ರಾಹುಲ್ ಗಾಂಧಿ ಆಗಮನದಿಂದ ಕಾಂಗ್ರೆಸ್'ನಲ್ಲಿ ಭಾರೀ ಸಂಚಲನ: ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್!

Published : Jun 13, 2017, 09:05 AM ISTUpdated : Apr 11, 2018, 12:48 PM IST
ರಾಹುಲ್ ಗಾಂಧಿ ಆಗಮನದಿಂದ ಕಾಂಗ್ರೆಸ್'ನಲ್ಲಿ ಭಾರೀ ಸಂಚಲನ: ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್!

ಸಾರಾಂಶ

ಇನ್ನು ಮುಂದೆ ಹೆಲಿಕಾಪ್ಟರ್​'ನಲ್ಲಾಗಲಿ, ಯಾವುದೋ ಲೆಟರ್'ನಲ್ಲಾಗಲಿ ಟಿಕೆಟ್ ಬರಲ್ಲ. ಜನನಾಯಕರಿಗೆ ಮಾತ್ರ ಟಿಕೆಟ್ ಅಂತ ಹೇಳಿದ್ದಾರೆ ರಾಹುಲ್ ಗಾಂಧಿ. ಈ ಮೂಲಕ ಹಾಲಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಸುಖಾ-ಸುಮ್ಮನೆ ಟಿಕೆಟ್ ಕೊಡಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ರವಾನೆ ಮಾಡಿದ್ದಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎನ್ನುವುದರ ಮೂಲಕ ಸಿದ್ದರಾಮಯ್ಯಗೂ ಟಾಂಗ್ ನೀಡಿದ್ದಾರೆ.

ಬೆಂಗಳೂರು(ಜೂ.13): ಇನ್ನು ಮುಂದೆ ಹೆಲಿಕಾಪ್ಟರ್​'ನಲ್ಲಾಗಲಿ, ಯಾವುದೋ ಲೆಟರ್'ನಲ್ಲಾಗಲಿ ಟಿಕೆಟ್ ಬರಲ್ಲ. ಜನನಾಯಕರಿಗೆ ಮಾತ್ರ ಟಿಕೆಟ್ ಅಂತ ಹೇಳಿದ್ದಾರೆ ರಾಹುಲ್ ಗಾಂಧಿ. ಈ ಮೂಲಕ ಹಾಲಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಸುಖಾ-ಸುಮ್ಮನೆ ಟಿಕೆಟ್ ಕೊಡಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ರವಾನೆ ಮಾಡಿದ್ದಾರೆ. ಮುಂದಿನ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎನ್ನುವುದರ ಮೂಲಕ ಸಿದ್ದರಾಮಯ್ಯಗೂ ಟಾಂಗ್ ನೀಡಿದ್ದಾರೆ.

2018ರ ಚುನಾವಣೆಗೆ ಸನ್ನದ್ಧರಾಗುವಂತೆ ಕಾರ್ಯಕರ್ತರಿಗೆ ರಾಹುಲ್ ಕರೆ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಪಕ್ಷದ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸರ್ವ ಸದಸ್ಯರ ಸಭೆಯ ವೇದಿಕೆಯಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷರು ಸೇರಿ ಕೆಲವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವೇಳೆ, ಮಾತನಾಡಿದ ರಾಹುಲ್ ಗಾಂಧಿ, ಇನ್ನೂ ಮುಂದೆ ಹೆಲಿಕಾಪ್ಟರ್ ನಲ್ಲಾಗಲಿ, ಯಾವುದೋ ಪತ್ರದಲ್ಲಾಗಿ ಟಿಕೆಟ್ ಬರಲ್ಲ. ಬದಲಾಗಿ ಯಾರು  ಜನನಾಯಕರಿದ್ದಾರೋ ಅಂತವರಿಗೆ ಮಾತ್ರ ಟಿಕೆಟ್ ನೀಡೋದಾಗಿ ಹೇಳಿದರು. ಈ ಮೂಲಕ ಹಾಲಿ ಶಾಸಕರಿಗೆ ಮತ್ತು  ಟಿಕೆಟ್ ಆಕಾಂಕ್ಷಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದರು.

ಇದಕ್ಕೂ ಮೊದಲು ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀಲಾಂಚ್ ಕಾರ್ಯಕ್ರಮ ನಡೆಯಿತು. ಪತ್ರಿಕೆಯನ್ನು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ರೀಲಾಂಚ್ ಮಾಡಿದರು. ಈ ಸಮಾರಂಭದಲ್ಲಿ ಎಐಸಿಸಿ ಉಪಾಧ್ಯಕ್ಷರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಸತ್ಯದ ಶಕ್ತಿಯನ್ನು ಹೊಸಕಿ ಹಾಕಲು ಅಧಿಕಾರದ ಶಕ್ತಿ ಪ್ರಯತ್ನಿಸುತ್ತಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಒಟ್ಟಾರೆ, ರಾಹುಲ್​ ಗಾಂಧಿ ಮುಂದಿನ ಲೋಕಸಭಾ ಚುನಾವಣೆಗೂ ಕರ್ನಾಟಕವೇ ಕೇಂದ್ರ ಸ್ಥಾನವಾಗಲಿದೆ ಎಂಬ ಸೂಚನೆಯನ್ನ ಈ ಮೂಲಕ ರವಾನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?