'ಪ್ರಧಾನಿಯಿಂದ 3.5 ಲಕ್ಷ ಕೋಟಿ ಸಾಲ ಮನ್ನ'

By Web DeskFirst Published Nov 10, 2018, 4:04 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಟ್ಟು 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಒಟ್ಟು 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಅದು 15 ಮಂದಿ ಉದ್ಯಮಿಗಳ ಸಾಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ಚತ್ತೀಸ್ ಗಢದಲ್ಲಿ ಚುನಾವಣಾ  ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅಲ್ಲದೇ ಇದೇ ವೇಳೆ ರಾಹುಲ್ ಗಾಂಧಿ ಚತ್ತೀಸ್ ಗಢ ಹಾಗೂ ಮಧ್ಯ ಪ್ರದೇಶಗಳನ್ನು  ಕೃಷಿ ಕೇಂದ್ರಗಳಾಗಬೇಕು ಎನ್ನುವುದು ತಮ್ಮ ಬಯಕೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಅವರು 3.5 ಲಕ್ಷ ಕೋಟಿ  15 ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ದೇಶದ ಜನರ ಬಗ್ಗೆ ಅವರು ಗಮನಹರಿಸುತ್ತಿಲ್ಲ ಎಂದು ಹೇಳಿದ್ದಾರೆ.

ಚತ್ತೀಸ್ ಗಡದಲ್ಲಿ ಇದೇ ನವೆಂಬರ್ 12 ಮತ್ತು 20 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

click me!