
ನವದೆಹಲಿ (ಡಿ.04): ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು ರಾಹುಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದುಅವಿರೋಧ ಆಯ್ಕೆಯಾಗುವುದು ನಿಚ್ಚಳವಾಗಿದೆ. ಡಿಸೆಂಬರ್ 11ಕ್ಕೆ ಅಧಿಕೃತ ಘೋಷಣೆ ಹೊರ ಬೀಳಲಿದೆ.
2013ರಲ್ಲಿ ಕರ್ನಾಟಕ ಮತ್ತು 2017ರಲ್ಲಿ ಪಂಜಾಬ್ ರಾಜ್ಯದ ಚುನಾವಣೆ ಬಿಟ್ಟರೆ ಕಳೆದ 4 ವರ್ಷಗಳಲ್ಲಿ ಕಾಂಗ್ರೆಸ್ ಪಡೆದಿದ್ದಕ್ಕಿಂತ ಕಳೆದು ಕೊಂಡಿದ್ದೆ ಹೆಚ್ಚ್ಚು.ಇತಿಹಾಸದಲ್ಲಿಯೇ ಲೋಕಸಭೆಯಲ್ಲಿ ಅತ್ಯಂತ ಕಡಿಮೆ ಎಂದರೆ 44 ಸಂಸದರನ್ನು ಮಾತ್ರ ಕಾಂಗ್ರೆಸ್ ಹೊಂದಿದ್ದು ಸ್ವಂತ ಬಲದ ಮೇಲೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿ ಹೆಸರೇ ಇಲ್ಲದಿದ್ದ ಹರಿಯಾಣ, ಅಸ್ಸಾಂ, ಜಾರ್ಖಂಡ್ ಮಣಿಪುರದಂಥ ರಾಜ್ಯಗಳಲ್ಲಿ ಕೂಡ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಏರಿದ್ದು ಕಾಂಗ್ರೆಸ್ ನಿಧಾನವಾಗಿ ಒಳಗಿನಿಂದಲೇ ದುರ್ಬಲವಾಗುತ್ತಾ ಸಾಗಿದೆ. ಮೋದಿ ಅಲೆ ಎದುರು ಮಂಕಾಗಿ ಹೋಗಿದೆ. ಅಧ್ಯಕ್ಷರಾಗಿ ಅಧಿಕಾರ ಹಿಡಿಯುತ್ತಿರುವ ಯುವ ರಾಹುಲ್ ಗಾಂಧಿ ಮರಳಿ ಕಾಂಗ್ರೆಸ್ ಗೆ ಇತಿಹಾಸದ ವೈಭವ ತಂದು ಕೊಡುತ್ತಾರಾ ಅನ್ನೋದು ಕುತೂಹಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.