'ಮೋದಿ ಸರ್ಕಾರದ ನಿರ್ಧಾರ ಭಾರತದ ಭವಿಷ್ಯಕ್ಕೆ ಕೊಟ್ಟ ಪೆಟ್ಟು'

By Web DeskFirst Published Oct 19, 2018, 8:53 AM IST
Highlights

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರವು ಭಾರತದ ಭವಿಷ್ಯದ ಮೇಲೆ ಪೆಟ್ಟುಕೊಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ : ರಾಷ್ಟ್ರರಾಜಕಾರಣದಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದೆ. 

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಮತ್ತೊಮ್ಮೆ ರಫೇಲ್ ವಿಚಾರವನ್ನು ಇರಿಸಿಕೊಂಡು ವಾಗ್ದಾಳಿ ನಡೆಸಿದ್ದು ಜಾಗತಿಕವಾಗಿ ಭಾರತದ  ಗೌರವವನ್ನು ಕಡಿಮೆ ಮಾಡಿದ್ದಾರೆ. 

ಅಲ್ಲದೇ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು  ಎನ್ ಡಿ ಎ ಸರ್ಕಾರ  ರಫೇಲ್ ಡೀಲ್ ಅನ್ನು ಎಚ್ ಎ ಎಲ್ ನಿಂದ ಕಿತ್ತುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಅಲ್ಲದೇ ಯುಪಿಎ ಸರ್ಕಾರದ ಈ ಯೋಜನೆಯಲ್ಲಿ ಬದಲಾವಣೆ ಮಾಡಿ ಅಕ್ರಮ ಎಸಗಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ಭಾರತದ ಭವಿಷ್ಯದ ಮೇಲೆ ಸಾಕಷ್ಟು ರೀತಿಯಲ್ಲಿ ಸಮಸ್ಯೆ ಎದುರಾಗುವಂತೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

click me!