
ಯಾದಗಿರಿ (ಆ. 15): ಮೂವತ್ತು ಮೈಲಿ ದೂರದಲ್ಲಿರುವ ಸುರಪುರ ಈಗ ಒಂದು ಸಣ್ಣ ಊರು. 1841 ರಲ್ಲಿ ಸುರಪುರದಲ್ಲಿ ಅಪ್ರಾಪ್ತ ವೆಂಕಟಪ್ಪನಾಯಕ ದೊರೆಯಾಗಿದ್ದ. ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಬ್ರಿಟಿಷ್ ನಿಯೋಜಿತ ಅಧಿಕಾರಿಯನ್ನು ಹಿಂತಿರುಗಿಸಿದ (1853).
ಆಗ ಗವರ್ನರ್-ಜನರಲ್ ಡಾಲ್ ಹೌಸಿ ಇನ್ನೂ ಕೆಲಕಾಲ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ದೊರೆಗೆ ತಿಳಿಸಿದ. ಇದು ಸಾಧ್ಯವಿಲ್ಲವೆಂದು ವೆಂಕಟಪ್ಪನಾಯಕ ನಿರಾಕರಿಸಿದ್ದ. ಒಂದು ಕಡೆ ನಿಜಾಮ ಹಾಗೂ ಬ್ರಿಟಿಷರ ಸುಲಿಗೆಯಿಂದಾಗಿ ಸುರಪುರದ ಖಜಾನೆ ಬರಿದಾಗಿತ್ತು. ಆಗ ವೆಂಕಟಪ್ಪನಾಯಕ ಬ್ರಿಟಿಷರ ವಿರುದ್ಧ ಸೈನ್ಯವನ್ನು ಬಲಗೊಳಿಸಲೆತ್ನಿಸಿದ. ಇದೆಲ್ಲವೂ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯದಿರಲಿಲ್ಲ. ಆದರೆ ವೆಂಕಟಪ್ಪನ ಆಪ್ತ ಸಲಹೆಗಾರನೇ ಬ್ರಿಟಿಷರ ಸಹಾಯಕ್ಕೆ ನಿಂತ. ಶತ್ರುಗಳು ಕೋಟೆ ಒಳಗೆ ನುಗ್ಗಿದರು.
ವೆಂಕಟಪ್ಪನಾಯಕ ಊರು ಬಿಟ್ಟು ಹೈದರಾಬಾದ್ ಕಡೆ ಹೊರಟ.ಬಳಿಕ ಆತನ ಗುರುತು ಸಿಕ್ಕಿ, ಅವನನ್ನು ಸಿಕಂದರಾಬಾದಿನಲ್ಲಿ ಬಂಧನದಲ್ಲಿಟ್ಟರು. ಒಮ್ಮೆ ಜೈಲಿಗೆ ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.