ಇನ್ಮುಂದೆ ತುರ್ತು ಕರೆ ಸಂಖ್ಯೆ 108 ಬದಲು 112

Published : Feb 15, 2019, 08:26 AM IST
ಇನ್ಮುಂದೆ ತುರ್ತು ಕರೆ ಸಂಖ್ಯೆ 108 ಬದಲು 112

ಸಾರಾಂಶ

ಪೊಲೀಸ್‌ (100), ಅಗ್ನಿಶಾಮಕ (101), ಆರೋಗ್ಯ (108) ಹಾಗೂ ಮಹಿಳಾ ಸಹಾಯವಾಣಿ (1090)ಗಳ ಬೇರೆ ಬೇರೆ ಸಂಖ್ಯೆಗಳನ್ನೆಲ್ಲಾ ವಿಲೀನಗೊಳಿಸಿ ‘112’ ಎಂಬ ತುರ್ತು ಸೇವಾ ಸಂಖ್ಯೆಯನ್ನು ಭಾರತ ರೂಪಿಸಿದೆ. ಯಾವುದೇ ತುರ್ತು ಸ್ಥಿತಿಯಲ್ಲಿಯೂ ಇದೇ ಸಂಖ್ಯೆಗೆ ಕರೆ ಮಾಡಬೇಕು. 

ನವದೆಹಲಿ: ತುರ್ತು ಸಂದರ್ಭಗಳಲ್ಲಿ ನಾಗರಿಕರು ಸಹಾಯ ಬೇಡುವುದಕ್ಕೆ ಅನುವು ಮಾಡಿಕೊಡಲು ಅಮೆರಿಕ ಹೊಂದಿರುವ ‘911’ ಮಾದರಿ ಎಮರ್ಜೆನ್ಸಿ ಸೇವೆ ಭಾರತದಲ್ಲಿ ಮುಂದಿನ ವಾರ ಚಾಲನೆ ಪಡೆದುಕೊಳ್ಳಲಿದೆ. 

ಪೊಲೀಸ್‌ (100), ಅಗ್ನಿಶಾಮಕ (101), ಆರೋಗ್ಯ (108) ಹಾಗೂ ಮಹಿಳಾ ಸಹಾಯವಾಣಿ (1090)ಗಳ ಬೇರೆ ಬೇರೆ ಸಂಖ್ಯೆಗಳನ್ನೆಲ್ಲಾ ವಿಲೀನಗೊಳಿಸಿ ‘112’ ಎಂಬ ತುರ್ತು ಸೇವಾ ಸಂಖ್ಯೆಯನ್ನು ಭಾರತ ರೂಪಿಸಿದೆ. ಇದಕ್ಕೆ ದೇಶದ 14 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ ವಾರ ಚಾಲನೆ ಸಿಗಲಿದೆ.

 ಯಾವುದೇ ರೀತಿಯ ಸಂಕಷ್ಟದ ಸಂದರ್ಭದಲ್ಲಿ ನೆರವು ಬೇಕೆಂದರೆ ನಾಗರಿಕರು ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಲ್ಯಾಂಡ್‌ಲೈನ್‌ ಫೋನ್‌ನಿಂದ ಈ ಸಂಖ್ಯೆಗೆ ಡಯಲ್‌ ಮಾಡಿದರೆ ನೆರವು ಸಿಗಲಿದೆ. 

ಸ್ಮಾರ್ಟ್‌ ಫೋನ್‌ ಹೊಂದಿರುವವರು 3 ಬಾರಿ ಪವರ್‌ ಬಟನ್‌ ಒತ್ತಿದರೆ ಕರೆ ಹೋಗುತ್ತದೆ. ಇತರೆ ಫೋನ್‌ ಹೊಂದಿದವರು 5 ಅಥವಾ 9ನೇ ಸಂಖ್ಯೆಯನ್ನೇ ಹೆಚ್ಚು ಹೊತ್ತು ಒತ್ತಿ ಹಿಡಿದರೆ ಕರೆ ಕನೆಕ್ಟ್ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ
ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!