ಮೋದಿ ಬರುವ ಮೊದಲೇ ಕೇರಳಕ್ಕೆ ಬಂದಿಳಿದ ರಾಹುಲ್!

By Web DeskFirst Published Jun 7, 2019, 5:19 PM IST
Highlights

ಮೂರು ದಿನಗಳ ವೈನಾಡು ಪ್ರವಾಸದಲ್ಲಿ ರಾಹುಲ್ ಗಾಂಧಿ| ಚುನಾವಣೆ ಗೆಲುವಿನ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ರಾಹುಲ್ ಭೇಟಿ| ಭರ್ಜರಿ ರೋಡ್ ಶೋ ಮೂಲಕ ರಾಹುಲ್ ಗೆ ಸ್ವಾಗತ ಕೋರಿದ ಕಾಂಗ್ರೆಸ್ ಕಾರ್ಯಕರ್ತರು| ನಾಳೆ(ಜೂ.08) ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ|

ವೈನಾಡು(ಜೂ.07): ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವೈನಾಡು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

I will be in Wayanad, Kerala starting this afternoon and till Sunday to meet citizens & Congress Party workers. It’s a packed schedule with over 15 public receptions planned over the next 3 days. pic.twitter.com/1r71RsgI9X

— Rahul Gandhi (@RahulGandhi)

ಮೂರು ದಿನಗಳ ವೈನಾಡು ಭೇಟಿಗೆ ಮುಂದಾಗಿರುವ ರಾಹುಲ್, ಭರ್ಜರಿ ರೋಡ್ ಶೋ ಮೂಲಕ ಕ್ಷೇತ್ರಕ್ಕೆ ಬಂದಿಳಿದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆ ಕೂಗಿದರು.

Congress President Rahul Gandhi arrives at Kalikavu in Malappuram district in Kerala. Today, he begins his three-day visit to the state after Lok Sabha elections. pic.twitter.com/e2tTizHIff

— ANI (@ANI)

ಇನ್ನು ನಾಳೆ(ಜೂ.08) ಪ್ರಧಾನಿ ಮೋದಿ ಕೇರಳಕ್ಕೆ ಭೇಟಿ ನೀಡಲಿದ್ದು, ಗುರುವಾಯುರು ಶ್ರೀ ಕೃಷ್ಣ ಮಂದಿರದಲ್ಲಿ ಪೂಜೆ ನೆರವೇರಿಸಲಿದ್ದಾರೆ. ಅಲ್ಲದೇ ಮೋದಿ ತ್ರಿಸ್ಸೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

click me!