇದೀಗ ಕನ್ನಡಿಗರ ಕೋಪ ತಣಿಸಲು ರಾಜಮೌಳಿ ಕನ್ನಡದಲ್ಲೇ ಮಾತನಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

ಕನ್ನಡಿಗರ ಬಳಿ ಕನ್ನಡದಲ್ಲೇ ಮನವಿ ಮಾಡಿಕೊಂಡಿರುವ ನಿರ್ದೇಶಕ ರಾಜಮೌಳಿ

'ಕೆಲ ವರ್ಷಗಳ ಹಿಂದೆ ಸತ್ಯರಾಜ್​ ಕನ್ನಡಿಗರ ಬಗ್ಗೆ ಕಮೆಂಟ್​ ಮಾಡಿದ್ದರು. ಸತ್ಯರಾಜ್ ಹೇಳಿಕೆ  ಕನ್ನಡಿಗರಿಗೆ ನೋವು ತಂದಿದೆ. ಆದರೆ, ಸತ್ಯರಾಜ್​ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ಹೇಳಿಕೆಗಳು ಸತ್ಯರಾಜ್ ಅವರ ವ್ಯಕ್ತಿಗತ ಅಭಿಪ್ರಾಯ. ಫೇಸ್​ಬುಕ್​​ನಲ್ಲಿ ಈ ವಿಡಿಯೋ ನೋಡುವವರೆಗೂ ನಮಗೆ ವಿಷಯ ಗೊತ್ತಿರಲಿಲ್ಲ. ಸತ್ಯರಾಜ್​ ಕಮೆಂಟ್​ ಮಾಡಿ 9 ವರ್ಷಗಳೇ ಸಂದಿವೆ. ಆ ಬಳಿಕ ಕರ್ನಾಟಕದಲ್ಲಿ ಸತ್ಯರಾಜ್​ರ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಬಾಹುಬಲಿ-1 ಚಿತ್ರವನ್ನು ನೀವೆಲ್ಲ ನೋಡಿ ಆದರಿಸಿದ್ದಿರಿ. ಅದೇ ರೀತಿ ಬಾಹುಬಲಿ-2 ಚಿತ್ರ ಬಿಡುಗಡೆಗೂ ಸಹಕರಿಸಬೇಕು. ಸತ್ಯರಾಜ್​, ಬಾಹುಬಲಿ ಚಿತ್ರದ ನಿರ್ದೇಶಕರೂ ಅಲ್ಲ ನಿರ್ಮಾಕರೂ ಅಲ್ಲ, ಈ ಚಿತ್ರದಲ್ಲಿ ನಟಿಸಿರುವ ಎಲ್ಲರಂತೆ ಅವರೂ ಒಬ್ಬ ನಟ ಅಷ್ಟೇ. ಈ ಚಿತ್ರ ಸ್ಥಗಿತಗೊಂಡರೆ ಸತ್ಯರಾಜ್​ ಅವರಿಗೂ ಯಾವುದೇ ನಷ್ಟವಾಗಲ್ಲ. ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ ಮೇಲೆ ತೋರಿಸುವುದು ಸರಿಯಲ್ಲ. ಕನ್ನಡಿಗರ ಕೋಪವನ್ನು ಸತ್ಯರಾಜ್​ ಗಮನಕ್ಕೂ ತಂದಿದ್ದೇವೆ. ಫೋನ್ ಮೂಲಕ ಪರಿಸ್ಥಿತಿಯನ್ನು ಸತ್ಯರಾಜ್​ಗೆ ವಿವರಿಸಿದ್ದೇವೆ. ಇಷ್ಟರ ಮೇಲೆ ಬೇರೇನು  ಮಾಡುವ ಶಕ್ತಿ ನಮಗೆ ಇಲ್ಲ. ನಮಗೆ ಸಂಬಂಧ ಇಲ್ಲದೇ ಇರುವ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ ಎಂಬ ಮನಃಪೂರ್ವಕ ಕೋರಿಕೆ. ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಬೇಕೆಂಬ ಆಸೆ. ಹೃದಯಪೂರ್ವಕ ಧನ್ಯವಾದಗಳು' ಎಂದು ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿಂದ ಗೋಕರ್ಣ ಹೊರಟಿದ್ದ ಬಸ್ ಅಗ್ನಿದುರಂತ: ಸುಟ್ಟು ಕರಕಲಾದ 9 ಮೃತರ ಪತ್ತೆಗೆ DNA ಮೊರೆ
ಡಿಸಿ ಹಕ್ಕುಚ್ಯುತಿ ಬಗ್ಗೆ ಸಂಸದರು ಧ್ವನಿ ಎತ್ತಲಿ: ಸಚಿವ ಸತೀಶ್‌ ಜಾರಕಿಹೊಳಿ