ಮೋದಿ ಹವಾ ವಿರುದ್ಧ ರಾಹುಲ್ ಗಾಂಧಿ ನಕಲಿ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದಾರಾ?

By Suvarna Web DeskFirst Published Oct 22, 2017, 8:40 PM IST
Highlights

ಮೋದಿ ಹವಾ ವಿರುದ್ಧ ರಾಹುಲ್ ಗಾಂಧಿ ನಕಲಿ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದಾರಾ..? ಇತ್ತೀಚೆಗಷ್ಟೇ ಟ್ವಿಟರ್​ನಲ್ಲಿ ಮೋದಿಯನ್ನೂ ಹಿಂದಿಕ್ಕುತ್ತಿರುವ ರಾಹುಲ್ ಗಾಂಧಿ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ, ಅದು ಅಸಲಿ ಅಲ್ಲ, ನಕಲಿ ಅನ್ನೋ ಆರೋಪ ಈಗ ಕೇಳಿ ಬರುತ್ತಿದೆ.

ಬೆಂಗಳೂರು (ಅ.22): ಮೋದಿ ಹವಾ ವಿರುದ್ಧ ರಾಹುಲ್ ಗಾಂಧಿ ನಕಲಿ ಟ್ವೀಟ್ ಅಸ್ತ್ರ ಪ್ರಯೋಗಿಸಿದ್ದಾರಾ..? ಇತ್ತೀಚೆಗಷ್ಟೇ ಟ್ವಿಟರ್​ನಲ್ಲಿ ಮೋದಿಯನ್ನೂ ಹಿಂದಿಕ್ಕುತ್ತಿರುವ ರಾಹುಲ್ ಗಾಂಧಿ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ, ಅದು ಅಸಲಿ ಅಲ್ಲ, ನಕಲಿ ಅನ್ನೋ ಆರೋಪ ಈಗ ಕೇಳಿ ಬರುತ್ತಿದೆ.

@OfficeOfRG ಇದು ರಾಹುಲ್ ಗಾಂಧಿಯ ಟ್ವಿಟರ್​ ಖಾತೆ.  @narendramodi  ಇದು ನರೇಂದ್ರ ಮೋದಿಯ ಟ್ವಿಟರ್ ಖಾತೆ. ಎರಡೂ ಖಾತೆಗಳು ಅಧಿಕೃತ ಖಾತೆಗಳು. ನರೇಂದ್ರ ಮೋದಿ ಪಿಎಂಒ ಆಫ್ ಇಂಡಿಯಾ ಎಂಬ ಇನ್ನೊಂದು ಟ್ವಿಟರ್ ಖಾತೆ ಹೊಂದಿದ್ದರೂ, ಅದರಲ್ಲಿ ಸರ್ಕಾರದ ಕಾರ್ಯಕ್ರಮಗಳಿರುತ್ತವೇ ಹೊರತಾಗಿ, ರಾಜಕೀಯ ಇರೋದಿಲ್ಲ. ಆದರೆ, ಸುದ್ದಿ ಇದಲ್ಲ. ಇತ್ತೀಚೆಗೆ ಟ್ವಿಟರ್​ನಲ್ಲಿ ರಾಹುಲ್ ಗಾಂಧಿ, ನರೇಂದ್ರ ಮೋದಿಯನ್ನೂ ಮೀರಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಈಗ ಅದು ಸುಳ್ಳು ಎಂಬ ವರದಿ ಬರತೊಡಗಿದೆ.  ಈ ಅನುಮಾನ ಮೂಡಲು ರಾಹುಲ್ ಗಾಂಧಿ ಮೋದಿಯವರನ್ನು ಲೇವಡಿ ಮಾಡಿ ಮಾಡಿದ್ದ ಒಂದು ಟ್ವೀಟ್. ಟ್ರಂಪ್ ಅವರಿಗೆ ನಿಮ್ಮದೊಂದು ಅಪ್ಪುಗೆ ಬೇಕಿದೆ ಮೋದಿಜೀ.. ಎಂದು ಟ್ವಿಟರ್​ನಲ್ಲಿ ಲೇವಡಿ ಮಾಡಿದ್ದರು ರಾಹುಲ್ ಗಾಂಧಿ. ಅಮೆರಿಕ, ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದ ವಿಚಾರಕ್ಕೆ ಮಾಡಿದ್ದ ಟ್ವೀಟ್ ಅದಾಗಿತ್ತು.  ಆ ಟ್ವೀಟ್ 30 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಯ್ತು. 61 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ರು. ಅನುಮಾನಗೊಂಡು ಆ ಖಾತೆಗಳ ಬೆನ್ನು ಹತ್ತಿದಾಗ, ಹಾಗೆ ರೀಟ್ವೀಟ್ ಮಾಡಿದ್ದ ಟ್ವಿಟಿಗರಲ್ಲಿ ಬಹುತೇಕರು ಭಾರತೀಯರಲ್ಲ. ರಷ್ಯಾ, ಕಜಕಿಸ್ತಾನ, ಇಂಡೋನೇಷ್ಯಾ ಮೊದಲಾದ ದೇಶದವರಾಗಿದ್ದರು. ಹಲವರ ಟ್ವಿಟರ್ ಖಾತೆಗಳು ಭಾರತೀಯ ಭಾಷೆಯಲ್ಲಿರಲಿಲ್ಲ. ಇನ್ನೂ ಹಲವರ ಖಾತೆಗಳು ನಂಬರ್​ಗಳ ಮೂಲಕವಷ್ಟೇ ಇದ್ದವು. ಹಲವು ಟ್ವಿಟರ್ ಖಾತೆಗಳು ರಾಹುಲ್ ಗಾಂಧಿಯವರ ಟ್ವೀಟ್​ಗಳನ್ನಷ್ಟೇ ರೀಟ್ವೀಟ್ ಮಾಡಿದ್ದವು. ಸುಮಾರು 600 ಟ್ವಿಟರ್ ಖಾತೆಗಳಲ್ಲಿ, ಅದು ಯಾರ ಅಕೌಂಟ್ ಎಂಬ ಮಾಹಿತಿಯನ್ನು ಗೌಪ್ಯವಾಗಿಡಲಾಗಿತ್ತು. ಇದು ಬಹಿರಂಗವಾಗಿದ್ದೇ ತಡ, ಸಚಿವೆ ಸ್ಮೃತಿ ಇರಾನಿ, ಟ್ವಿಟರ್​ನಲ್ಲೇ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಬಹುಶಃ, ರಷ್ಯಾ, ಇಂಡೋನೇಷ್ಯಾ, ಕಜಕಿಸ್ತಾನಗಳಲ್ಲಿ ಚುನಾವಣೆ ಗೆಲ್ಲಲು ಯತ್ನಿಸುತ್ತಿರಬಹುದು. ಇದು ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು. ಪ್ರಸ್ತುತ ರಾಹುಲ್ ಗಾಂಧಿ ಟ್ವಿಟರ್ ಖಾತೆಯನ್ನೂ ಸೇರಿದಂತೆ, ಪಕ್ಷದ ಸೋಷಿಯಲ್ ಮೀಡಿಯಾ ನಿಭಾಯಿಸುತ್ತಿರುವ ರಮ್ಯ, ಈ ಸುದ್ದಿಗೆ ತಳಬುಡವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Latest Videos

 

click me!