ಇನ್ನು ಕನ್ನಡದಲ್ಲೂ ರೈಲ್ವೆ ಟಿಕೆಟ್ ಮುದ್ರಣ : 2018 ಜ.1ರಿಂದ ಜಾರಿ

Published : Jun 29, 2017, 12:21 AM ISTUpdated : Apr 11, 2018, 12:35 PM IST
ಇನ್ನು ಕನ್ನಡದಲ್ಲೂ ರೈಲ್ವೆ ಟಿಕೆಟ್ ಮುದ್ರಣ  : 2018 ಜ.1ರಿಂದ ಜಾರಿ

ಸಾರಾಂಶ

ಬುಧವಾರ ನಡೆದ ಪ್ರಯಾಣಿಕರ ಸೌಕರ್ಯ ಕುರಿತಾದ ಸಮಿತಿ ಸಭೆಯ ವೇಳೆ, ಸಮಿತಿ ಸದಸ್ಯ ಆಶೀರ್ವಾದಮ್ ಆಚಾರ್ಯ ಅವರು ಪ್ರಾದೇಶಿಕ ಭಾಷೆಗಳಲ್ಲೂ ಟಿಕೆಟ್ ಮುದ್ರಿಸುವ ಅಗತ್ಯದ ಕುರಿತು ಪ್ರಸ್ತಾಪ ಮಾಡಿದ್ದರು.

ಬೆಂಗಳೂರು/ ನವದೆಹಲಿ(ಜೂ.29): ಹಿಂದಿ ಹೇರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಪ್ರಾದೇಶಿಕ ಭಾಷೆಗಳ ಹೋರಾಟಕ್ಕೆ ಸಿಹಿ ಸುದ್ದಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ. 2018ರ ಜನವರಿ 1ರಿಂದ ಇಂಗ್ಲಿಷ್, ಹಿಂದಿ ಜತೆಗೆ ಉಳಿದ ಪ್ರಾದೇಶಿಕ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಿಸಲು ಪ್ರಯಾಣಿಕರ ಸೌಕರ್ಯಗಳ ಕುರಿತ ರೈಲ್ವೆಯ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದೆ. ಹೀಗಾಗಿ ಕನ್ನಡದಲ್ಲಿಯೂ ರೈಲ್ವೆ ಟಿಕೆಟ್‌ಗಳು ಮುದ್ರಣಗೊಳ್ಳಲಿವೆ.

ಬುಧವಾರ ನಡೆದ ಪ್ರಯಾಣಿಕರ ಸೌಕರ್ಯ ಕುರಿತಾದ ಸಮಿತಿ ಸಭೆಯ ವೇಳೆ, ಸಮಿತಿ ಸದಸ್ಯ ಆಶೀರ್ವಾದಮ್ ಆಚಾರ್ಯ ಅವರು ಪ್ರಾದೇಶಿಕ ಭಾಷೆಗಳಲ್ಲೂ ಟಿಕೆಟ್ ಮುದ್ರಿಸುವ ಅಗತ್ಯದ ಕುರಿತು ಪ್ರಸ್ತಾಪ ಮಾಡಿದ್ದರು. ‘ತಮಿಳುನಾಡು ಮತ್ತು ಇತರೆಡೆಗಳಲ್ಲಿ ಜನರು ಟಿಕೆಟ್‌ನಲ್ಲಿರುವ ಅಕ್ಷರಗಳನ್ನು ಓದಲು ತೊಂದರೆ ಅನುಭವಿಸುತ್ತಿದ್ದಾರೆ. ತಮಗೆ ಸರಿಯಾದ ಟಿಕೆಟ್ ಸಿಕ್ಕಿದೆಯೇ? ರೈಲು ಮಾರ್ಗ ಸರಿಯಾಗಿದೆಯೇ ಎನ್ನುವುದೇ ಜನರಿಗೆ ಗೊತ್ತಾಗುತ್ತಿರಲಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲಿ ಜನರು ತಪ್ಪಾಗಿ ಓದಿಕೊಂಡು ದಂಡ ನೀಡಬೇಕಾದ ಪರಿಸ್ಥಿತಿ ಬರುತ್ತಿತ್ತು’ ಎಂದು ಸಭೆಯ ಗಮನ ಸೆಳೆದಿದ್ದರು. ಈ ವಾದವನ್ನು ಒಪ್ಪಿದ ಸಮಿತಿ ಪ್ರಾದೇಶಿಕ ಭಾಷೆಗಳಲ್ಲೂ ಟಿಕೆಟ್ ಮುದ್ರಣಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.

ಆದರೆ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿಸುವ ಟಿಕೆಟ್‌ಗಳು ಕೇವಲ ರೈಲ್ವೆ ನಿಲ್ದಾಣದಲ್ಲಿ ವಿತರಿಸುವ ಟಿಕೆಟ್‌ಗಳಲ್ಲಿ ಮಾತ್ರವೇ ಲಭ್ಯವಾಗಲಿದೆ. ಆನ್‌ಲೈನ್‌ನಲ್ಲಿ ಈ ಅವಕಾಶ ಲಭ್ಯವಿರುವುದಿಲ್ಲ ಎಂದು ಸಮಿತಿ ಹೇಳಿದೆ. 2016ರಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಶಾಸಕ ಸಿ.ಟಿ.ರವಿ ಅವರು ಪತ್ರ ಬರೆದು ಟಿಕೆಟ್‌ನಲ್ಲಿ ಕನ್ನಡ ಅಳವಡಿಸುವಂತೆ ಕೋರಿದ್ದರು. ಈ ನಡುವೆ ಕನ್ನಡದಲ್ಲೂ ಟಿಕೆಟ್ ಮುದ್ರಿಸುವ ಕುರಿತು ‘ಕನ್ನಡಪ್ರಭ’ ಬೆಂಗಳೂರಿನಲ್ಲಿರುವ ರೈಲ್ವೆ ಇಲಾಖೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಲ್ ಸಕ್ಸೇನಾ ಅವರನ್ನು ಪ್ರಶ್ನಿಸಿದಾಗ, ತಮಗೆ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಬಹುತೇಕ ಫೈನಲ್‌- ಬಾಕಿ ಉಳಿದ ವಿಷಯ ಇತ್ಯರ್ಥಕ್ಕೆ ಚರ್ಚೆ
Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ