ವಿದೇಶಾಂಗ ನೀತಿಯಲ್ಲಿ ಮೋದಿ ವಿಫಲ: ಪಾಠ ಕಲಿಸುವುದು ಬಿಟ್ಟು ಚೀನಾ ಅಧ್ಯಕ್ಷರನ್ನು ತಬ್ಬಿದರು!

Published : Aug 17, 2017, 10:21 AM ISTUpdated : Apr 11, 2018, 12:41 PM IST
ವಿದೇಶಾಂಗ ನೀತಿಯಲ್ಲಿ ಮೋದಿ ವಿಫಲ: ಪಾಠ ಕಲಿಸುವುದು ಬಿಟ್ಟು ಚೀನಾ ಅಧ್ಯಕ್ಷರನ್ನು ತಬ್ಬಿದರು!

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವೈಲ್ಯ ಕಂಡಿದೆ. ಇದರಿಂದಾಗಿ ದೇಶದ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತದ ಶತ್ರುತ್ವ ಬೆಳೆಯುತ್ತಿದೆ. ಭಾರತದ ಮಿತ್ರರಾಷ್ಟ್ರ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಭಾರತದ ಹಿಡಿತ ಕುಸಿಯುತ್ತಿದೆ. ಇಷ್ಟೆಲ್ಲ ಆಗಿದ್ದರೂ, ನರೇಂದ್ರ ಮೋದಿ ಮಾತ್ರ ವಿದೇಶಾಂಗ ನೀತಿ ಸುಧಾರಿಸುವುದು ಬಿಟ್ಟು, ದೇಶ ಒಡೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದಾರೆ.

ಬೆಂಗಳೂರು(ಆ.17): ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವೈಲ್ಯ ಕಂಡಿದೆ. ಇದರಿಂದಾಗಿ ದೇಶದ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತದ ಶತ್ರುತ್ವ ಬೆಳೆಯುತ್ತಿದೆ. ಭಾರತದ ಮಿತ್ರರಾಷ್ಟ್ರ ರಷ್ಯಾ ಇತಿಹಾಸದಲ್ಲೇ ಮೊದಲ ಬಾರಿಗೆ ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಭಾರತದ ಹಿಡಿತ ಕುಸಿಯುತ್ತಿದೆ. ಇಷ್ಟೆಲ್ಲ ಆಗಿದ್ದರೂ, ನರೇಂದ್ರ ಮೋದಿ ಮಾತ್ರ ವಿದೇಶಾಂಗ ನೀತಿ ಸುಧಾರಿಸುವುದು ಬಿಟ್ಟು, ದೇಶ ಒಡೆಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಾಶ್ಮೀರದಲ್ಲಿ ಅಶಾಂತಿ ನೆಲೆಸುವಂತೆ ಮಾಡಿದೆ ಎಂದರು. ಅಲ್ಲದೆ, ಸಮಾರಂಭದಲ್ಲಿ ಹಾಜರಿದ್ದ ಸಿದ್ದರಾಮಯ್ಯ ಅವರತ್ತ ತಿರುಗಿದ ಅವರು, ‘ಮುಖ್ಯಮಂತ್ರಿಯವರೇ ಪರಿಚಿತನೊಬ್ಬ ಕಳ್ಳರೊಂದಿಗೆ ಬಂದರೆ ನೀವು ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ, ಹೊಡೆದು ಕಳುಹಿಸುತ್ತೇನೆ ಎಂಬರ್ಥ ದಲ್ಲಿ ಕೈ ಸನ್ನೆ ಮಾಡಿದರು. ಆಗ ರಾಹುಲ್ ಹೌದಲ್ವ ಕಳ್ಳರೊಂದಿಗೆ ಬಂದರೆ ಹೊಡೆದು ಕಳಿಸುತ್ತೇವೆ. ಆದರೆ, ಮೋದಿ ಒಬ್ಬ ಪರಿಚಿತ ವ್ಯಕ್ತಿ ಮನೆಗೆ ಕಳ್ಳರನ್ನು ಕರೆದು ಕೊಂಡು ಬಂದರೂ ಆ ವ್ಯಕ್ತಿಯನ್ನು ತಬ್ಬಿಕೊಂಡು ಜೋಕಾಲಿ ಆಡುತ್ತಾರೆ (ಪಕ್ಕದಲ್ಲಿದ್ದ ಕೆಪಿಸಿಸಿ ಉಪಾಧ್ಯ ಬಿ.ಎಲ್. ಶಂಕರ್‌ನ್ನು ತಬ್ಬಿಕೊಂಡು ತೋರಿಸುತ್ತಾ).

ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಮಿತ್ರರಾಷ್ಟ್ರ ಭೂತಾನ್ ದೇಶಕ್ಕೆ ಚೀನಾ ದೇಶದ 1 ಸಾವಿರ ಮಂದಿ ಸೈನಿಕರು ಪ್ರವೇಶ ಮಾಡಿದಾಗ ಮೋದಿ ಚೀನಾದ ಅಧ್ಯಕ್ಷರನ್ನು ತಬ್ಬಿ ಜೋಕಾಲಿ ಆಡುತ್ತಿದ್ದರು ಎಂದರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ: ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ, ಇದು ಯೂನಸ್ ಸರ್ಕಾರದ ವ್ಯವಸ್ಥಿತ ಪಿತೂರಿ: ಶೇಖ್ ಹಸೀನಾ ಗಂಭೀರ ಆರೋಪ