
ಬಾಗಲಕೋಟೆ(ಸೆ.2] ಬಾಗಲಕೋಟೆಯಲ್ಲಿ ಮಾತನಾಡುತ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಹುಲ್ ವಿರುದ್ಧ ನಾಲಗೆ ಹರಿ ಬಿಟ್ಟಿದ್ದಾರೆ. ವಿಧಾನಪರಿಷತ್ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯೊಬ್ಬ ಹುಚ್ಚ... ಹುಚ್ಚನ ಪಾರ್ಟಿಯಲ್ಲಿ ಹುಚ್ಚರ ಬಿಟ್ರೆ ಮತ್ಯಾರು ಇರ್ತಾರೆ..ಈಗ ರಾಹುಲ್ ಗಾಂಧಿಗೆ ಹಿಂದೂ ದೇವರ ಮೇಲೆ ಒಮ್ಮಿಂದ ಒಮ್ಮಲೇ ಭಕ್ತಿ ಬಂದಿದೆ... ಅದಕ್ಕೆ ಮಾನಸ ಸರೋವರ ಯಾತ್ರೆಗೆ ಹೋಗ್ತೀನಿ ಅಂತಿದ್ದಾರೆ ಎಂದು ವಿವಾದಿತವಾಗಿ ಮಾತನಾಡಿದ್ದಾರೆ.
ಇಷ್ಟು ದಿನ ಕಾಂಗ್ರೆಸ್ ನವರು ಬಿಜೆಪಿ ಕೋಮುವಾದಿ ಪಕ್ಷ ಅಂತಿದ್ದರು. ಈಗ ರಾಹುಲ್ ಗಾಂಧಿ ಗೆ ಹಿಂದು ದೇವರ ನೆನಪಾಗಿದೆ.. ಅತೀ ಹೆಚ್ಚು ಶಿವನ ದರ್ಶನ ಪಡೆದವ್ರು ಪ್ರಧಾನಿ ಮಾತ್ರ. ರಾಹುಲ್ ಗಾಂಧಿ ಲೋಕಸಭಾ ಅಧಿವೇಶನ ದಲ್ಲಿ ಮೋದಿಯವರನ್ನ ಅಪ್ಪಿಕೊಳ್ಳುತ್ತಾರೆ.ಆಗ ಎಲ್ಲರೂ ಗಾಬರಿಯಾಗಿ ನೋಡ್ತಾರೆ. ರಾಹುಲ್ ಗಾಂಧಿ ಕಿಸೆ ಹರಿದಿದೆ ಎಂದು ತೋರಿಸುತ್ತಾನೆ. ಐವತ್ತು ವರ್ಷ ದೇಶ ಲೂಟಿ ಹೊಡೆದವರ ಪ್ರಧಾನಿಮಂತ್ರಿ ಆಗಬೇಕಾ ಎಂದೆಲ್ಲಾ ಹಿಗ್ಗಾ ಮುಗ್ಗಾ ಪ್ರಶ್ನೆ ಮಾಡಿದ್ದಾರೆ.
ಇವರಿಗೆ ಮಹಾತ್ಮ ಗಾಂಧಿ ಸಂಬಂಧ ವೇ ಇಲ್ಲ. ಆದ್ರೆ ತಮ್ಮ ಹೆಸರು ಮುಂದೆ ಗಾಂಧಿ ಎಂದು ಇಟ್ಟುಕೊಳ್ಳುತ್ತಾರೆ. ಕುಮಾರಸ್ವಾಮಿ ಪ್ರಮಾಣ ವಚನ ಕಾರ್ಯಕ್ರಮ ಕ್ಕೆ ಮಾಯಾವತಿ, ಮುಲಾಯಂ ಸಿಂಗ್ ಯಾದವ್,ಲಾಲು ಪ್ರಸಾದ್ ಪುತ್ರ, ಅಖಿಲೇಶ್ ಯಾದವ್ ಇವರೆಲ್ಲಾ ಬಂದಿದ್ರು. ಭ್ರಷ್ಟರೆಲ್ಲಾ ಈಗ ಒಂದಾಗಿದ್ದಾರೆ. ಮೋದಿ ಭ್ರಷ್ಟ ಎಂದು ಹೇಳ್ತಿದ್ದಾರೆ. ಲಾಲು ಪ್ರಸಾದ್ ಪುತ್ರ ನಿನ್ನೆ ಮೋದಿ ಭ್ರಷ್ಟ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಲಾಲು ಪ್ರಸಾದ್ ಯಾದವ್ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ನೇನು. ಮಮತಾ ಬ್ಯಾನರ್ಜಿ ಇಂತವರನ್ನೆಲ್ಲಾ ಮುಂದುವರೆಸಿದ್ದಾರೆ.
ಬಾಂಗ್ಲಾ ವಲಸಿಗರು ಬಂದು ವೋಟ್ ಹಾಕ್ತಿದ್ದಾರೆ. ಇಟಲಿಯಿಂದ ಬಂದವರು ಆಡಳಿತ ಮಾಡ್ಬೇಕಂತಾರೆ.. 12 ಮಕ್ಕಳು ಹೆತ್ತವರು ಸಬ್ಸಿಡಿ ತಗೋತಾರೆ ಎರಡು ಹೆತ್ತವರು ಟ್ಯಾಕ್ಸ್ ತುಂಬ್ತಾರೆ ಪಕ್ಕಾ ಟ್ಯಾಕ್ಸ್ ತುಂಬೋರು ನಾವು. ಎರಡೇ ಮಕ್ಕಳು ಹೆತ್ತಬೇಕಂತಾರೆ. ನಮ್ಮದೇಶದ ಹಣೆಬರಹ ಹಿಂಗಾಗೈತಿ ಎಂದು ಮಾತನಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.