‘ನನ್ನ ಮೇಲೆ ಶೂ ಎಸೆದಿದ್ದು ಬಿಜೆಪಿಯವರು' ರಾಹುಲ್ ಗಾಂಧಿ

By Internet DeskFirst Published Sep 27, 2016, 10:17 AM IST
Highlights

ಸೀತಾಪುರ(ಸೆ.27): ಬಿಜೆಪಿ ಮತ್ತು ಆರ್'ಎಸ್ಎಸ್ ಕಡೆಯ ಜನರೇ ನನ್ನ ಮೇಲೆ ದಾಳಿ ಮಾಡಿದ್ದು, ಈ ರೀತಿಯ ದಾಳಿಗಳಿಗೆ ನಾನು ಹೆದರುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 

ಉತ್ತರಪ್ರದೇಶದ ಸೀತಾಪುರದಲ್ಲಿ ರಾಹುಲ್ ಗಾಂಧಿಯವರು ಕಿಸಾನ್ ಯಾತ್ರೆಯನ್ನು ಆರಂಭಿಸಿದ್ದರು. ತೆರೆದ ವಾಹನವೊಂದರಲ್ಲಿ ರಾಹುಲ್ ಪ್ರಯಾಣಿಸುತ್ತಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ರಾಹುಲ್ ಮೇಲೆ ಶೂವನ್ನು ಎಸೆದಿದ್ದ. 

Latest Videos

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಹುಲ್, ನಾನು ತೆರೆದ ವಾಹನದಲ್ಲಿ ಚಲಿಸುತ್ತಿದ್ದೆ. ಈ ವೇಳೆ ಶೂವೊಂದನ್ನು ನನ್ನ ಮೇಲೆ ಎಸೆಯಲಾಯಿತು. ಆದರೆ, ಅದು ನನ್ನ ಮೇಲೆ ಬೀಳಲಿಲ್ಲ. ಬಿಜೆಪಿ ಹಾಗೂ ಆರ್'ಎಸ್ಎಸ್ ಕಡೆಯ ಜನರೇ ನನ್ನ ಮೇಲೆ ದಾಳಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. 


 

click me!