ಮಹಿಳಾ ಸಬಲೀಕರಣ: ಪ್ರಧಾನಿ ಮೋದಿಗೆ ರಾಹುಲ್ ಸವಾಲು

First Published Jul 16, 2018, 10:37 PM IST
Highlights

 ಸದಾ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಪ್ರಧಾನಿಗೆ ಮತ್ತೊಂದು ಸವಾಲು ಹಾಕಿದ್ದಾರೆ. ಸಂಸತ್​ನಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ಅಂಗೀಕಾರ ಮಾಡಿ... ಕಾಂಗ್ರೆಸ್​ ನಿಮಗೆ ಬೇಷರತ್​ ಬೆಂಬಲ ನೀಡಲಿದೆ ಎಂದಿದ್ದಾರೆ.

ನವದೆಹಲಿ[ಜು.16]  ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿಗಳೇ ನಿಮಗೆ ಸವಾಲು ಹಾಕುತ್ತಿದ್ದೇನೆ ಎಂದಿರುವ ರಾಹುಲ್  ಟ್ವೀಟ್ ಮಾಡಿ ಎರಡು ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಮಹಿಳಾ ಸಬಲೀಕರಣ ವಿಚಾರ ಪಕ್ಷ ರಾಜಕೀಯಕ್ಕಿಂತ ಮಿಗಿಲಾಗಿ, ಪಾರ್ಲಿಮೆಂಟ್​ನಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗಬೇಕಿದೆ. ಈ ಬಗ್ಗೆ ಅವರು ಮಾತನಾಡಬೇಕಿದೆ. ಬಿಲ್​ ಪಾಸ್ ಮಾಡುವುದಾದರೆ ಕಾಂಗ್ರೆಸ್ ಬೇಷರತ್​ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷ ಮುಸ್ಲಿಂ ಪುರುಷರ ಪರವಾಗಿ ಮಾತ್ರ ಇದೆಯೋ, ಮುಸ್ಲಿಂ ಮಹಿಳೆಯರ ಪರವಾಗಿಯೂ ಇದೆಯೋ ಎಂದು ಕಾಂಗ್ರೆಸ್ ಅಧ್ಯಕ್ಷ  ರಾಹುಲ್​ ಗಾಂಧಿಗೆ ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ಎಂಬಂತೆ ರಾಹುಲ್​ ಗಾಂಧಿ ಟ್ವೀಟ್ ಸವಾಲು ಹಾಕಿದ್ದಾರೆ. ಸದ್ಯ ರಾಹುಲ್ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಚಚರ್ಚೆ ಹುಟ್ಟು ಹಾಕಿವೆ.

Our PM says he’s a crusader for women’s empowerment? Time for him to rise above party politics, walk-his-talk & have the Women’s Reservation Bill passed by Parliament. The Congress offers him its unconditional support.

Attached is my letter to the PM. pic.twitter.com/IretXFFvvK

— Rahul Gandhi (@RahulGandhi)
click me!